ಈ ಗಾಡಿ ಪುಣೆ ಶಹರ್ನಾಗಿಂದ ಹೋಗಲ್ಲರಿ. ಅದಕ್ಕೆ ನಮಗೆ 112.5 ಕಿ. ಮೀ ಕಡಿಮೆ ಆಗೋದ್ರಿಂದ, ಲಭು ಹೋಗ್ತೀವ್ರಿ. (7 ತಾಸ್ಗಿಗಿಂತ ಇನ್ನೂ ಕಡಿಮೆ ಸಮಯ)

ಚಲೋ ಆತಲ್ರಿ...ಮತ್ತೇನ್ರಿ. ಮುಂದೆ ಸಾವ್ಕಾಶ್ ವಾಗ್ ಓದ್ರಿ. ಮತ್ತ...

ಈಗ್ ಹಾಕಿರೋದು ಫಾಸ್ಟ್ ಟ್ರೇನ್ ಅಂತ್ರಿ. ಪ್ರಯೋಗ ನಡ್ಸ್ಯಾರ್ರಿ ಒಳ್ಳೇ ರೆಸ್ಪಾನ್ಸ್ ಬಂದ್ರೆ ಇದು ಮುಂದು ವರ್ಯೊದ್ರಲ್ಲಿ ಸಂಶಯ ಇಲ್ರಿಯಪ್ಪ.

ಮೊದಲ ಗಾಡಿ ಮಾರ್ಚ್, ೨೦ ರಂದು "CST ಸುರು ಆಗ್ತದ. ಇದು ಬರಾಬರಿ, 7 ತಾಸ್ಗಿಗಿಂತ ಇನ್ನೂ ಕಡಿಮೆ ಸಮಯ ತೊಗೊಳ್ತದೆರಿ.

ರಾತ್ರಿ 10-20 ಕ್ಕೆ "CST ಬಿಟ್ಟಿದ್ದು, ಶುಕ್ರವಾರ ಶಿರ್ಡಿ ಗೆ ಶನಿವಾರ ಬೆಳಿಗ್ಯೆ 5 ಗಂಟೆಗೆ ಮುಟ್ತದ್ರಿ.

ಮತ್ತೆ ಅಲ್ಲಿಂದ ವಾಪಸ್ 7-30 ಕ್ಕೆ. ಶನಿವಾರ ಬೆಳಿಗ್ಯ, 14-25 ಕ್ಕೆ ಮುಂಬೈ, "CST ಸೇರತದ್ರಿ.

ದೂರ : 342.7 ಕಿ. ಮೀ.

ದಾರಿಯಲ್ಲಿ ಬರುವ ಸ್ಟೇಶನ್ ಗಳು : ದಾದರ್, ಕಲ್ಯಾನ್, ಪುಣೆಮ್ಯಾಲ್ ಹೋಗಲ್ರಿ; ಇಗಟ್ಪುರಿ, ನಾಶಿಕ್, ಮನ್ಮಾಡ್, ಕೋಪರ್ಗಾವ್, ಶಿರ್ಡಿ. ಒಟ್ಟು ೮ ಕಡೆ ನಿಲ್ತದ್ರಿ.

ಕ್ರಯ : General sitting : 83 ರೂಪಾಯಿಗಳು.

Sleeper Class : 161 ರೂಪಾಯಿಗಳು.

3 rd A.C : 427 ರೂಪಾಯಿಗಳು.

2 nd A. C : 999 ರೂಪಾಯಿಗಳು.

ಬುಧವಾರದಿಂದ ಈ ""CST ಸಾಯಿನಗರ ಎಕ್ಸ್ ಪ್ರೆಸ್ ಟ್ರೇನ್ " ಗೆ 'ರಿಸರ್ವೇಷನ್' ಸುರು ಆಗ್ತದ.

ಮೊನ್ನೆ 'ಪುಂತಾಂಬ ಎಕ್ಸ್ ಪ್ರೆಸ್', ಸುರುಮಾಡಿದ್ರಲ್ರಿ ಅದ್ರಲ್ಲಿ 22 ಸ್ಟಾಪ್ ಅದಾವ್ರಿ. 13 ತಾಸ್ ಆಗ್ತಿತ್ತಂರ್ರಿ. [ಪತ್ರಿಕೆಲಿ ವರ್ದಿ ಮಾಡಿದ್ದು 10 ತಾಸು ಅಂತ] ಪುಣೆ ಮ್ಯಾಲ್ ಹೋಗೋ ಗಾಡಿ ಅದು. ಈಗ ನೇರ್ವಾಗಿ ಹೋಗೋದ್ರಿಂದ ಸುಮಾರು 112.5 ಕಿ. ಮೀ ದೂರ ಕಮ್ಮಿ ಆಗ್ತದಂತ್ರಿ. ಈ ಸುದ್ದಿ ಕೊಟ್ಟೋರು, ಮತ್ಯಾರೂ ಅಲ್ರಿ. ಸೆಂಟ್ರಲ್ ರೈಲ್ವೆ ಪಿ. ಆರ್. ಒ, ಶ್ರೀ. ಎಸ್. ಸಿ. ಮುಡ್ಗೇರಿಕರ್ ಸಾಹೇಬೃ.
Link :

http://sampada.net/article/17423

ಟೈಮ್ಸ್ ಆಫ್ ಇಂಡಿಯ, ೧೭, ಮಾರ್ಚ್, ೨೦೦೯. ['ಟೈಮ್ಸ್ ಸಿಟಿ', ಅಂಕಣದಲ್ಲಿ ಪ್ರಕಟಿತ]