ಮರಳಿ ಬಂದಿವುದು ದೀಪಾವಳಿ
ಹಚ್ಚಲೆಂದು ಮನೆ ಮಂದಿಯೆಲ್ಲ ದೀಪ
ಚೆಲ್ಲಲಿ ದೀಪದ ಬೆಳಕು ಎಲ್ಲರ ಬಾಳಲ್ಲಿ
ತರಲಿ ಇದು ಹರುಷವ ಎಲ್ಲರ ಮನದಲ್ಲಿ
ಬೆಳಕಾಗಲಿ ಜಗವೆಲ್ಲ ಬೆಳಗಲಿ ಬದುಕೆಲ್ಲ
ಹಚ್ಚೋಣ ದೀಪ ಕಳೆದುಕೊಳ್ಳೋಣ ಪಾಪ
ಉರಿಯಲಿ ದೀಪ ಸದಾ ಎಲ್ಲ ಮನೆಗಳಲ್ಲಿ
ಇದು ಕತ್ತಲೆ ಹೊಡೆದೊಡಿಸೋ ದೀಪ
ಬೆಳಕು ಚೆಲ್ಲಿ ದಾರಿ ತೋರಿಸೋ ದೀಪ
ಮನಸೆಂಬ ದೀಪಕ್ಕೆ ಒಲವೆಂಬ ಎಣ್ಣೆಯನು ಎರೆಯೋಣ
ಪ್ರೀತಿಯಿಂದ ಮನಸಿನ ದೀಪವನು ಹಚ್ಚೋಣ
ದೀಪಾವಳಿಯ ಶುಭಾಶಯ ಹೇಳುತ ಪ್ರೀತಿಯನು ಹಂಚೋಣ
-Vರ ( Venkatesha ರಂಗಯ್ಯ )
"ಎಲ್ಲರಿಗು ದೀಪಾವಳಿ ಹಬ್ಬದ ಶುಭಾಶಯಗಳು "
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!