ಗೆಳೆಯ ಮದುಸೂಧನ್ ಗೌಡ ನನ್ನ ಪರವಾಗಿ ಮತ್ತು ಸಂಪದ ಬಳಗದ ಪರವಾಗಿ
ಜನ್ಮ ದಿನದ ಶುಭಾಷಯಗಳು

ಸಿಹಿ ಸಿಹಿಯ ಜೇನು ಜಿನುಗುತ್ತಿರಲಿ ಎಂದೂ
ಹೊಸ ದಿನಕೆ ಹರುಷದಲಿ ಇಂದು
ಕೋಗಿಲೆಯ ಕುಹು ಗಾನ ಮುಂಜಾವ ಬೆಳಕಲ್ಲಿ
ಹಸಿರುಕ್ಕಿ ಪಲ್ಲವಿಸಿ ಮುದ ನೀಡುವಲ್ಲಿ
ನವೋಲ್ಲಾಸ ಉಕ್ಕುತಿರಲು ಎಂದೂ
ಹಾರೈಸುವೆವು ನಿಮ್ಮ ಜೀವನದಲ್ಲೆಂದು
"ಮಧು" ತುಂಬಿರಲೆಂದು
ಗೌಡ್ರ ಗದ್ಲ ಗಲ ಗಲ ಎನ್ನುತ್ತಾ ಸಂಪದವ ತುಂಬಿರಲಿ
ಇನ್ನಷ್ಟು ಮತ್ತಷ್ಟು ಲೇಖನಿಯಿಂದ ಹರಿಯಲಿ
ಸಂಪದದ ಸಂಬಂಧ ಸದಾ ಹೀಗೆ ಮುಂದುವರಿಯಲಿ
ಮುಂದೆ ಬನ್ನಿ ಹರಿದು ತೆರೆಯ
ಮುಖವ ತೋರಿ ಸೀಳಿ ಪೊರೆಯ
ಉಕ್ಕುತಿರಲಿ ಸದಾ ಹರೆಯ
ಮರೆಯದಿರು ನಮ್ಮನ್ನು ಎಂದಿಗೂ ಗೆಳೆಯಾ.....
ಪ್ರತಿಕ್ರಿಯೆ (15)