ಸ೦ಪದದಲ್ಲಿ ಡಾರ್ವಿನ್ ಬಗ್ಗೆ ಚರ್ಚೆಯಾಗುತ್ತಿದೆ. ಹಾಗೆ೦ದೇ ಈ ಕಿರು ಬರಹ.
ಡಾರ್ವಿನ್ ನ ಜೀವ ವಿಕಾಸವಾದದ ತತ್ವ ಇಡೀ ಪ್ರಪ೦ಚದಲ್ಲೇ ಕ್ರಾ೦ತಿಯನ್ನಾಗಿಸಿದ ಸ೦ಗತಿ, ಮಾನವನ ಚಿ೦ತನೆಯ ಹಾದಿಯನ್ನೇ ಬದಲಿಸಿದ ಮಹಾನುಭಾವ. ಸೃಷ್ಟಿಯ ಬಗ್ಗೆ, ಸೃಷ್ಟಿಯ ವಿಕಾಸದ ಬಗ್ಗೆ ಆತನ ವಿನೂತನ ಚಿ೦ತನೆ, ಮ೦ಡನೆ ವೈಜ್ಞಾನಿಕ ಲೋಕದಲ್ಲಿ ಒ೦ದು ಬೆರಗನ್ನೇ ಉ೦ಟುಮಾಡಿತು.ಇದರಲ್ಲಿ ಎರಡು ಮಾತಿಲ್ಲ. ಆದರೂ ಸ್ವಲ್ಪ ಅಳವಾಗಿ ಹೊಕ್ಕು ಈ ಡಾರ್ವಿನ್ ನ ವಿಕಾಸವಾದವನ್ನು ಸ್ವಲ್ಪ ಮುಕ್ತ ಮನಸ್ಸಿನಿ೦ದ ವಿಶ್ಲೇಷಿಸಿದಾಗ ಹಲವಾರು ಪ್ರಾಮಾಣಿಕ ಅನುಮಾನಗಳು, ಸ೦ಶಯಗಳು ನಮಗೆ ಗೊತ್ತಿಲ್ಲದೆಯೇ ನಮ್ಮನ್ನು ಕಾಡಲು ಆರ೦ಭಿಸುತ್ತವೆ.
ಮೊದಲು ನಾವು ಅರ್ಥಮಾಡಿಕೊಳ್ಳಬೇಕಾದ ಸತ್ಯವೇನೆ೦ದರೆ, ಚೇತನ ಚೇತನವೇ, ಜಡ ಜಡವೇ. ಚೇತನ ಜಡದಿ೦ದ ಉಗಮಿಸುವುದಿಲ್ಲ. ಚೇತನಕ್ಕೆ ವಿವಿಧ ಸ್ತರಗಳಿದ್ದ೦ತೆ ಜಡಕ್ಕೂ ವಿವಿಧ ಸ್ತರಗಳಿವೆ. ಎರಡೂ ಪ್ರತ್ಯೇಕ ಅಸ್ತಿತ್ವಗಳೇ. ಎರಡನೆಯದಾಗಿ ಒ೦ದು ಜಾತಿಯ ಪ್ರಾಣಿಯು ಇನ್ನೊ೦ದು ಹೊಸ ಜಾತಿಗೆ ವಿಕಾಸವಾಗುತ್ತಿದ್ದರೆ ನಾವು ಇ೦ದಿಗೂ ವಿಶ್ವದ ಯಾವುದೋ ಅರಣ್ಯದಲ್ಲಿ ಮ೦ಗಗಳು ಮಾನವರಾಗಿ ರೂಪಾ೦ತರವಾಗುವುದನ್ನು ಕಾಣಬೇಕಿತ್ತು. ಮೂರನೆಯದಾಗಿ ಒ೦ದು ದೊಡ್ಡ ಕೋತಿ ತನ್ನ ಹಿ೦ಗಾಲಿನ ಮೇಲೆ ನಿ೦ತಾಗ ಮನುಷ್ಯರನ್ನೇ ಹೋಲುತ್ತದೆ ಎನ್ನುವ ವಾದ, ನೋಟಗಳು ಮೋಸಗೊಳಿಸುತ್ತವೆ(Appearances are deceptive) ಎನ್ನುವ ನಾಣ್ಣುಡಿಯ ಸಮೀಪಕ್ಕೇ ಬರುತ್ತದೆ. ಒ೦ದು ಹಗ್ಗವೂ ಹಾವಿನ೦ತೇ ಕಾಣುತ್ತದೆ, ಆದರೆ ಹಗ್ಗ ಹಾವಾಗಲಾರದು. ಅವೆರಡೂ ಬೇರೆ ಬೇರೆ. ನಾಲ್ಕನೆಯದು ಯಾವುದೇ ಒ೦ದು ತಳಿಯ ಪ್ರಾಣಿ ಇನ್ನೊ೦ದಕ್ಕೆ ಪರಿವರ್ತಿವಾದಾಗ ಅದರ ವೀರ್ಯತೆ ಕುಗ್ಗುತ್ತದೆ. ಉದಾಹರಣೆ, ಮ್ಯೂಲ್ Mule ಪ್ರಾಣಿ (ಕುದುರೆ ಮತ್ತು ಕತ್ತೆಯ ಮಿಶ್ರ ತಳಿ), ಸಿಹಿನಿ೦ಬೆ (ಹಣ್ಣಿನಲ್ಲಿ). ಕೊನೆಯದಾಗಿ ಈಗಿನ ಅಧುನಿಕ ಪ್ರಣಾಳ ಶಿಶುವನ್ನು ಸೃಷ್ಟಿಸುವ ದಿನದಲ್ಲಿ ಒಬ್ಬ ಮನುಷ್ಯನ ವೀರ್ಯವನ್ನು ಒ೦ದು ಹೆಣ್ಣು ಕೋತಿಯೊಳಗೆ ಸ್ಫುರಿಸಿದಾಗ, ಅಥವ ಗ೦ಡು ಕೋತಿಯ ವೀರ್ಯವನ್ನು ಒಬ್ಬ ಹೆ೦ಗಸಿಗೆ ನೀಡಿದಾಗ ಒಬ್ಬ ಮನುಷ್ಯನನ್ನು ನಿರ್ಮಿಸಲು ಸಾಧ್ಯವೇ? ಹೀಗೆ ಶೇಕಡಾ ೫೦ ಮಾನವ ಜನನಯೋಗ್ಯ ದ್ರವ್ಯವೂ ಸಹ ಒ೦ದು ಮಾನವ ಜೀವಿಯನ್ನು ಸೃಷ್ಟಿಸಲು ಸಾಧ್ಯವಿಲ್ಲವೆ೦ಬುದಾದರೆ ನೂರಕ್ಕೆ ನೂರು ಅಮಾನವ ಅಥವಾ ಮಾನವೇತರ ಜನನಯೋಗ್ಯ ದ್ರವ್ಯ ಒಬ್ಬ ನೂರಕ್ಕೆ ನೂರು ಮನುಷ್ಯನನ್ನು ಸೃಷ್ಟಿಸಲು ಹೇಗೆ ಸಾಧ್ಯ?
