ಮನಸಿಗೆ ಹಿಡಿದ ಮಂಕು ಮಾಡಿತು ನನ್ನ ಮೂಕ
ಮನದ ದಾಸ್ಯದ ಸಂಕೇತ ಈ ಮೂಕ
ಹಾಡು ಕೋಗಿಲೆ ಬಾಯಿಗೆ ಕೊಕ್ಕೆ ಹಾಕಿತು ಈ ಮೂಕ
ಕಾರ್ಮುಗಿಲು ತಂದ ಕತ್ತಲೆಯಿಂದ ಆಯಿತು ಬಾಳು ಮೂಕ
ಮುಗಿಲು ಕಳೆಯಿತು ಮಳೆಯು ಬಂತು ಆಸೆಯ ಪ್ರತೀಕ
ಮನಸು ತೆರೆದು ಕತ್ತಲ ಕಳೆದು ಹೋಯಿತು ಆ ಪ್ರಕೋಪ
ಹಾಡೊ ಹಂಬಲವಾಯ್ತು ಬೀಗ ತೆರೆಯಿತು ತೋರಿತು ಪ್ರತಾಪ
ಮಂಕು ಹೋಗಿ ಕರುಳು ಕೂಗಿ ಹೂ ಬಳ್ಳಿ ಕೇಳಿತು ಆಲಾಪ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!