ವ್ಯಾಲೆಂಟನ್ಸ್ ದಿವಸ ಹತ್ತಿರ ಬರುತ್ತಿದೆ. ಇವತ್ತಿನ ಬ್ಲಾಗುಗಳನ್ನು ನೋಡಿದಾಗ ನನ್ನ ಮನದಲ್ಲೆದ್ದ ಪ್ರಶ್ನೆಗಳಿವು. ಪ್ರೀತಿಯೆಂದರೆ ನಾವೊಂದು ಚೌಕಟ್ಟು ನೀಡ್ತೇವೆ. ಗಂಡ ಹೆಂಡಿರ ಮಧ್ಯೆ ಇಲ್ಲವೇ, ತಾಯಿ ಮಗುವಿನ ಪ್ರೀತಿ, ಅಣ್ಣ ತಂಗಿಯರ ಪ್ರೀತಿ ಹೀಗೆ. ಯಾವುದೇ ಪರ ಪುರುಷ ಮತ್ತು ಸ್ತ್ರೀ ಪ್ರೀತಿಸಲು ಸಾಧ್ಯವಿಲ್ಲವೇ? ಹಾಗೇ ಅವರು ಪ್ರೀತಿಸಿದ್ದೇ ಆದರೆ ಅವರು ಮದುವೆಯಾಗಲೇಬೇಕೇ? ಮದುವೆಯಾದ ನಂತರ ಯಾರನ್ನೂ ಅವರು ಪ್ರೀತಿಸಬಾರದೇ? ಅದು ಅನೈತಿಕವಾಗುವುದೇ. ದಯವಿಟ್ಟು ಸಂಪದಿಗರೇ ನನ್ನ ಈ ಪ್ರಶ್ನೆಗಳಿಗೆ ಉತ್ತರ ನೀಡುವಿರಾ?