------***** ನನ್ನವಳು *****-------
ನೆನಪಿನಂಗಳದ
ನಂದಾ ದೀಪವು ನೀನು
ಗಾಳಿಗೆ ಆರಿ ಹೋಗಲಾರೆ.

ಮುಂಜಾನೆಯ
ಸೂಯ೯ಕಿರಣವು ನೀನು
ಮಂಜಿನಲಿ ಮಬ್ಬಾಗಲಾರೆ.

ಬಾನಂಚಿನ ಪೂಣ೯
ಚಂದ್ರಮಳು ನೀನು, ಸಾವಿರ
ತಾರೆಗಳೆದುರು ಮಂಕಾಗಲಾರೆ.

ಎನ್ನ ಹೃದಯದ
ಸ್ಥಿರ ಚಿತ್ರವು ನೀನು
ಕಾಲನ ತುಳಿತಕ್ಕೆ
ಅಳಿಸಿ ಹೋಗಲಾರೆ.

-ನರೇಂದ್ರ
೧೭/೦೭/೨೦೦೩

------***** ಪ್ರೇಮ ವಿವಾಹ *****-------
ಹೆತ್ತವರ ಸಂತೋಷದ
ಸಮಾಧಿಯ ಮೇಲೆ
ರೂಪುಗೊಂಡ ಈ
ಪ್ರೇಮ ಸೌಧದ ಅಣು-ಅಣುವಿನಲ್ಲೂ
ಭಾವೋತಿರೇಕದ ಕಣ್ಣೀರಿನ ಕಣಗಳಿವೆ

ಮದುವೆ ಮನೆಯ ತುಂಬಾ
ಮಡುಗಟ್ಟಿದ ಕಣ್ಣುಗಳು
ಎಲ್ಲರೆದುರು ಅವು ಬಾಯಿ ತೆಗೆಯುವುದಿಲ್ಲ
ಮಾತನಾಡುವುದಿಲ್ಲ
-ನರೇಂದ್ರ
೧೬/೦೭/೨೦೦೩