ಜಗದೆಲ್ಲ ಜಂಜಡದ
ಬಹುಭಾರ ತಾಳದಲೆ
ಬಾಯ್ಬಿಡಲು ಭೂದೇವಿ ಕಾಯುತಿಹಳು|
ಹಸಿರು ಪೈರನು ಹೊತ್ತ
ಹಸಿಯಾದ ಕನಸುಗಳ
ಚೆಲುವ ಬದುಕನು ಮತ್ತೆ ಕರೆಯುತಿಹಳು|
ಬಾನ್ ಬೆಟ್ಟ ಕಡಲೊಳಗೆ
ಭೂದೇವಿ ಮಡಿಲೊಳಗೆ
ಸೃಷ್ಟಿ ವಿಪರೀತಗಳು ತೋರುತಿಹವು|
ತಾನ್ ಹೊತ್ತ ಕಂದಗಳೇ
ತನ್ನೆದೆಯ ಬಗೆದಿರಲು
ಭೂರಮೆಯ ಕಣ್ಣುಗಳು ತೋಯುತಿಹವು|
ಹಲವು ಕಷ್ಟಗಳೆದುರು
ತಾಳ್ಮೆ ಸಹನೆಗಳಿಂದ
ಎಲ್ಲ ತ್ಯಾಗವ ಮಾಡಿ ಇರುವಳವಳು|
ಸೃಷ್ಟಿಗೆದುರಾಗಿರುವ
ಈ ಎಲ್ಲ ಮನುಕುಲಕೆ
ಕ್ಷಮಯಾ ಧರಿತ್ರಿ ತಾ ಕ್ಷಮೆ ನೀಡ್ವಳು|
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (5)