ಸದಸ್ಯ್ರರುಗಳೆ ನಿಮ್ಮಲ್ಲಿ ಯಾರಿಗಾದರೂ
ಈ ರೀತಿ ಮೇಲ್ ಬಂದಿದೆಯೇ
>.
ಕನ್ನಡ ಮಿತ್ರರೇ
ಆನ್‍ಲೈನಲಿ ಕನ್ನಡದಲ್ಲಿ ಮಾತಾಡಬೇಕು, ಬರೆಯಬೇಕು, ಓದಬೇಕು, ಕತೆ ಕಾದಂಬರಿ ಓದಬೇಕು ಎಂಬೆಲ್ಲಾ ಆಸೆಗಳು ಎಲ್ಲಾ ಕನ್ನಡಿಗರಲ್ಲೊ ಇದ್ದಿದ್ದೆ
ಅದಕ್ಕೆ ಒಂದು ವೇದಿಕೆ ಸಂಪದ ಭೇಟಿ ಕೊಡಿ www.sampada.net
ಸಂಪದದ ರೂವಾರಿ ಹರಿಪ್ರಸಾದ್‌ರವರು ಕನ್ನಡ ಪ್ರಸಾರ, ಪ್ರಚಾರಕ್ಕಾಗಿ ಯಾವುದೇ ಪ್ರತಿಫಲಾಪೇಕ್ಶೆ ಇಲ್ಲದೆ ಸಂಪದವನ್ನು ಕಟ್ಟಿದ್ದಾರೆ , ಬೆಳೆಸಿದ್ದಾರೆ , ಸಂಪದದಲ್ಲಿ ನೀವೂ ಬರೆಯಬಹುದು, ಬೆರೆಯಬಹುದು
ನಿಮ್ಮೊಳಗೊಬ್ಬ/ಳು ಕವಿ ಕವಿಯತ್ರಿ, ವಿಮರ್ಶಕ, ಕತೆಗಾರ/ರ್ತಿ, ತರಲೆ, ಇದ್ದಾರೆಯೇ ಅಥವ ಓದುವ ಹುಚ್ಚು ನಿಮಗಿದೆಯೆ ಹಾಗಿದ್ದಲ್ಲಿ ಸಂಪದದ ಬಾಗಿಲು ನಿಮಗಾಗಿ ತೆರೆದಿದೆ
ಬನ್ನಿ ಕನ್ನಡವ ಎಲ್ಲೆಡೆ ಬೆಳೆಸೋಣ, ಬಳಸೋಣ
ಈ ಮೇಲ್ ಅನ್ನು ನಿಮಗೆ ಗೊತ್ತಿರುವ ಕನ್ನಡಿಗರಿಗೆಲ್ಲಾ ಕಳಿಸಿ.
ನಿಮ್ಮ ಗೆಳತಿ>.
roopa lakshmipathi rao

ಹೀಗೊಂದು ಮೇಲ್‌ನ್ನು ನನಗೆ ಗೊತ್ತಿರುವ ನನ್ನ ಗೆಳೆಯ/ಗೆಳತಿಯರಿಗೆಲ್ಲಾ ಕಳಿಸಿದೆ. ಅವರೂ ಅವರಿಗೆ ಗೊತ್ತಿರುವವರಿಗೆಲ್ಲಾ ಫಾರ್‌ವಾರ್ಡ್ ಮಾಡಿರುವುದಾಗಿ ಹೇಳಿದರು ಸರಪಳಿ ಹೀಗೆ ಮುಂದುವರಿದು ಅದು ಸಂಪದದ ಸದಸ್ಯರಿಗೆ ಯಾರಿಗಾದರೂ ತಲುಪಿದ್ದರೆ ನನ್ನ ನೆಟ್‌ವರ್ಕ್ ಎಷ್ಟು ದೊಡ್ಡದೆಂಬುದನ್ನು ಗೊತ್ತಾಗುತ್ತದೆ ಎಂಬ ಸ್ವಾರ್ಥವಷ್ಟೇ. ಜೊತೆಗೆ ನಾವು ಸವಿಯುತಿರುವ ಈ ಸವಿ ಕನ್ನಡದ ಎಲ್ಲರಿಗೂ ಸಿಗಲಿ ಎಂಬ ಆಶಯವೂ ಇದೆ.
ಸಂಪದದ ನಿರ್ವಾಹಕರಿಗಾಗಲಿ, ಎಚ್.ಪಿ.ಎನ್‌ರಿಗಾಗಲಿ, ಸಂಪದದ ಸದಸ್ಯರಿಗಾಗಲಿ ಇದರಿಂದ ನೋವಾಗಿದರೆ ಕ್ಷಮಿಸಿ.
ಬೇಕಿದ್ದಲ್ಲಿ ಡಿಲೀಟ್ ಮಾಡಿ
ಎಚ್ ಪಿ ಎನ್
ಐಡಿಯನ್ನ ಮಾತ್ರ ಬ್ಲಾಕ್ ಮಾಡಬೇಡಿ :)