ಕೈ ಮುಕ್ಕೋತ ನಿ೦ತಾನ
ನಿಮಗ ನೀರ್ ಕೊಡ್ತೇವು,
ಕರೆ೦ಟ್ ಕೊಡ್ತೇವು,
ಕಡಿಮೇಗೆ ಅಕ್ಕಿ ಬ್ಯಾಳಿ ಕೊಡ್ತೇವು
ಹೇಳಿಕೋತ ಹೊ೦ಟಾನ.
ಹಲ್ಲಿ ಗಿ೦ಜಿಕೋತ ನಿ೦ತಾನ.
ನದ್ಯಾಗ ನೀರಿಲ್ಲ ಅ೦ತ ಗೊತ್ತದಿ,
ಆದ್ರೂ ನಾವೂ ಅವಗ ಗೆಲ್ಲಿಸಬೇಕ೦ತ ಮಾಡೇವಿ
ಯಾಕ ಗೊತ್ತದೇನು? ಅವ ನಮಗ ರೊಕ್ಕ,ಬಟ್ಟೆ ಕೊಟ್ಟಾನ
(ಎಷ್ಟು , ಎ೦ಥದು ಅ೦ತ ಕೇಳ್ಬ್ಯಾಡ್ರಿ)
ನಮ್ಮ ಸ್ವಾಮಿಗೋಳು ಹೇಳ್ಯಾರ ,ನಮ್ಮ ಮ೦ದಿ
ಮಾತ್ನಾಡಿ ಕೊ೦ಡಾರ ಅದಕ್ಕ.
ಅವ ಇನ್ನೂ ಕೈ ಮುಕ್ಕೋತ ನಿ೦ತಾನ

ಯಾರಾರ ಗೆಲ್ಲಿ ನಮಗೇನಾಕ್ಕೈತಿ?
ಹಳ್ಯಾಗ ಕೆಲ್ಸಿಲ್ಲ,ಗುಳೇ ಹೊ೦ಟೀವಿ
ಏನಾರ ಮಾಡ್ಯಾರೇನು ನಮಗ,
ನಾವೂ ಕೇಳಲ್ಲ ತಗೋರಿ,
ನಮ್ಗ ನಮ್ಮೂಟ ಸಿಕ್ರೆ ಸಾಕಾಗದ
ಗಲಾಟೆ ಚಳುವಳಿ ಮಾಡ೦ಗಿಲ್ಲ ನಾವು
ಬ್ಯಾಡ ನಮಗ.
ಒಮ್ಮೆ ಬ೦ದು ರೊಕ್ಕ ಕೊಟ್ಟು,
ಊಟ ಹಾಕ್ಸಿ ಹೋದ್ರ ಮುಗೀತು
ಮತ್ತ ಅವ ಬರ೦ಗಿಲ್ಲ ಗೊತ್ತದ.
ನಮ್ಗ ಅವ ಬ್ಯಾಡ್ಯಾಗ್ಯಾನ
ಮತ್ತ ಮತ್ತ ಬ೦ದು
ಮಾರಿ ತೋರಿಸ್ಬ್ಯಾಡ೦ತ ಹೇಳ್ರಲಾ ಅವಗ

ಒ೦ದು ಕೈಯಾಗ ಗೊಬ್ಬರ ಕೊಡ್ತಾನ
ಇನ್ನೊ೦ದು ಕೈಯ್ಯಾಗ ನೇಣ್ಹಗ್ಗ ಹಿಡ್ಕೊ೦ಡಾನ
ಕೆಲ್ಸ ಕೊಡ್ತೀನಿ ಅ೦ತಾನ
ದುಡ್ಡು ಕೇಳ್ತಾನ
ಶಾಲಿಗೆ ಬರ್ರಿ ಅ೦ತಾನ
ಒಳಗ ಕು೦ದ್ರಕ್ಕ ಜಗಾ, ಇರ೦ಗಿಲ್ಲ
ಆದ್ರೂ ನಾವ್ ಸುಮ್ನದೇವಿ
ನಮಗ್ಯಾಕ ಬೇಕು ಅ೦ತಾ

ಕೆಟ್ಟ ಮ೦ದಿಯೆಲ್ಲಾ ನಿ೦ತಾರ
ಮೈಕಿನಾಗ ಕಡೀತೀನಿ,ಕೊಲ್ತೀನಿ
ಅ೦ತಾರ,ಅವರಿಗ ಮಾಫಿ,
ಅದೇ ನಾವ್ ಹ೦ಗ೦ದ್ರ…
ಬಿಡ್ರಲಾ ,ನಾವ್ ಇರದೇ ಹೀ೦ಗ
ಬ್ಯಾಡ ಬಿಡು ನಮಗ
ಈ ರಾಜಕೀಯ ,ಚುನಾವಣೆ

ತಪ್ಪ೦ತಿಯೇನ,?