ಕನ್ಫ್ಯೂಸ್ ಆದ್ರಾ? ಪರ್ವಾಗಿಲ್ಲ ಬಿಡಿ. ಈಗೆಲ್ಲಾ ತರಾವರಿ ಬೈಕ್ಗಳು ತಗೊಂಡು ಹಿಗ್ಗಾಮುಗ್ಗಾ ತಿರುಗ್ಸಿ, ಆಕ್ಸಿಡೆಂಟ್ ಮಾಡ್ಕೊಂಡ್ ಆಸ್ಪತ್ರೆಯಾಗ್ ಒಂದಪ ಮಲಗ್ಕಂಡ್ರೆನೇ ಅಂತೆ  "ರೋಡ್ ರೋಮಿಯೋ" ಅಂತ ಜನ ನಿಮ್ಮನ್ನ ಕರೆಯೋದು. ಈಗ ಈ ಬ್ಲಾಗ್ ಬರೆದದ್ದು ಅವನ್ ಬಗ್ಗೆ ಮಾತಾಡ್ಲಿಕ್ಕಲ್ಲ.

ಅಣ್ಣಾವ್ರ ನೆನಪಾಯ್ತು ನೋಡಿ ನೆನ್ನೆ ನಾನು ಕನ್ನಿಂಗ್ ಹ್ಯಾಮ್ ರಸ್ತೆ ಹತ್ರ ತೆಗೆದ ಈ ಚಿತ್ರ ನೋಡಿದ್ಮ್ಯಾಗೆ.

ಆಹಾ! ಆಗಿನ್ ಕಾಲ್ ದಲ್ಲಿ ಇದರ್ಮೇಲೇನೆ ಕುತ್ಕೊಂಡು ತಗ್ದಿರೋ ಚಿತ್ರಗಳ ಬಗ್ಗೆ, ಆ ಚಿತ್ರದ ಇನಿದಾದ ಚಿತ್ರಗೀತೆಗಳನ್ನ ನೆನೆಸಿಕೊಳ್ತೀರಾ?

ಅದರ್ ಜೊತೆಗೆ, ಈ ದ್ವಿಚಕ್ರ ವಾಹನದ ಹೆಸರನ್ನೂ ತಿಳಿಸಿ ;) (ಗೊತ್ತಿದ್ದವರು ಗೊತ್ತಿಲ್ಲದವರಿಗೆ ಹಿಂಟ್ ಮಾತ್ರ ಕೊಡಿ)

ಉತ್ತರ ಕೊಟ್ಟವರಿಗೆ ಈ ಚಿತ್ರದ ವಾಲ್ಪೇಪರ್ (೧೦೨೪x೮೦೦)  ಸೈಜಿನದ್ದು ಉಚಿತ...