ಕೊರಳು ಕೊಟ್ಟಿರಿ ಉರುಳಿಗೆ ನಗುತ
ಉರುಳಿನಿಂದ ಬಿಡಿಸಲು ನಾಡನು
ಓ ಅಮರ ಆತ್ಮಗಳೇ
ಚೆಲುವ ನಾಡನು ಕಟ್ಟುವ ಸೊಗಸು
ಕನಸನು ಕಾಣುತ ಬಲಿಗೈದಿರಿ ನಿಮ್ಮನೆ
ಓ ಭಗತ್ ರಾಜಗುರು ಸುಖದೇವ್
ಬೆಲೆಯಿಲ್ಲ ಬಾರಿಗೆ ಇಂದು ಈ ನಾಡಲಿ
ಬಡಿದಾಡುವರು ಎಲ್ಲ ಹಣ ಅದಿಕಾರಕೆ
ಮಯ್ಯ ಮರೆತು ಮೆರೆಯುತಿರುವರೆಲ್ಲ
ನೆನವರಿಲ್ಲ ನಿಮ್ಮ ನಿಸ್ವಾರ್ತ ಬದುಕನು
ನಾಡಿನ ಬೇಡಿ ಬಿಡಿಸಲು
ಸಿರಿ ದೇಶವನ್ನು ಕಟ್ಟಲು ಬಳಸಿದಿರಿ
ನೀವು ಮದ್ದು ಗುಂಡು ಬಾಂಬು
ಬಳಕೆಯಾಗುತಿವೆ ಅದೇ ಮದ್ದು ಗುಂಡುಗಳು
ಇಂದು ಹರಣ ಮಾಡಲು ಮುಗುದ ಜೀವಿಗಳನು
ಓ ಅಮರ ಆತ್ಮಗಳೇ
ನನ್ನೊಳಗೆ ಬನ್ನಿ, ನಿಮ್ಮಂತೆ ನಾನು
ಹೋರಾಡಲು ಹಳಿಸಿ ನನ್ನೊಳಗಿನ
ಹುಸಿ ಹಂಜಿಕೆಯನು ಬಡಿದೆಬ್ಬಿಸಿ
ಮಲಗಿರುವ ನನ್ನೊಳಗಿನ ಚೀತನವನು
ಇದೋ ನನ್ನ ಕೋಟಿ ನಮನ ನಿಮಗೆ
ಓ ಭಾರತ ಮಾತೆಯ ವೀರ ಮಕ್ಕಳೇ
ಬೇಕಿದೆ ನಿಮ್ಮ ಗಟ್ಟಿತನ ಹೋರಾಟದ
ಕೆಚ್ಚೆದೆ ನನ್ನೊಳಗೆ, ಬಡಿದಾಡಲು
ಭಾರತವನ್ನು ಹಿಂಡುತ್ತಿರುವ ಕೂಳಗಳ ಜೊತೆಗೆ
ಹರಸು ನಿಮ್ಮಂತೆ ಬದುಕಲು ನನ್ನನು
___LINK_OPEN_href="http://2.bp.blogspot.com/_eKkcWc5D-VI/Scm8KYvR3aI/AAAAAAAAFtQ/rFZkqg9KsfI/s1600-h/3.bmp"___
Shivram Rajguru
Date of Birth: 1908
Date of Death: Mar 23, 1931
Place of Birth: India
___LINK_OPEN_href="http://4.bp.blogspot.com/_eKkcWc5D-VI/Scm8BwY9R_I/AAAAAAAAFtA/KDP_eeoNCCw/s1600-h/untitled.bmp"___
Bhagat Singh
Date of Birth: Sep 27, 1907
Date of Death: Mar 23, 1931
Place of Birth: Jalandhar

Sukhdev
Date of Birth: -
Date of Death: Mar 23, 1931
Place of Birth: India
ಜೈ ಹಿಂದ್
ಜೈ ಭಾರತ ಮಾತೆ
ಕುಮಾರಸ್ವಾಮಿ. ಕಡಾಕೊಳ್ಳ
ಪುಣೆ 23/03/09
ಪ್ರತಿಕ್ರಿಯೆ (1)