ನನ್ನ ಜನ್ಮಕ್ಕೆ
ಕಾರಣಕರ್ತ
ಭಗವ೦ತನಿಗೆ
ನನ್ನ ಆತ್ಮ ಸಮರ್ಪಣೆ
ಉಳಿದೆಲ್ಲವೂ
ನನ್ನ ಮಗ ಜಾನ್ ಗೆ!!

***

ಯಾರು ಯಾರನ್ನೂ
ಮೂರ್ಖರಾಗಿಸುವುದಿಲ್ಲ.
ಈಗಿನ ಜಗತ್ತಿನಲ್ಲಿ
ಎಲ್ಲವೂ
ಸ್ವ-ಸಹಾಯ ಪದ್ಧತಿ (self -help system)

****

ತೆರೆಗಳು ಹಿ೦ದೆ
ಸರಿದಾಗ
ಇರುವೆಗಳು
ಮೀನುಗಳನ್ನು ತಿನ್ನುತ್ತವೆ.
ತೆರೆ ಏರಿದಾಗ
ಮೀನುಗಳು
ಇರುವೆಗಳನ್ನು ತಿನ್ನುತ್ತವೆ.

***

ಬದುಕಿನ ಕೊನೆಯಲ್ಲಿ
ಸಾಯುವುದೇ ಆದರೆ
ಹುಟ್ಟುವುದೇಕೆ?

***

ಜ್ಞಾನಿಗಳ ವಿವೇಕ
ಯುಗಗಳ ಅನುಭವ
ಸೂಕ್ತಿಗಳಲ್ಲಿ
ಸದಾ ಸ೦ಭವ

*****

ಕುರೂಪಿ ಕಲಿಸಿದ
ಸೌ೦ದರ್ಯ
ಅನುಕ೦ಪಹೀನ ಕಲಿಸಿದ
ಔದಾರ್ಯ
ಜಗದ ತಲ್ಲಣ ಕಲಿಸಿದ
ಶಾ೦ತಿಯ ನನಗೆ
ದ್ವ೦ದದ ಗುರುತನ
ಹಿರಿತನಕೆ ಸಾಕ್ಷಿ
ಬೇರೆ ಯಾವುದು?

****

ಬಣ್ಣಗಳು
ಮಾಸುತ್ತವೆ,
ದೇಗುಲಗಳು
ಕುಸಿಯುತ್ತವೆ,
ಸಾಮ್ರಾಜ್ಯಗಳು
ಬೀಳುತ್ತವೆ,
ಆದರೆ
ವಿವೇಕದ ಧ್ವನಿಗಳು
ಸದಾ
ಕೇಳುತ್ತವೆ.
****

(ಸ್ಪೂರ್ತಿ: ಇ೦ಗ್ಲೀಶ್ ಸೂಕ್ತಿಗಳು)