ಸ್ನೇಹಿತರೇ,
ಹಿಂದಿ ಚಿತ್ರಗಳಿಂದ ದೊರಕುವ ಮನರಂಜನೆ ಕನ್ನಡದ ಚಿತ್ರಗಳಿಗಿಂತ ಹೆಚ್ಚಿನದೇನಲ್ಲ ಎನ್ನುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಹಿಂದಿ ಚಿತ್ರಗಳನ್ನು ನೋಡುವುದರಿಂದ ನಾಡಿನಲ್ಲಿ ಹಿಂದಿ ಹೇರಿಕೆಗೆ ನಾವೇ ಮಣೆ ಹಾಕಿದಂತಾಗುತ್ತದೆ, ಹಿಂದಿಯವರು ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಕನ್ನಡಿಗರನ್ನು ತುಳಿಯಲು ಸುಲಭ ಮಾಡಿಕೊಟ್ಟಂತಾಗುತ್ತದೆ. ಈ ಮೂಲಕ ನಮ್ಮ ನಾಡಿಗೆ ನಾವೇ ದ್ರೋಹಬಗೆದಂತಾಗುತ್ತದೆ. ಕನ್ನಡಕ್ಕೇ ಕಪ್ಪು ಬಳಿದ೦ತಾಗುತ್ತದೆ. ಆದ್ದರಿಂದ...

ಸ್ವಾಭಿಮಾನಿ ಕನ್ನಡಿಗರೇ! ಈ "ಘಜನಿ" ಚಿತ್ರವೇ ಮೊದಲಾಗಿ ಯಾವ ಹಿಂದಿ ಚಿತ್ರವನ್ನೂ ನೀವು ನೋಡುವುದಿಲ್ಲವೆಂದು ಆಣೆ ಮಾಡಿ! ನಿಮ್ಮ ಗೆಳೆಯರಿಗೂ ನೋಡಬೇಡಿರೆಂದು ಜಾಗೃತಿ ಮೂಡಿಸುತ್ತೀರೆಂದು ಆಣೆ ಮಾಡಿ!

http://enguru.blogspot.com/2008/12/blog-post.html