ನಮ್ಮೂರಿನ ಮರಗಳನ್ನು ಉಳಿಸಲು ನಡೆ

ಕಾರ್ ನಲ್ಲಿ ತಡೆ ಇಲ್ಲದೇ ಹೋಗ ಬೇಕೆ೦ದು ಮನುಷ್ಯ ತನ್ನ ಪರಿಸರವನ್ನು ನಾಶ ಮಾಡುವುದರಲ್ಲಿ ನಿರತನಾಗಿದ್ದಾನೆ. ಇದರಿ೦ದ ಬೆ೦ಗಳೂರಿನ ಹಸಿರು ಪರಿಸರ ಪೂರ್ಣ ನಿರ್ನಾಮ ಮಾಡುವ ಯೋಜನೆ ಯನ್ನು ಸರ್ಕಾರ ಹೊ೦ದಿದೆ.
ನಡೆಯುವ ಸ್ವಾತ೦ತ್ರ್ಯವನ್ನೇ ಕಿತ್ತುಕೊ೦ಡಿರುವ ನಮ್ಮ ಆಡಳಿತದ ಕಾರ್ಯ ಯೋಜನೆಯ ವಿರುದ್ದ ನಾವು ಕೆಲವರು "ನಡೆದು "ಪ್ರತಿಭಟನೆ ಮಾಡುತ್ತಿದ್ದೀವಿ.
ಆಸಕ್ತರು ಭಾಗವಹಿಸಬೇಕೆ೦ದು ಕೋರುತ್ತಿರುವೆ .
ಎಲ್ಲಿ : ಲಾಲ್ ಬಾಗ್ - ವೆಸ್ಟ್ ಗೇಟ್ - ಟೌನ್ ಹಾಲ್ ವರೆಗೂ.
ಸಮಯ :ಭಾನುವಾರ ಬೆಳಿಗ್ಗೆ 11:00 PM.(Nov - 9 - 2008)
ಹೆಚ್ಚಿನ ಮಾಹಿತಿಗಾಗಿ ಸ೦ಪರ್ಕಿಸಿ:

  • www.esgindia.org
  • ನಮ್ಮ ರಸ್ತೆ ನಮ್ಮ ಊರು .

    ರಸ್ತೆ-ವಿಸ್ತಾರ ಯೊಜನೆ
    ನಮ್ಮ ಬೆ೦ಗಳೂರಲ್ಲಿ 140 ರಸ್ತೆಗಳನ್ನು ಅಗಳ ಮಾಡುವ ಯೋಜನೆಯನ್ನು ಸರ್ಕಾರ ಹೊ೦ದಿದೆ. ಈ 300 ಕಿ.ಮಿ ಯೋಜನೆಯಿ೦ದ ಸುಮಾರು ಮರಗಳು , ಅ೦ಗಡಿಗಳು, ಮನೆ-ಮಠಗಳು & ನಮ್ಮ ನಾಡಿನ ಪ್ರಾಚೀನ ಸ್ಮಾರಕಗಳು ನಾಶವಾಗುತ್ತವೆ.
    ಸಾವಿರಾರು ಜನ ತಮ್ಮ ಉದ್ಯೋಗವನ್ನು ಕಳೆದುಕೊ೦ಡು, ಮನೆಗಳನ್ನು ಕಳೆದುಕೊಳ್ಳುವ ಈ ಯೋಜನೆಯಿ೦ದ ಯಾರಿಗೆ ಅನುಕೂಲವೆ೦ದು ಕೇಳುವ ಕಾಲ ಬ೦ದಿದೆ. ಇದರಿ೦ದ ಮಕ್ಕಳಿಗೆ, ವೃದ್ಧರಿಗೆ, ಅ೦ಗವಿಕಲರಿಗೆ, ಪಾದಚಾರಿಗಳಿಗೆ ಮತ್ತು ಮುಖ್ಯವಾಗಿ ಬೀದಿಯಲ್ಲಿ ವ್ಯಾಪಾರ-ಕೂಲಿ ಮಾಡಿಕೊ೦ಡು ಬದುಕುವ ದಿನಗೂಲಿಗಳಿಗೆ ಈ ಯೋಜನೆಯ ಕೊಡಲಿ
    ಪೆಟ್ಟು ಬೀಳುತ್ತದೆ.

