ಕಂಬನಿ
ನಿಂತಿರುವೆ
ಸುಡುವ ಬಿಸಿಲನು ಕಾದು
ಕಂಬನಿ ಜಾರುವ ಮೊದಲೆ ಒಣಗಲು
ಬತ್ತಿಸಲು ನನ್ನೆದೆಯ ಬಂಜರು
ಕಾಯುತ್ತಿರುವೆ
ಸುರಿವ ಜಡಿಮಳೆಗೆ
ಜಾರುತ್ತಿರುವ ನೋವ ಮರೆಸಲು
ತೋಯಿಸಿ ಹರಿವ ಕಣ್ಣೀರು
ಸೂರ್ಯ ಮುಳುಗುತ್ತಿರೆ
ಬಾಚಿ ತಬ್ಬುವುದು ನನ್ನ ಕತ್ತಲು
ಅಳುವ ಕೂಸ ಸಂತೈಸುವ
ತಾಯಿಯಂತೆ
ಲೋಕದ ಕಣ್ಣಿಗೆ ನಾನಳುವುದ
ಕಾಣಿಸಬೇಕಿಲ್ಲ ನನಗೆ
ಕಣ್ಣ ಹನಿಯು ಮಳೆಯಾಗಲಿ
ಮರದ ಹನಿಯು
ಆದಂತೆ ಮಳೆ ಹನಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!