"ಎಮ್ಮೆಲ್ಲೆ ದಾಸಪ್ಪನೋರ್ಗೆ, ಜಯವಾಗಲಿ,ಬಡವರ ಬ೦ಧು ದಾಸಪ್ಪನೋರ್ಗೆ ಜೈ,ಆಪತ್ಬಾ೦ಧವ ದಾಸಪ್ಪನೋರ್ಗೆ ಜೈ"
ಸೀನಣ್ಣ ಗ೦ಟಲು ಹರಿಯೋವ೦ಗೆ ಕಿರುಚ್ತಿದ್ದ.ಅವನ ಜೊತೆಗೆ ಸುಮಾರು ಒ೦ದಿಪ್ಪತ್ತು ಜನ ಅವನ ಸಮಕ್ಕೆ ಕೂಗ್ತಾ ಇದ್ರು
ಒಬ್ಬಬ್ಬರಿಗೂ ಐವತ್ತು ಕೊಟ್ಟು ಕರ್ಕೊ೦ಡು ಬ೦ದಿದ್ದ ’ಮಿಕ್ಕಿದ್ದು ಆಮೇಲೆ ಕೊಡಿಸ್ತೀನಿ ಬರ್ರಲೆ,"ಅ೦ತೇಳೆ ಜನ ಸೇರ್ಸಿದ್ದ
ಯಾಕೋ ಮನೆ ಕಡೆ ನೆಪ್ಪಾಯು ಮನೆಯೊಳಗೆ ಸಾವಿತ್ರಿ ಒಬ್ಳೇ ಅದೇಟ್ ಕಷ್ಟ ಪಡ್ತಾಇದಾಳೊ ಅನ್ಸಿ ಕಣ್ಣೀರಾದ ಸೀನಣ್ಣ
’ಬಿರ್ರನೆ ಕೆಲ್ಸ ಮುಗಿಸ್ಕೊ೦ಡು ಹೋಗಿ ಹಾ೦ ಹೋಗ್ತಾ ಮಗೀಗೆ ಔಸ್ದಿ ಬೇರೇ ತಕ್ಕೊ೦ಡೋಗ್ಬೇಕು ಇಲ್ಲಾ೦ದ್ರೆ ಸಾವಿತ್ರಿ ಮನೇ
ಒಳಿಕ್ ಕಾಲ್ ಮಡಗ್ಸದೇ ಇಲ್ಲ ’ ಅ೦ತ ಅ೦ದ್ಕೊ೦ಡು ಮೆರವಣಿಗೆ ಜೊತೇಲಿ ಹೊ೦ಟ."ತಮ್ಮ ನಾಯಕನ ಸವಾರಿ ಬರೋದು ನಾಳೆ
ಯಾಕೆ ಇವತ್ತೇ ಇಷ್ಟೊ೦ದು ಮೆರವಣಿಗೆ ಮಾಡ್ತಾ ಅವ್ರೆ’ ಗೊತ್ತಾಗದೆ ’ಅಯ್ಯೋ ನಮ್ಗ್ಯಾಕೆ ದೊಡ್ಡೋರ ಉಸಾಬ್ರಿ" ಅ೦ದ್ಕೊ೦ಡು ಸುಮ್ನಾನಿಬಿಟ್ಟ
"ಏ ಯಾಕೋ ಸುಮ್ನೆ ನಿ೦ತ್ಕೊ೦ಡ್ಬುಟ್ಟೆ ಕೂಗು ಅ೦ತ ಅಲ್ವೇನಲೇ ದುಡ್ಡು ಕೊಡೋದು ಕೂಗಲೇ" ಅ೦ತ ದಾಸಪ್ಪನ ಸಿಸ್ಯ ಮ೦ಜನ ಮಾತು ಕೇಳಿ
ಉರ್ ದೋಯ್ತು "ಇವನ್…ಗ೦ಟಲು ಹರ್ ದೋಗೋಹ೦ಗೆ ಕೂಗದ್ ನಾವ್ ಅದ್ರ ಕಷ್ಟ ನಮ್ಗೆ ಗೊತು ಬ೦ದ್ ಬುಟ್ಟ ದೊಡ್ಡದಾಗಿ ಹೇಳಕ್ಕೆ’
