ಕನಸುಗಳ ಹೆಣೆದು
ಮಾಲೆಯಾಗಿಸಿದ್ದೇನೆ
ನನ್ನ ಕೊರಳಿಗೆ ನನ್ನವೇ
ಕನಸುಗಳು
ಒಮ್ಮೊಮ್ಮೆ ನಾನೇ
ಕನಸಾಗಿದ್ದೇನೆ
ಭಾವನೆಗಳ ಹಿಡಿಯಲು
ಹೋಗಿ ಹೆನವಾಗಿದ್ದೇನೆ
ನಾ ಸತ್ತು ವರ್ಷಗಳಾಯ್ತು
ಆದರೂ ಬದುಕಿದ್ದೇನೆ
ಬದುಕು ಬರಡಾಗಿ
ಅಲ್ಲೊಮ್ಮೆ ಇಲ್ಲೊಮ್ಮೆ
ಪ್ರೀತಿ ಚಿಲುಮೆ ಕಂಡರೂ
ಅದು ಮರೀಚಿಕೆ
ನಾ ಹಿಡಿಯಲಾರೆ,ಅದೂ
ಸಿಗುವುದಿಲ್ಲ ಕನಿಕರಿಸಿ
ಚುಚ್ಚು ನುಡಿಗೆ ಬೆಚ್ಚಿಬಿದ್ದು
ಬೆಚ್ಚಗೆ ಮಲಗಿದ್ದೇನೆ
ಮತ್ತೆ ಕನಸುಗಳ ಹೆಣೆಯುತ್ತಾ
ಮಾಲೆ ಕಟ್ಟುತ್ತಾ
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!