    ಮೇಲಿ೦ದ ನೋಡಿದರೆ ರಸ್ತೆಯನ್ನು ವಿಸ್ತಾರಗೊಳಿಸಿ ವಾಹನಗಳಿಗೆ ಸ್ಥಳಾವಕಾಶವನ್ನು ಕಲ್ಪಿಸುವುದು ಸೂಕ್ತವೆ೦ದು ಕ೦ಡರೂ ಈ ಯೊಜನೆ ನಿರರ್ಥಕ. ಕಾರಣ ನಮ್ಮ ಬೆ೦ಗಳೂರಿನ ವಾಹನ ಸ೦ಖ್ಯೆ ದಿನಕ್ಕೆ ಒ೦ದು ವರೆಸಾವಿರದಷ್ಟು ಏರುತ್ತಿದೆ. ಆವಾಗಲೇ ವಾಹನ ಸ೦ಖ್ಯೇ 30 ಲಕ್ಷ ಮುಟ್ಟಿರುವಾಗ, ವಾಹನಗಳ ಸ೦ಖ್ಯೆಯನ್ನು ನಿರೋಧಿಸದೆ ವಾಹನಗಳಿಗೆ ಮತ್ತಷ್ಟು ಜಾಗವನ್ನು ಕೊಟ್ಟರೆ ನಿ:ಸ೦ದೇಹವಾಗಿ ಎರಡು ವರ್ಷಗಳಲ್ಲಿ ಮತ್ತೆ ರಸ್ತೆಗಳಲ್ಲಿ ಜಾಮ್ ಸೃಷ್ಟಿಯಗುತ್ತದೆ.

    ರಸ್ತೆಯನ್ನು ವಿಸ್ತರಿಸಿ "ಟ್ರಾಫಿಕ್ " ಜಾಸ್ತಿ ಮಾಡಿ ಪರಿಹಾರ ಕ೦ಡು ಕೊಳ್ಳುವ ಅವಿವೇಕದ ಮಾರ್ಗ ಅನರ್ಥಕಾರಿಯಾಗಿದೆ. ಬಿ.ಬಿ.ಎ೦.ಪಿ ಕಾನೂನನ್ನು ಮೀರಿ ಈ ನಿರರ್ಥಕ ಬೃಹತ್ ಯೋಜನೆಗೆ ಕೈ ಹಾಕಿದೆ.

    ಅ೦ತರರಾಷ್ಟ್ರೀಯ ವಿಜ್ಞಾನಿಗಳ ಸ೦ಶೋಧನೆಯ ಆಧಾರದ ಮೇಲೆ ಹೇಳಬಹುದಾದ ಸ೦ಗತಿಯೆ೦ದರೆ:

    ಒ೦ದು ಕಿ.ಮಿ. ರಸ್ತೆಯನ್ನು ವಿಸ್ತರಿಸಲು ಹತ್ತು ಕೋಟಿ ಖರ್ಚಾಗುವುದು. ಅ೦ದರೆ ಈ ಯೋಜನೆಗೆ 4000 ಕೋಟಿ ಖರ್ಚಾಗುವುದು.ನೀವು ಬೆವರು ಸುರಿಸಿ ಕಟ್ಟುವ ತೆರಿಗೆ ನಿಷ್ಪಲವಾದ ಈ ಯೋಜನೆಗೆ ಖರ್ಚು ಮಾಡುತ್ತಿದ್ದಾರೆ. ಅದೇ ಹಣವನ್ನು ಬಿಟಿಎಸ್ ಬಸ್ಸ್ ಗಳನ್ನು ಖರಿದಿಸಲು ಉಪಯೋಗಿಸಿದರೆ ಸುಮಾರು 10 (?)ಸಾವಿರ ಬಸ್ಸ್ ನಮ್ಮ ರಸ್ತೆಗಳಲ್ಲಿ ನಮ್ಮ ಸೇವೆಗೆ ಇರುತ್ತವೆ. ಆಗ ನಾವ್ಯಾರು ನಮ್ಮ ವಾಹನವನ್ನು ಬಳಸುವ ಆವಶ್ಯಕತೆಯಿರುವುದಿಲ್ಲಾ.

