ನಾವು ಓದುವುದು ಏಕೆ? ಓದುವುದರಿಂದ ಏನು ಪ್ರಯೋಜನ. ಹೊಸ ವಿಷಯಗಳನ್ನು ತಿಳಿಯಲು ಅಥವಾ ತಿಳಿದುಕೊಂಡಿರುವ ವಿಷಯಗಳನ್ನೇ ಸ್ಪಷ್ಟವಾಗಿಸಲು ಓದಬೇಕೆಂದರೆ. ಓದದೇ ಇರುವ ಮಂದಿಯೂ ಇದಾರಲ್ಲ, ಅವರಿಗೆಲ್ಲ ಹೊಸ ವಿಷಯಗಳು ತಿಳಿಯುವುದಿಲ್ಲವೇ? ಇಷ್ಟಕ್ಕೂ ವಿಷಯಗಳನ್ನು ತಿಳಿಯುವುದರಿಂದ ಆಗುವ ಪ್ರಯೋಜನವೇನು? ಒಂದು ವಿಷಯ ನಮಗೆ ತಿಳಿಯದಿದ್ದರು ಅದರ ಅಸ್ತಿತ್ವವಿರುತ್ತದಲ್ಲವೇ, ಹೀಗಾಗಿ ಅದನ್ನು ತಿಳಿಯುವುದರಿಂದಾಗಲೀ ಅಥವಾ ತಿಳಿಯದೇ ಇರುವುದರಿಂದಾಗಲಿ ಆಗುವ ಪರಿಣಾಮವೇನು? ಹೆಚ್ಚಿನ ಚರ್ಚೆಗೆ ಸ್ವಾಗತ.....