ಜಗದೊಳಿರುವ ಒಲವನೆಲ್ಲ
ಕಣ್ಣಿನಲ್ಲಿ ತುಂಬಿದೆ
ಪ್ರೀತಿಯೊಂದು ಅದ್ಬುತ
ಪ್ರೀತಿಯೊಂದೆ ಅಮೃತ
ಕೊಡುವೆನೊಂದು ಕಾಣಿಕೆ
ಇಲ್ಲವದಕೆ ಹೋಲಿಕೆ
ಒಲವೆ ಭಾವ ಚಂದ್ರಿಕೆ
ತೊರೆದು ಹೋದೆ ಏತಕೆ
ಕೊಂಡು ಹೋಗೆ ಕಾನೇಕೆ
ನನ್ನ ಪುಟ್ಟ ಬಾಲಿಕೆ
ಜಗದ ಜೀವದಾತಕೆ
ಬೆಚ್ಚಿ ಬಿದ್ದೆ ಏತಕೆ
ದೇವ ಮೆಚ್ಚಿ ನಿನ್ನನೆ
ಕರೆದು ಕೊಂಡ ಸುಮ್ಮನೆ
ಹೊಳೆವ ಕಣ್ಣು ಮುಚ್ಚಿದೆ
ಚಿತ್ರ ಸ್ವಪ್ನ ಸತ್ತಿದೆ
ಭಾವದೂಟೆ ಬತ್ತಿದೆ
ಆತ್ಮವೊಂದು ಅತ್ತಿದೆ
ನಗುವ ತುಟಿಯು ಮುಚ್ಚಿದೆ
ಬೆಳ್ದಿಂಗಳು ಬಾಡಿದೆ
ಕಾಯುವೆನು ನಿನ್ನನೆ
ಮಾತನಾಡು ಸುಮ್ಮನೆ
ಬಾರೆನ್ನ ಚಿತ್ರವೇ
ನನ್ನ ಜೀವದಾತ್ಮವೇ
ಈ ಕವನ ನನ್ನ ಊರಿನಲ್ಲಿ ನಾ ಕಂಡ ಮಗುವಿನ ಮುದ್ದು ಮುಖದ ಶವಕೆ ಅಶ್ರು ತರ್ಪಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!