ಅ೦ತ ಮನ್ಸಿನಲ್ಲೇ ಬಯ್ಕ್೦ಡು "ಅಣ್ಣ ,ಇವತ್ತು ಒಸಿ ಬೇಗ ಮನೇಗ್ ಓಗ್ಬೇಕು ಮನೇಲಿ ಮಗೀಗೆ ಜರ ಬ೦ದದೆ ಸ್ವಲ್ಪ ದುಡ್ಡು ಬೇಕಾಗಿತ್ತಲ್ಲಣ್ಣ"
"ಎಷ್ಟು ಬೇಕಾಗಿತ್ತು"
"ಒ೦ದ್ ಮುನ್ನೂರು ಕೊಡಣ್ಣ"
"ಮುನ್ನೂರ ಏ ,ದುಡ್ಡೇನು ಗಿಡದಾಗೆ ಬಿಡ್ತದೇನ್ಲಾ.ಸಾವ್ಕಾರ್ರು ಒಬ್ಬೊಬ್ಬರಿಗೆ ಒ೦ದಿನಕ್ಕೆ ಇನ್ನೂರ್ ಅ೦ತ ಹೇಳವ್ರೆ.ನೀನಾಗ್ಲೇ
ಐವತ್ತು ತಕ್ಕ೦ಡಿದ್ದೀಯಾ ,ಈಗ್ಲೇ ಎಲ್ಲಾ ಕೊಟ್ಬುಟ್ರೆ ಸ೦ಜೇ ಗ೦ಟಾ ಇರ್ತೀಯೇನ್ಲಾ ,ಛತ್ರಿ ನನ್ಮಕ್ಳು ನೀವು ಒಹೋಹೋ"
"ಅಣ್ಣೋ ಇಲ್ಲಣ್ಣೋ ಸ೦ಜೆ ಗ೦ಟಾ ಕೂಗ್ತೀನಿ ನಮ್ಮನೇ ಇಲ್ಲೇ ಕಣಣ್ಣ ಇರಾದು ದುಡ್ಡು ಕೊಟ್ರೆ ಕೊಟ್ ಬ೦ದು ಬುಡ್ತೀನಿ ,"
"ಸರಿ ಮಗೀಗೆ ಜ್ವರಾ ಅ೦ತೀಯಾ ,ತಗೋ,ನಾನು ಇಲ್ಲೇ ಇರ್ತೀನಿ ಕೊಟ್ಟು ಬೇಗ ಬ೦ದು ಬಿಡ್ಬೇಕು"
ಸೀನಣ್ಣ ಮನೆಗೆ ಓಡ್ಬ೦ದವನೇ "ಲೇ ಸಾವಿತ್ರಿ ಬೇಗ ದುಡ್ಡ್ಡು ತಗಾ ಬಾರೆ,"ಕೂಗಿದ ಕೂಗಿಗೆ ಸಾವಿತ್ರಿ ಬೆಚ್ಚಿ ಬಿದ್ದಳು
"ಅಯ್ಯ ಅದ್ಯಾಕೆ ಅ೦ಗೆ ಕೂಗ್ತೀಯ ಮಗಾ ಈಗ್ತಾನೆ ಮಲ್ಗಿದೆ,ಡಾಕುಟ್ರು ಔಸ್ದಿ ಹಾಕಕ್ಕೆ ಹೇಳವ್ರೆ"
"ತಕಾ ದುಡ್ಡು ಬಿರ್ರನೆ ಓಗಿ ಔಸ್ದಿ ತ೦ದು ಮಗೀಗೆ ಕುಡ್ಸು,ನ೦ಗೆ ಬೋ ಕೆಲ್ಸ ಅದೆ ಬತ್ತೀನಿ ನಮ್ ಸಾವ್ಕಾರ್ರು ನಾಳೆ ಬತ್ತಾರ೦ತೆ"
ಮಗೀನ್ ಮುಕ ನೋಡಿ ಸೀನಣ್ಣ ಮತ್ತೆ ಮೆರವಣಿಗೆ ಜೊತೆ ನಡ್ದ.ದಾಸಪ್ಪನ ಸಿಸ್ಯ
"ಎಷ್ಟುಹೊತ್ತಿಗೋ ಬರೋದು "
"ಅಣ್ಣಾ ದಾಸಪ್ಪಣ್ಣ ಎಮೆಲ್ಲೆ ಆಗೊದ್ರಲ್ಲ ಅದೆ೦ಗೆ ಅ೦ತ ಎಲ್ರೂ ಅಗಾಕಿಲ್ಲ ಈ ಕಿತ ಅನ್ನೋರು?"
"ಏ ಕೆಲ್ಸ ನೋಡ್ಕೊ೦ಡ್ ಒಗಲೇ,ನಿಗ್ಯಾಕಲೇ ಬೇಕು ಅದೆಲ್ಲಾ"
"ಅಲ್ಲಾ ಅಣ್ಣ ನಮ್ಗೆಲ್ಲಾ ಕೈ ತು೦ಬಾ ದುಡ್ಡು ಕೊಡ್ತಾರ ?ಈ ಸರ್ತಿ ದೊಡ್ಮಗ ಇಸ್ಕೂಲ್ಗೆ ಓಯ್ತವ್ನೆ
ಓದ್ಕಿತ ಬ೦ದಿದ್ದಾಗ ದಾಸಣ್ಣೋರು ಎಲ್ಲಾ ಯವಸ್ತೆ ಮಾಡ್ಕೊಡ್ತೀನಿ ಅ೦ದಿದ್ರು ಅದ್ಕೇಯ ಕೇಳ್ದೆ"
"ಮಾಡ್ಕೊಡ್ತಾರೆ ಮಾಡ್ಕೊಡ್ತಾರೆ,ನಿಮ್ಮ ಬಡ್ತನ ಹೋಗ್ಲಾಸ್ಡಕ್ಕೆನೇ ಅವರು ಹುಟ್ಟಿರೋದು ನಿಮ್ಮನ್ನೆಲ್ಲಾ
ಪಲ್ಲಕ್ಕಿ ಮೇಲೆ ಕು೦ಡ್ರುಸ್ತಾರೆ ನೋಡ್ತಿರಿ ನಾಳೆ ನೀನೇ ದಾಸಣ್ಣನ ಹತ್ರ ಮಾತಾಡುವಿಯ೦ತೆ ಆಯ್ತಾ "
ಸೀನಣ್ಣ ಮಕ ಊರಗಲ ಆಗೋಯ್ಯು"ಎಮ್ಮೆಲ್ಲೆ ದಾಸಪ್ಪನೋರ್ಗೆ ಜೈ" ಅ೦ತ ಜೋರಾಗಿ ಕೂಗುದ ಸುಸ್ತಾದೋರೆಲ್ಲಾ ಮತ್ತೆ
ಜೈ ಅ೦ದ್ರು.
"ಹೇ! ಪಟಾಕಿ ಬ೦ದವೆ ಸೀನಣ್ಣನ ಕರೀರಲೆ" ಅ೦ತ ಮ೦ಜ ಕೂಗ್ದ
ಸೀನಣ್ಣ ಪಟಾಕಿ ಹಚ್ಚೋದ್ರಲ್ಲಿ ಪೇಮಸ್ಸು ಕೈನಾಗೇ ಪಟಾಗಿ ಮಡಗಿ ಹಚ್ಕ್೦ಡು ಮೇಲೆ ಎಸೆದ್ ಬುಡ್ತಾನೆ ಅದು ಗಾಳೀಲೇ ಡ೦ ಅ೦ತದೆ
ಬಾ೦ಬುನ್ನ ಕೂಡಾ ಕೈನಾಗೆ ಹಚ್ತಾನೆ
ಸೀನಣ್ಣ ಪಟಾಕಿ ಕೈಗೆ ಎತ್ಕ೦ಡ ಕಣ್ಣಲ್ಲಿ ಮಿ೦ಚು ಪಳ ಪಳಾ೦ತ ವಳೀತಿತ್ತು
ರೋಡುದ್ದದ ಸರ ಹಚ್ಚಿ "ಬಡವರ ಬ೦ಧು ದಾಸಣ್ಣೋರ್ಗೆ ಜೈ" ಅ೦ದ ಎಲ್ರೂ ಜೈ ಅ೦ದ್ರು
ಕೈನಾಗೆ ಬಾ೦ಬಿನ ಪಾಕೆಟ್ ಹಿಡ್ಕ೦ಡಿದ್ದ ಒ೦ದು ಬಾ೦ಬ್ ಹಚ್ಚಿದ ಮ೦ಜ "ಸೀನಣ್ಣ ಹುಶಾರಿ " ಅ೦ದ
ಅವನ ಕಡೆ ನೋಡಿ ತಿರುಗೋದ್ರೊಳಗೆ ಬಾ೦ಬು ಸಿಡಿದಿತ್ತು ಪಾಕೇಟಲ್ಲಿದ್ದ ಎಲ್ಲಾ ಬಾ೦ಬುಗಳು ಡ೦ ಅ೦ದಿದ್ವು
ಸೀನಣ್ಣ ಕೆಳಗೆ ಬಿದ್ದ ಮತ್ತೆ ಮೇಲೇಳಲೇ ಇಲ್ಲ

ಮಾರನೇ ದಿನ ಎಮ್ಮೆಲ್ಲೆ ದಾಸಣ್ಣ ಊರಿಗೆ ಬ೦ದ್ರು ಊರೊಳಗೆ ಮೆರವಣಿಗೆಯಲ್ಲಿ ದಾಸಣ್ಣನ್ನ ಕರ್ಕೊ೦ಡು ಬರ್ತಾ ಇದ್ರು
ಸೀನಣ್ಣನ್ನ ಊರಿ೦ದ ಹೊರಕ್ಕೆ ಕರ್ಕೊ೦ಡು ಓಯ್ತಾ ಇದ್ರು