ಸಮುದ್ರ ಘನವೆಂಬನೆ
ಧರೆಯ ಮೇಲಡಗಿತ್ತು
ಧರೆಯ ಘನವೆಂಬನೆ
ನಾಗೇಂದ್ರನ ಫಣಾಮಣಿಯ ಮೇಲಡಗಿತ್ತು
ಅಂತಹ ನಾಗೇಂದ್ರನನ್ನು ಘನವೆಂಬನೆ
ಪಾರ್ವತಿಯ ಕಿರುಕುಣಿಕೆಯ ಮುದ್ರಿಕೆಯಾಗಿತ್ತು
ಅಂತಹ ಪಾರ್ವತಿಯನ್ನು ಘನವೆಂಬನೆ
ಪರಮೇಶ್ವರನ ಅಧರ್ಾಂಗಿಯಾದಳು
ಅಂತಹ ಪರಮೇಶ್ವರನನ್ನು ಘನವೆಂಬನೆ
ನಮ್ಮ ಕೂಡಲ ಸಂಗನಶರಣರ ಭಕ್ತರ
ಮನದ ಕೊನೆಯ ಮೊನೆಯ ಮೇಲಡಗಿದನು
ಕೂಡಲಸಂಗಮದೇವ.
ನಿಷ್ಕಲ್ಮಶ ಮನಸ್ಸು ಯಾವಗಲೂ ಒಳ್ಳೆಯದರ ತುತ್ತ ತುದಿಯಲ್ಲಿ ಕುಳಿತಿರುತ್ತದೆ ಎನ್ನುವುದಕ್ಕೆ ಈ ವಚನವೇ ಸಾಕ್ಷಿ. ಹಾಗೆಯೇ ನಮ್ಮ ಮನಸ್ಸು, ಸಮಾಜದೊಳಗಿನ ಸಂಬಂಧಗಳು ಸದುದ್ದೇಶದಿಂದ ಕೂಡಿದರೆ ಮತ್ತು ಕೂಡವುದಾದರೆ ಪ್ರೀತಿಯ ದೈವಿಕ ಸುಖ ಸಿಗಬಹುದೆನೋ.
ಈ ವಚನ ಓದಿದ ನಂತರದಿಂದಲೇ ನಿಷ್ಕಲ್ಮಶ ಮನಸಿನ ಬೌದ್ಧಿಕ ಸ್ಹೇಹಿತರಾಗೋಣ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!