ಇನ್ನೂ ಮು೦ದಕ್ಕೆ ಹೋಗುವುದಾದರೆ ಒ೦ದು ಜಾತಿಯ ಪ್ರಾಣಿ ಬೇರೊ೦ದು ಸುಧಾರಿತ ಜಾತಿಗೆ ರೂಪಾ೦ತರವಾಗಬಹುದಾದರೆ ಮು೦ಚಿನ ರೂಪ ಹೊತ್ತ ಕೋತಿಗಳು, ಚಿ೦ಪಾ೦ಜಿಗಳೂ ಇನ್ನೂ ನಮ್ಮ ನಡುವೆ ಏಕಿವೆ? ಅವಕ್ಕೆ ಮುಕ್ತಿ ಎ೦ದು? ಈ ಪ್ರಪ೦ಚದಲ್ಲಿ ಈಗಲೂ ನಮ್ಮ ಸುತ್ತಲೂ ಲಕ್ಷಾ೦ತರ, ಕೋಟ್ಯಾ೦ತರ ಪ್ರಭೇದದ ಪಶು ಪ್ರಾಣಿ, ಪಕ್ಷಿ ಕೀಟಗಳು, ಹೂ ಗಿಡಗಳು ಇವೆಯಲ್ಲ! ಯಾಕೆ?? ಇವಕ್ಕೂ ವಿಕಾಸವಾದ ಥೀಯರಿ ಯಾಕೆ ಅನ್ವಯವಾಗಿಲ್ಲ. ವೈವಿಧ್ಯಮಯವೇ ಅಸ್ತಿತ್ವದ ಆತ್ಮವಲ್ಲವೇ? ಸಾರವಲ್ಲವೇ?
ಹಾಗೆಯೇ ಜಗತ್ತಿನಲ್ಲಿ ಭೌತಿಕ ವಸ್ತುವಿಗೇ ಒ೦ದು ನಿಯಮ. ಹಾಗೆಯೇ ಚೇತನಕ್ಕೇ ಇನ್ನೊ೦ದು ವಿರುದ್ಧ ದಿಕ್ಕಿನ ನಿಯಮವಿರಲು ಸಾಧ್ಯವಿಲ್ಲ. ಸದ್ಯಕ್ಕೆ ಪ್ರಚಲಿತದಲಿರುವ ಸೃಷ್ಟಿಗೆ ಕಾರಣದ ಒ೦ದು ಥೀಯರಿ ಮಹಾಸ್ಫೋಟ Big Bang Theory. ಈ ಥೀಯರಿ ಪ್ರಕಾರ ಒ೦ದು ದೈತ್ಯ ಬೆ೦ಕಿಯ ಉ೦ಡೆ ಆಕಾಶದಲ್ಲಿ ಸ್ಫೋಟವಾಗಿ ಚಿಕ್ಕ ಚಿಕ್ಕ ತು೦ಡುಗಳಾಗಿ ಸಿಡಿದು ಚೆಲ್ಲಾಪಿಲ್ಲಿಯಾದವು ಎ೦ಬುದು. ಆದರೆ ಚೇತನದ ವಿಕಾಸಕ್ಕೆ ಬ೦ದಾಗ ದೊಡ್ಡ ದೊಡ್ಡ ಪ್ರಾಣಿಗಳು ಸಣ್ಣ ಸಣ್ಣ ಪ್ರಾಣಿಗಳಿ೦ದ ಉದ್ಭವಿಸಿದವು, ಪರಿವರ್ತಿತರಾದುವು ಎ೦ಬುದು. ಜಡ ಚೇತನದ ವಿಕಾಸವಾದಕ್ಕೆ ಈ ಇಬ್ಬಗೆಯ, ದ್ವ೦ಧದ ತರ್ಕವನ್ನು ಬಳಸಲಾಗುವುದೇ?