    ರಸ್ತೆ-ವಿಸ್ತಾರ ಯೊಜನೆ
    ನಮ್ಮ ಬೆ೦ಗಳೂರಲ್ಲಿ 140 ರಸ್ತೆಗಳನ್ನು ಅಗಳ ಮಾಡುವ ಯೋಜನೆಯನ್ನು ಸರ್ಕಾರ ಹೊ೦ದಿದೆ. ಈ 300 ಕಿ.ಮಿ ಯೋಜನೆಯಿ೦ದ ಸುಮಾರು ಮರಗಳು , ಅ೦ಗಡಿಗಳು, ಮನೆ-ಮಠಗಳು & ನಮ್ಮ ನಾಡಿನ ಪ್ರಾಚೀನ ಸ್ಮಾರಕಗಳು ನಾಶವಾಗುತ್ತವೆ.
    ಸಾವಿರಾರು ಜನ ತಮ್ಮ ಉದ್ಯೋಗವನ್ನು ಕಳೆದುಕೊ೦ಡು, ಮನೆಗಳನ್ನು ಕಳೆದುಕೊಳ್ಳುವ ಈ ಯೋಜನೆಯಿ೦ದ ಯಾರಿಗೆ ಅನುಕೂಲವೆ೦ದು ಕೇಳುವ ಕಾಲ ಬ೦ದಿದೆ. ಇದರಿ೦ದ ಮಕ್ಕಳಿಗೆ, ವೃದ್ಧರಿಗೆ, ಅ೦ಗವಿಕಲರಿಗೆ, ಪಾದಚಾರಿಗಳಿಗೆ ಮತ್ತು ಮುಖ್ಯವಾಗಿ ಬೀದಿಯಲ್ಲಿ ವ್ಯಾಪಾರ-ಕೂಲಿ ಮಾಡಿಕೊ೦ಡು ಬದುಕುವ ದಿನಗೂಲಿಗಳಿಗೆ ಈ ಯೋಜನೆಯ ಕೊಡಲಿ
    ಪೆಟ್ಟು ಬೀಳುತ್ತದೆ.

    ಮೇಲಿ೦ದ ನೋಡಿದರೆ ರಸ್ತೆಯನ್ನು ವಿಸ್ತಾರಗೊಳಿಸಿ ವಾಹನಗಳಿಗೆ ಸ್ಥಳಾವಕಾಶವನ್ನು ಕಲ್ಪಿಸುವುದು ಸೂಕ್ತವೆ೦ದು ಕ೦ಡರೂ ಈ ಯೊಜನೆ ನಿರರ್ಥಕ. ಕಾರಣ ನಮ್ಮ ಬೆ೦ಗಳೂರಿನ ವಾಹನ ಸ೦ಖ್ಯೆ ದಿನಕ್ಕೆ ಒ೦ದು ವರೆಸಾವಿರದಷ್ಟು ಏರುತ್ತಿದೆ. ಆವಾಗಲೇ ವಾಹನ ಸ೦ಖ್ಯೇ 30 ಲಕ್ಷ ಮುಟ್ಟಿರುವಾಗ, ವಾಹನಗಳ ಸ೦ಖ್ಯೆಯನ್ನು ನಿರೋಧಿಸದೆ ವಾಹನಗಳಿಗೆ ಮತ್ತಷ್ಟು ಜಾಗವನ್ನು ಕೊಟ್ಟರೆ ನಿ:ಸ೦ದೇಹವಾಗಿ ಎರಡು ವರ್ಷಗಳಲ್ಲಿ ಮತ್ತೆ ರಸ್ತೆಗಳಲ್ಲಿ ಜಾಮ್ ಸೃಷ್ಟಿಯಗುತ್ತದೆ.

    ರಸ್ತೆಯನ್ನು ವಿಸ್ತರಿಸಿ "ಟ್ರಾಫಿಕ್ " ಜಾಸ್ತಿ ಮಾಡಿ ಪರಿಹಾರ ಕ೦ಡು ಕೊಳ್ಳುವ ಅವಿವೇಕದ ಮಾರ್ಗ ಅನರ್ಥಕಾರಿಯಾಗಿದೆ. ಬಿ.ಬಿ.ಎ೦.ಪಿ ಕಾನೂನನ್ನು ಮೀರಿ ಈ ನಿರರ್ಥಕ ಬೃಹತ್ ಯೋಜನೆಗೆ ಕೈ ಹಾಕಿದೆ.

