ಚಿಂತೆ ಏತಕೆ ಗೆಳತಿ
-----------------
ಚಿಂತೆ ಏತಕೆ ಗೆಳತಿ
ಚೆಲುವೆ ನೀನಲ್ಲವೆಂದು.
ಚೆಲುವೆ ಅಲ್ಲದಿರೇನು,
ಸೌಜನ್ಯರೂಪಿಣಿ ನೀನು.
ಬಂಗಾರ ನಿನಗೇಕೆ,
ಅಪರಂಜಿ ಗುಣವತಿ ನೀನು.
ಕಪ್ಪಾದರೇನು ನೀ,
ದೂರ ಹೋಗೆನು ನಾನು -
ರಾತ್ರಿದೇವಿಗೆ ಒಲಿಯಲಿಲ್ಲವೇ ಚಂದ್ರಮನು.
ಚೆಲುವನ್ನು ಕಂಡಾಗ
ನಯನ ಹಿಗ್ಗಲುಬಹುದು.
ಮನುಜನ ಮನಸಿನ
ಕಷ್ಟ ಕುಗ್ಗೀತೆ ?
ಚೆಲುವು ಮಾಯದ ಗಿಣಿಯು,
ಒಲವು ವಜ್ರದ ಗಣಿಯು -
ಗಿಣಿಗಾಗಿ ಗಣಿಯನ್ನು ತೊರೆವರುಂಟೆ ?
- ೦ -
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!