ಅಂತರ...

ಮುಂದೆ ಏನೂ ಇಲ್ಲ, ಗುರಿ ಇಲ್ಲ ದಾರಿ ಇಲ್ಲ
ಬಾಳಿಲ್ಲ ಬದುಕಿಲ್ಲ,ಕಣ್ಣು ಹರಿದಷ್ಟು ಖಾಲಿ ಖಾಲಿ..
ಎಲ್ಲಿ ಹೋಯಿತು ಹಸಿರು,ಭೊರ್ಗರೆವ ನೀರು?
ಹೂವಿನ ಕಂಪು,ಬೆಳದಿಂಗಳ ತಂಪು ...

ಹಕ್ಕಿಗಳ ನಿನಾದ,ಮೋಹದ ಉನ್ಮಾದ
ಕುಣಿವ ಮನಸಿನ ಆಟ,ಬರುವ ವಿರಹದ ಕಾಟ
ಇಲ್ಲ ಏನು ಇಲ್ಲ..ಎಲ್ಲ ಮುಗಿದ ಓಟ
ಕಣ್ಣಲ್ಲಿ ಬರೇ ಶುಷ್ಕ ನೋಟ,ವಿಧಿಯ ಕ್ರೂರ ಹೂಟ

ಸುತ್ತೆಲ್ಲ ಇತ್ತು ತಂಪಾದ,
ಸೊಂಪಾದ ನಿತ್ಯ ಹರಿದ್ವರ್ಣದ ನಾಡು.
ಈಗ ಧಗ ಧಗಿಸುವ ಮರುಳುಗಾಡಿನ ಕಾಡು.
ಒಹ್..!! ನಿನ್ನೆಗೂ ಇಂದಿಗೂ ಅದೆಷ್ಟು ಅಂತರ..!!!

-ಸುಬ್ಬು
೦೬-೦೧-೨೦೦೯ ೦೬:೩೦