ಲೋಕದಲ್ಲಿ ಹಲವು ಅದ್ಭುತಗಳು ಜರುಗುತ್ತಲೇ ಇರುತ್ತವೆ. ಹಲವು ಸೃಷ್ಟಿ ವೈಚಿತ್ರಗಳು ಜಗತ್ತನ್ನು ನಿಬ್ಬೆರಗಾಗಿಸುತ್ತವೆ.

ಯು.ಎ.ಇ.ಯಲ್ಲಿರುವ ಅಲ್ ಐನ್ ಬಳಿಯ ಕುರಿಮಂದೆಯಲ್ಲಿರುವ ಆಡೊಂದು (ಗಂಡುಕುರಿ) ಹಾಲು ನೀಡುತ್ತಿರುವ ವಿಷಯ ಈಗ ಬೆಳಕಿಗೆ ಬಂದಿದೆ.

ತಮ್ಮ ಕುರಿಮಂದೆಯನ್ನು ತಪಾಸಿಸುತ್ತಿದ್ದ ವೇಳೆ ಅಲ್ ಐನ್ ನಗರದ ಖಲೀಫಾ ಸುವೇದಾನ್ ಬಖೀತ್ ಅಲ್ ನುಐಮಿ ಎಂಬ ಹೆಸರಿನ ಕೃಷಿಕರೊಬ್ಬರಿಗೆ ತಮ್ಮ ಕುರಿಮಂದೆಯ ಗಂಡುಕುರಿ ಹೆಣ್ಣುಕುರಿಯಂತೆ ಕೆಚ್ಚಲು ಹೊಂದಿರುವುದನ್ನು ನೋಡಿ ಆಶ್ಚರ್ಯವಾಯಿತು.

ಎಲ್ಲಾ ರೀತಿಯಲ್ಲಿ ಆಡಿನ ಲಕ್ಷಣವಿರುವ ಈ ಪ್ರಾಣಿ ಕೆಚ್ಚಲಿನ ವಿಷಯದಲ್ಲಿ ಮಾತ್ರ ಪಕ್ಕಾ ಕುರಿಯಾಗಿದೆ. ಅಲ್ಲದೇ ಪ್ರತಿದಿನ ಅರ್ಧಲೀಟರ್ ಅಪ್ಪಟ ಹಾಲನ್ನೂ ನೀಡುತ್ತಿದೆ.