ನನ್ನ ಮಗಳಿಗೆ ಇಂಗ್ಲೀಷ್ ರೈಮ್ಸ್  ಅನ್ನು  ಕನ್ನಡಕ್ಕೆ   ಅನುವಾದಿಸಿ ಹೇಳ್ಬೇಕು ಆಗ ಹೊಳೆದ ಕೆಲವು ಸಾಲುಗಳು


ಪುಟ್ಟಿ ಜೊತೆ ಇತ್ತೊಂದು ಕುರಿಮರಿ

ಅದರ ಆಟ ಏನ್ಹೇಳ್ತೀತಿರಿ ರೀ


ಬಣ್ಣ ಅದರದು ಬಿಳುಪು

ಕಣ್ಣ್ಣು ಫಳ ಫಳ ಹೊಳಪು


ಎಲ್ಲಿಗೋದ್ರೂ ಪುಟ್ಟಿ , ಅವಳ ಬೆನ್ನು ಹತ್ತಿ

ಮರಿ ಹೋಗ್ತಿತ್ತು ಬಿಟ್ಟು ತನ್ನ ಹಟ್ಟಿ


ಒಮ್ಮೆ ಹೋಗಿ ಪುಟ್ಟಿ ಶಾಲೆಗೆ

ಮಾಡ್ತು ತುಂಬಾ ದಾಂಧಲೆ

ಟೀಚರಮ್ಮ  ಹೊಡ್ಯೋಕೆ ಹೋದರೆ

ಓಡ್ತು ಬ್ಯ್ಬಾ ಬ್ಯಾ  ಅಂತಲೇ



ಹೊಳೆ ಹೊಳೆಯುವ ನಕ್ಷತ್ರ  
ಬಾರೋ ಒಮ್ಮೆ ನನ್ಹತ್ರ
ಅದು ಹೆಂಗೆ ಹೋಗಿ ಸೇರಿದೆ ಆಕಾಶ
ನನ್ನೂ ಕರ್ಕೊಂಡು ಹೋಗು ಬಾಬಾರಾ

ಗುಂಡ ಗುಂಡಿ ನೀರಿಗೋದ್ರು
ಕೆರೆಯ ಏರಿಗೆ
ಗುಂಡ  ಗುಂಡಿ ಜಾರಿ ಬಿದ್ರು
ನಡು ದಾರಿಗೆ



ದೂರ ಹೋಗು ಮಳೆರಾಯ
ಆಟ ಆಡ್ಬೇಕು ನಾನಯ್ಯ

ನೀನು ಬಾ   ನಾಳೆ
ಸ್ಕೂಲಿಗೆ ಹೋಗೋ  ಟೈಮಲ್ಲೇ
ಅಮ್ಮ ನೋಡಿ ನಿನ್ನ
ಬೇಡ ಸ್ಕೂಲಿಗೆ ಅಂತಾಳೆ