ನನ್ನ ಕವಿತೆಗೆ ಸ್ಫೂರ್ತಿ ಏನಾದರು ಆಗಬಹುದು 
ಗೆಳತಿ, ನೀ ಎನ್ನ ಸ್ಪೂರ್ತಿಯಾಗಬಹುದು 

ನಿನ್ನ ಹೊಳೆಯುವ ಕಂಗಳೆ ಸ್ಪೂರ್ತಿಯಾಗಬಹುದು 
ಎರಡೂವರೆ ದಶಕದಿಂದ ನನ್ನ ಮುತ್ತಿಗಾಗಿ ಕಾಯುತ್ತಿರುವ ನಿನ್ನ ಕೆನ್ನೆಗಳು ಸ್ಪೂರ್ತಿಯಾಗಬಹುದು 
ಕೆನ್ನೆಗೆ ಮೊದಲು ಮುತ್ತು ಕೊಟ್ಟರೆ ಸುಮ್ಮನಿರೊಲ್ಲ ಎಂದು ಗದರಿಸುವ ನಿನ್ನ ತುಟಿಗಳು ಸ್ಪೂರ್ತಿಯಾಗಬಹುದು 

ನಿನ್ನ ಮೋಹಕ ನಡೆ ಸ್ಪೂರ್ತಿಯಾಗಬಹುದು 
ನಿನ್ನ ಭಾವುಕ ನುಡಿ ಸ್ಪೂರ್ತಿಯಾಗಬಹುದು 
ನಿನ್ನೊಡನೆ ಕಳೆಯುವ ಪ್ರತಿ ಕ್ಷಣ ಕವಿತೆಯಾಗಬಹುದು 
ಕನ್ನೋಟಗಳು ಬೆರೆತಾಗ ಮೌನ ಕಾವ್ಯಸುಧೆಯಾಗಿ ಹರಿಯಬಹುದು 

ನಿನ್ನ ಸ್ಪರ್ಶದ ರೋಮಾಂಚನ ಪಲ್ಲವಿಯಾಗಬಹುದು 
ನಿನ್ನ ಕನಸುಗಳು ನವೀನ ಚರಣಗಳಾಗಬಹುದು
ನೀ ನನ್ನ ಕರೆಯುವ ಹೆಸರು ಕವಿತೆಯ ಶೀರ್ಷಿಕೆಯಾಗಬಹುದು
ಸುಂದರ ಚೆಲುವೆ ನನ್ನೊಡನೆ ಇರುವಾಗ ಮುಂದಿನ ಜನ್ಮದಲ್ಲೂ ನಾ ಕವಿಯಾಗಬಹುದು 

- Vರ ( Venkatesha ರಂಗಯ್ಯ )