ಮಂಡ್ಯಾದಲ್ಲಿರುವ ಶ್ರೀ ವೆಂಕಟೇಶ್ವರ ಧ್ಯಾನಕೇಂದ್ರದಲ್ಲಿ ದಿನಾಂಕ ೧೫-೦೩-೨೦೦೯ ರಿಂದ ೨೫-೦೩-೨೦೦೯ ರವರೆಗೆ ಉಚಿತವಾಗಿ ಧ್ಯಾನ ತರಗತಿ ಶಿಬಿರವನ್ನು ಏರ್ಪಡಿಸಲಾಗಿದೆ. ಮಂಡ್ಯ ನಗರದಲ್ಲಿ ಜಿಲ್ಲಾಧಿಕಾರಿಗಳ ಕಛೇರಿಯ ಹಿಂಭಾಗದಲ್ಲಿರುವ ಅಭಿನವ ಭಾರತಿ ವಿದ್ಯಾಕೇಂದ್ರದಲ್ಲಿರುವ ಅಪೂರ್ವವಾದ ಧ್ಯಾನಮಂದಿರದಲ್ಲಿ ನಡೆಯುವ ಈ ಅಪೂರ್ವವಾದ ಶಿಬಿರವನ್ನು ಪರಮ ಪೂಜ್ಯ ಶ್ರೀ ಅನಂತಕುಮಾರ ಸ್ವಾಮೀಜಿಯವರು ನಡೆಸಿಕೊಡುತ್ತಿದ್ದಾರೆ. ಪ್ರತಿದಿನವೂ ಸಂಜೆ ಆರು ಗಂಟೆಗೆ ಸರಿಯಾಗಿ ಶಿಬಿರದ ಕಾರ್ಯಕ್ರಮವು ಪ್ರಾರಂಭವಾಗುತ್ತದೆ. ಪ್ರಣವೋಚ್ಛಾರ, ಧ್ಯಾನದೊಂದಿಗೆ ಪ್ರಾರಂಭವಾಗುವ ಕಾರ್ಯಕ್ರಮದಲ್ಲಿ ನಂತರ ಸುಲಭ ಪ್ರಾಣಾಯಾಮಗಳು, ಅದಕ್ಕೆ ಬೇಕಾದ ಆಸನಗಳು ಇವುಗಳ ಬಗೆಗೆ ತರಬೇತಿ ನೀಡಲಾಗುತ್ತದೆ. ನಂತರ ಪೂಜ್ಯರು ಉಪನ್ಯಾಸ, ಮಾತುಕತೆಯ ಮೂಲಕ ವಿಶೇಷ ವಿಷಯಗಳ ಕುರಿತು ಮಾರ್ಗದರ್ಶನ ನೀಡುತ್ತಾರೆ. ನಮ್ಮಲ್ಲಿರುವ ಅಪೂರ್ವವಾದ ಶಕ್ತಿ, ಅನಂತವಾದ ಚೈತನ್ಯದ ಅರಿವನ್ನು ಮಾಡಿಸಲಾಗುತ್ತದೆ.
ಅಪೂರ್ವವಾದ ಹಾಗೂ ಹಲವಾರು ವಿಶೇಷತೆಗಳಿಂದ ಕೂಡಿದ ಈ ಶಿಬಿರಕ್ಕೆ ಎಲ್ಲರಿಗೂ ಮುಕ್ತವಾದ ಆಹ್ವಾನವಿದೆ. ಇಲ್ಲಿ ಜಾತಿ, ಮತ, ಧರ್ಮ, ಲಿಂಗ ಯಾವ ರೀತಿಯ ಬೇಧವೂ ಇರುವುದಿಲ್ಲ. ಹಲವಾರು ಜನ ಈ ಹಿಂದಿನ ಶಿಬಿರಗಳಲ್ಲಿ ಭಾಗವಹಿಸಿ ಮಾನಸಿಕ ನೆಮ್ಮದಿ, ಆರೋಗ್ಯಭಾಗ್ಯ, ನಿರ್ಮಲಚಿತ್ತ ಹೊಂದಿ ನೆಮ್ಮದಿಯ- ಸಾರ್ಥಕ ಜೀವನ ನಡೆಸುತ್ತಿದ್ದಾರೆ. ಮಂಡ್ಯಾ ನಗರ ಹಾಗೂ ಸುತ್ತಮುತ್ತಲಿನ ಜನರು ಇದರ ಸದುಪಯೋಗಪಡಿಸಿಕೊಳ್ಳಬೇಕಾಗಿ ವಿನಂತಿ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!