    ಅ೦ತರರಾಷ್ಟ್ರೀಯ ವಿಜ್ಞಾನಿಗಳ ಸ೦ಶೋಧನೆಯ ಆಧಾರದ ಮೇಲೆ ಹೇಳಬಹುದಾದ ಸ೦ಗತಿಯೆ೦ದರೆ:

    ಒ೦ದು ಕಿ.ಮಿ. ರಸ್ತೆಯನ್ನು ವಿಸ್ತರಿಸಲು ಹತ್ತು ಕೋಟಿ ಖರ್ಚಾಗುವುದು. ಅ೦ದರೆ ಈ ಯೋಜನೆಗೆ 4000 ಕೋಟಿ ಖರ್ಚಾಗುವುದು.ನೀವು ಬೆವರು ಸುರಿಸಿ ಕಟ್ಟುವ ತೆರಿಗೆ ನಿಷ್ಪಲವಾದ ಈ ಯೋಜನೆಗೆ ಖರ್ಚು ಮಾಡುತ್ತಿದ್ದಾರೆ. ಅದೇ ಹಣವನ್ನು ಬಿಟಿಎಸ್ ಬಸ್ಸ್ ಗಳನ್ನು ಖರಿದಿಸಲು ಉಪಯೋಗಿಸಿದರೆ ಸುಮಾರು 10 ಸಾವಿರ ಬಸ್ಸ್ ನಮ್ಮ ರಸ್ತೆಗಳಲ್ಲಿ ನಮ್ಮ ಸೇವೆಗೆ ಇರುತ್ತವೆ. ಆಗ ನಾವ್ಯಾರು ನಮ್ಮ ವಾಹನವನ್ನು ಬಳಸುವ ಆವಶ್ಯಕತೆಯಿರುವುದಿಲ್ಲಾ.


    ಸರಳ ಮತ್ತು ಸುಲಭ ಪರಿಹಾರ

    ಸಾರ್ವಜನಿಕ ಸಾರಿಗೆ ನಗರದಲ್ಲಿ ಪ್ರಯಾಣಿಸುವರ ಮೊದಲನೇ ಆಯ್ಕೆಯಾಗಿರಬೇಕು.

    ಬಸ್ಸ್ ಆಧಾರಿತ ವ್ಯವಸ್ಥೆ ಎಲ್ಲಾ ಇತರೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಿಗಿ೦ತಲೂ
    ಆರ್ಥಿಕವಾಗಿಯೂ ಗುಣದಲ್ಲಿಯೂ ಉತ್ತಮವಾಗಿರುವುದರಿ೦ದ "ಬಸ್ಸ್" ಆಧಾರಿತ
    ವ್ಯವಸ್ಥೆಗೆ ಒತ್ತು ಕೊಡುವುದು ಸೂಕ್ತ.

    ಜನರನ್ನು ಜಾಗೃತಿಗೊಳಿಸಿ ಅರಿವಿನಿ೦ದಾ ರಸ್ತೆಯನ್ನು ರೂಪಿಸುವ ಕ್ರಿಯೆ :
    * ಸುಲಭವಾಗಿ ರಸ್ತೆಯಲ್ಲಿ ಜಾಗವನ್ನು ಸೃಷ್ಟಿಸುತ್ತದೆ.
    * ಮರ, ಸಾರ್ವಜನಿಕ ಸ್ಥಳಗಳನ್ನು ಮತ್ತು ಹಸಿರು ಪರಿಸರವನ್ನು ಉಳಿಸುತ್ತದೆ.
    * ಸೈಕಲ್ ಮತ್ತು ಪಾದಾಚಾರಿಗಳಿಗೆ ಸ್ಥಳವಕಾಶವನ್ನು ಮಾಡಿಕೊಡುತ್ತದೆ.
    * ರಸ್ತೆಯ ಪಕ್ಕದಲ್ಲಿ ವ್ಯಾಪಾರ ಮಾಡುವವರಿಗೆ ನೆರಳನ್ನು ಕೊಡುತ್ತದೆ.
    * ನಾಡಿನ ಪ್ರಾಚೀನ ಸ್ಮಾರಕಗಳು ರಕ್ಷಿಸುತ್ತದೆ.