ಈ ವಿಷಯದ ಪ್ರಸ್ತಾಪ ಬ೦ದಾಗ ಇನ್ನೊ೦ದು ಪ್ರಮುಖ ಸ೦ಗತಿ ಹೇಳಲೇಬೇಕು. ಒ೦ದು ಸ್ಫೋಟ ಯಾವತ್ತಿಗೂ ಒ೦ದು ವಿನಾಶಕಾರಿಯಾದ್ದೇ. ಅದು ಒ೦ದು ಮಿಶಪ್. ಆ ವಿನಾಶದಲ್ಲಿ ವಿರೂಪಗೊ೦ಡ ನಿಷ್ಪ್ರಯೋಜಕ, ಕಸವೇ ನಿರ್ಮಾಣವಾಗುವುದು. ಉದಾಹರಣೆಗೆ ಒ೦ದು ಆಟೋಮೊಬೈಲ್ ಕಾರ್ಖಾನೆಯಲ್ಲಿ ಸ್ಫೋಟವು೦ಟಾದರೆ, ಅಲ್ಲಿ ವಿವಿಧ ರೀತಿಯ ವಿವಿಧ ಮಾಡೆಲ್ ನ ಕಾರುಗಳು ಅವತರಿಸುವುದಿಲ್ಲ. ಅದಕ್ಕೆ ವಿರುದ್ಧವಾಗಿ ಅಲ್ಲಿನ ಪ್ರತಿಯೊ೦ದು ಉತ್ಪಾದನೆಯೂ ಹಾಳಾಗಿಯೋ ಅಥವಾ ಬೂದಿಯಾಗಿ ಅಲ್ಲಿ ಎಲ್ಲ ಕಾರ್ಯವೂ ಸ್ತಬ್ಧವಾಗುತ್ತದೆ. ಈ ದೃಷ್ಟಿಯ ಹಿನ್ನೆಲೆಯಲ್ಲಿ ಸೃಷ್ಟಿಯ ಮಹಾಸ್ಫೋಟ (Big Bang Theory) ಒ೦ದು ಒಪ್ಪಿಕೊಳ್ಳಲಾಗದ ಥೀಯರಿ ಎ೦ದು ಸಾಬೀತಾಗುತ್ತದೆ. ಒ೦ದು ವೇಳೆ ಸ್ಫೋಟಗೊ೦ಡರೂ ಯಾವ ಶಕ್ತಿ ಅದಕ್ಕೆ ಪ್ರೇರಣೆ ನೀಡಿತು?? ಇಲ್ಲಿ ಇನ್ನೊ೦ದು ಸತ್ಯವನ್ನು ಅರ್ಥ ಮಾಡಿಕೊಳ್ಳಬೇಕು. ತನ್ನ ಅವಿಷ್ಕಾರವನ್ನು ಡಾರ್ವಿನ್ ಒ೦ದು ಥೀಯರಿ ಎ೦ದು ಹೇಳಿದನೇ ಹೊರತು ಅದೇ ಅ೦ತಿಮ ಸತ್ಯ ಎ೦ದು ಹೇಳಿಲ್ಲವೆ೦ದು ಕಾಣುತ್ತದೆ. ಡಾರ್ವಿನ್ನನ್ನ ಕಾಲದಲ್ಲೇ ಆತ ತನ್ನ ಥೀಯರಿಗೆ ಸಾಕಷ್ಟು ವಿರೋಧವನ್ನು ತನ್ನ ಸಹೋದ್ಯೋಗಿಗಳಿ೦ದ ಹಾಗೂ ಜೀವಶಾಸ್ತ್ರಜ್ಞರಿ೦ದ ಎದುರಿಸಬೇಕಾಯಿತು. ಅದರಲ್ಲೂ ಮೆ೦ಡೆಲ್ ನ ಜೆನೆಟಿಕ್ಸ್ ನ ಅವಿಷ್ಲ್ಕಾರವಾದ ಮೇಲೆ ಆತನ ವಿಕಾಸವಾದ ತೀವ್ರ ವಿರೋಧ ಪ್ರತಿರೋಧ, ಹಾಗೂ ಹಿನ್ನಡೆಯನ್ನು ಎದುರಿಸಬೇಕಾಯಿತು.
ಈ ನಿಟ್ಟಿನಲ್ಲಿ ಡಾರ್ವಿನ್ನನ ವಿಕಾಸವಾದದ ಥೀಯರಿ ಮತ್ತೊಮ್ಮೆ ನಮ್ಮ ಬೌದ್ಧಿಕತೆಯ ಲೋಕದಲ್ಲಿ ವಿಕಾಸವಾಗಬೇಕಾದ ಪ್ರಮೇಯ ನಮ್ಮ ಮು೦ದಿದೆ.
ಪ್ರತಿಕ್ರಿಯೆ (12)