ಹೆಜ್ಜೆಗೊಂದು ಹೂವರಳಿ
ಮಾತಿನಲ್ಲಿ ಗೀತ ತುಂಬಿ
ಕಂಗಳಲಿ ಚೆಲುವ ಸೂಸಿ
ಬಂದವಳು ನನ್ನೊಲವ ಸಖಿ
ಆಕಾಶದ ತಾರೆಯಲ್ಲ
ಮಿಣುಕಾಡುವ ಚುಕ್ಕಿಯಲ್ಲ
ನಗೆಚಂದ್ರಿಕೆಯ ಸುರಿಸಿ
ಬಂದವಳು ನನ್ನೊಲವ ಸಖಿ
ಸಾಗರನ ರತ್ನದಂತೆ
ಅಡಗಿರುವ ಮುತ್ತಂತೆ
ರೆಪ್ಪೆಯೊಳಗೆ ಸ್ಫಟಿಕ ಧರಿಸಿ
ಬಂದವಳು ನನ್ನೊಲವ ಸಖಿ
ಹುಸಿಗೋಪ
ಮುಗ್ಧನಗುವಿಗೆ
ಸಂಜೆರಂಗನು ಪೂಸಿ
ಬಂದವಳು ನನ್ನೊಲವ ಸಖಿ
ಹಣೆಗೊಂದು ಸಿಂಧೂರ
ಮುಡಿಗೊಂದು ಮಂದಾರ
ಜಗದ ಚೆಲುವೆಂಬಂತೆ
ಬಂದವಳು ನನ್ನೊಲವ ಸಖಿ
ನುಡಿಯೊಳಗೆ ಪ್ರೀತಿ ತುಂಬಿ
ಬದುಕಿನೊಳಗೆ ಭಾವ ತುಂಬಿ
ಕಾವಕೆ ಸ್ಪೂರ್ತಿಯಾದವಳು
ನನ್ನೊಲವ ಸಖಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!