ಶರಾಬು

ಶರಾಬು ದೇಶದ ಜನರನ್ನು ನಿರ್ಗತಿಕರನ್ನಾಗಿ ಮಾಡುತ್ತಿರುವ ರಾಕ್ಷಸ.

ಬನ್ನಿ, ಎಲ್ಲರೂ ಸೇರಿ ಒಂದೊಂದು ಬಾಟಲಿ ಕುಡಿದು ಎಲ್ಲವನ್ನು ಖಾಲಿ ಮಾಡೋಣ!!!


ವಿಚಿತ್ರ

ಗಂಡ ಕುಡಿದ ಅಮಲಿನಲ್ಲಿ ಹೆಂಡತಿಯ ಹತ್ತಿರ ಬಂದು ಹೇಳಿದ:

'ಲೇ, ಇವತ್ತು ಒಂದು ಭಾರಿ ವಾಹನ ನನ್ನ ಮೇಲೆ ಹರಿದ್ರು ನಾನು ಸಾಯಲಿಲ್ಲ ಕಣೇ'

'ಇದು ವಿಚಿತ್ರಾನೇ. ಅದಿರಲಿ ನಿಮ್ಮ ಮೇಲೆ ಹರಿದ ವಾಹನ ವಾದರೂ ಯಾವುದು.?' ಹೆಂಡತಿ ಕೇಳಿದಳು.


'AEROPLANE' ಕಣೇ !!!!!

ಬ್ರ್ಯಾಂಡಿ

ಸ್ನೇಹಿತ : ಬ್ರ್ಯಾಂಡಿ ಕುಡಿದ್ರೆ ಕೆಮ್ಮು ಹೋಗುತ್ತಾ?

ಗುಂಡ : ನನ್ನ ಹೊಲ, ಮನೆನೇ ಹೋಗಿರುವಾಗ ನಿನ್ನ ಕೆಮ್ಮು ಯಾಕೆ ಹೋಗಲ್ಲಾ!!!


ಗುಂಡ ಮ್ಯಾರೀಡ್

ಕುಡುಕನೊಬ್ಬ ಬಾರಿಗೆ ಹೋದ. ಪಕ್ಕದ ಟೇಬಲ್‍ನಲ್ಲಿದ್ದವ ವೇಟರ್‌ಗೆ 'ಜಾನಿ ವಾಕರ್ ಸಿಂಗಲ್' ಎಂದ.

ಮುಂದಿನ ಟೇಬಲ್‍ನಲ್ಲಿ ಕೂತಿದ್ದ ಮತೊಬ್ಬ 'ಪೀಟರ್ ಸ್ಕಾಚ್ ಸಿಂಗಲ್' ಎಂದ.

ಈ ಕುಡುಕನೂ ಸ್ಟೈಲಾಗಿ 'ಗುಂಡ ಮ್ಯಾರೀಡ್' ಎಂದ.