ತುಟಿಯ ವಿರುದ್ದ ನಾಲಿಗೆ ಏಕಾಏಕಿ ಬಂಡಾಯವೆದ್ದಿದೆ
ಹೀರಿದ ಮಧುವಿನ ರುಚಿ ತೋರಿಸದೆ ಬಚ್ಚಿಟ್ಟಿದೆಯೆಂದು.
*****
ತಾರುಣ್ಯದ ಬಲಿತ ದಿನಗಳು ನೋನುತ್ತ ಠೇಂಕರಿಸಿವೆ
ರಾತ್ರಿಗಳು ತಮಗೆ ನವಿರಾಗಿ ಸಹಕರಿಸುತ್ತಿಲ್ಲವೆಂದು.
*****
ಮಧುಪಾತ್ರೆ ಹಿಡಿದಿರುವ ಕೈಗೆ ತುಪಾಕಿ ಕೊಟ್ಟಿದ್ದಾರೆ
ಹಾರಿದ ಗುಂಡುಗಳು ಹೂವಿಗೆ ಮುತ್ತಿಕ್ಕುತ್ತಿಕಿವೆ.
*****
ಮಧುಪಾತ್ರೆ ಹಿಡಿದು ಹೊರ ಬರಲು ಅಳುಕಿರುವೆ
ಸೂರ್ಯ ಚಂದ್ರರ ಸರದಿಯ ಪಹರೆ ನಡೆದಿದೆ.
*****
ದುಂಬಿಗಳು ತಮ್ಮ ರೆಕ್ಕೆ ಬಿಚ್ಚಿ ತುಟಿಗೆ ತೊಡಿಸಿವೆ
ಹೂವಿನ ಮೃದು ಪಕಳೆ ಮೇಲೆ ಹಾರಿ ಕೂರಲು.
*****
ಕುಪ್ಪೇರಾವ್.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!