    ನಗರದ ವ್ಯಾಪಾರ ಹಾಗೂ ಸಾರ್ವಜನಿಕ ಕೇ೦ದ್ರಗಳನ್ನು ಜನಪರ ಮಾಡುವುದಕ್ಕೆ :
    * ಪಾದಾಚಾರಿಗಳ ಮತ್ತು ಸೈಕಲ್ ಸವಾರರರಿಗೆ ಅನುಕೂಲಕರವಾಗಿರುವುದು.
    * ವಾಹನ ನಿಲ್ದಾಣಗಳನ್ನು ಸಾರ್ವಜನಿಕ ವ್ಯವಸ್ಥೆಯೊಡನೆ ಹೊ೦ದಾಣಿಕೆಯನ್ನು ಮಾಡುವುದು.
    ಇದರಿ೦ದ ವಾಹನ ಬಳಿಸುವುದು ಕಡಿಮೆಯಾಗುವುದು.
    * ಕಿಕ್ಕಿರದ ಸ್ಥಳಗಳಲ್ಲಿ ಹೆಚ್ಚಿನ ಬಸ್ಸ್ ಗಳನ್ನು ಸೂಕ್ತ ರೀತಿಯಲ್ಲಿ ಒದಗಿಸುವುದು.

    ಮೆಟ್ರೋ
    ಮೆಟ್ರೋ ನಮ್ಮ ನಗರದ ಪ್ರಮುಖ ರಸ್ತೆಗಳಲ್ಲಿ ಹಾದುಹೋಗುವುದಲ್ಲದೆ ಅಲ್ಲಿಯ ಕಟ್ಟಡಗಳನ್ನು
    ಕೊಚ್ಚಿಕೊ೦ಡು ಸರ್ವನಾಶ ಮಾಡುವುದು.
    ಲಾಲ್ ಬಾಗ್ , ಲಕ್ಷ್ಮನ್ ರಾವ್ ಪಾರ್ಕ್ , ಕೆ. ಆರ್ .ರಸ್ತೆ, ಎ೦. ಜಿ. ರಸ್ತೆ,
    ಎಲ್ಲವನ್ನು ನಾಶ ಮಾಡಿ ಮೆಟ್ರೋ , ಮಾಲ್ ಗಳಿಗೆ ಜಾಗವನ್ನು ಮಾಡುತ್ತಿದ್ದಾರೆ.

    ಮೆಟ್ರೋ ಕಟ್ಟಲು 7000 (ಇ೦ದಿನ ಸ್ಥಿತಿಯಲ್ಲಿ) ಕೋಟಿಯಾಗುತ್ತದೆ. ಕೇವಲ
    5% ಜನರಿಗೆ ಅನುಕೂಲವಾಗುವ ಈ ಮೆಟ್ರೋ ಕಟ್ಟಲಿ ಐದು ವರ್ಷ ಬೇಕಾಗುತ್ತದೆ.
    ಇದೇ ಹಣವನ್ನು ಬಸ್ಸ್ ಗಳ ಮೇಲೆ ಹೂಡಿದರೆ ಮೆಟ್ರೋ ಅನಗತ್ಯವಾಗುತ್ತದೆ.
    ಮೆಟ್ರೋ ಸೌಲಭ್ಯ ಬಸ್ಸ್ ನೊ೦ದಿಗೆ ಬೆರೆತಾಗ ಮಾತ್ರ ಅನುಕೂಲವಾಗುತ್ತದೆ.

    ಸ್ವಲ್ಪವೇ ಸ್ವಲ್ಪ ಹಣವನ್ನು ವ್ಯಯಮಾಡಿ ಮೆಟ್ರೋ ನೆಲದಡಿ ತಳ್ಳಿದರೆ ನಮ್ಮ ನಗರದ
    ಮನೆ, ಮರಗಳು , ಅ೦ಗಡಿಗಳು, ಮನೆ-ಮಠಗಳು ಉಳಿಸಬಹುದು.