ಎಲ್ಲರಿಗೂ ನಮಸ್ಕಾರ,
ನನ್ನ ಹೆಸರು ನಟರಾಜ, ನಾನು ಸಂಪದಕ್ಕೆ ಹೊಸದಾಗೆ ಸದಸ್ಯನಾಗಿದ್ದೇನೆ. ಸಂಪದವನ್ನು ಮೊದಲಿನಿಂದಲು ಒದುತ್ತಿದ್ದೆ ಆದರೆ ಸದಸ್ಯನಾಗಿರಲಿಲ್ಲ.
ಗಣಕ ಯಂತ್ರದಲ್ಲಿ ಕನ್ನಡ ಅಳವಡಿಸುವುದು ಅತ್ಯಂತ ಸುಲಭವಾಗಿದೆ, ಆದರೆ ಬಹಳ ಜನಕ್ಕೆ ಇದರ ಬಗ್ಗೆ ಅರಿವೆ ಇಲ್ಲ. ಜನರಿಗೆ ಇದರ ಬಗ್ಗೆ ಅರಿವು ಮೂಡಿಸಲು ಬಹಳ ಪ್ರಯತ್ನ ಮಾಡುತ್ತಿರುವೆ. ನಿಮ್ಮ ಸಲಹೆ ಇದ್ದರೆ ತಿಳಿಸಿ. ಕನ್ನಡದಲ್ಲಿ ಬರೆಯುವುದು ಮಾತ್ರವಲ್ಲ, ನಿಮ್ಮ windows office & XP ಗೆ ಕನ್ನಡದಲ್ಲೆ ಮೆನು, ಸಹಾಯ ಪದ ಎಲ್ಲವನ್ನು ಕಾಣಬಹುದು.
ಇದನ್ನು ವಿವರವಾಗಿ ಒಂದು PDF ಅಲ್ಲಿ ಬರೆದಿರುವೆ, ಎಲ್ಲರಿಗು ಕಳಿಸಲು ಪ್ರಯತ್ನಿಸುತ್ತಿದ್ದೇನಿ. ನಿಮಗೆ ಆಸಕ್ತಿ ಇದ್ದರೆ, ತಿಳಿಸಿ.
ನಟರಾಜ
ಪ್ರತಿಕ್ರಿಯೆ (5)
ನಾನು ವಿಂಡೋ ಎಕ್ಸ್ಪಿ ಬಳಸುತ್ತಿದ್ದೇನೆ (ಕನ್ನಡದ ಹೊದಿಕೆ). ಇಲ್ಲಿನ ಕೀಬೋರ್ಡ್ (ಇನ್ಸ್ಕಿಪ್ಟ್) ನಲ್ಲಿಯೂ ಕೆಲವು ಸಮಸ್ಯೆಗಳಿವೆ. ಕೋಲನ್, ಸೆಮಿಕೋಲನ್, ಪ್ರಶ್ನಾರ್ಥಕ ಚಿನ್ಹೆ, ಉಲ್ಲೇಖ ಚಿನ್ಹೆಗಳಿಗೂ ಇಂಗ್ಲೀಷ್ಗೆ ಬರಬೇಕು. ಅಲ್ಲದೆ ಜೀರೋ ವಿಡ್ತ್ ಜಾನಿಯರ್ಗೆ ಕಂಟ್ರೋಲ್ನೊಂದಿಗೆ ಮೂರು ಕೀ ಬಳಸಬೇಕು.
ಅಕಸ್ಮಿಕವಾಗಿ ನಾನು ಮೈಕ್ರೋಸಾಪ್ಟ್ ಕೀಬೋರ್ಡ್ ಲೇಔಟ್ ಕ್ರಿಯೇಟರ್ ಎಡವಿದೆ. (ಬಹುಶಃ ಕನ್ನಡದ ಲೋಕಲೈಜೇಷನ್ನಲ್ಲಿನ ಪವನಜ ಅವರ ಲಿಂಕ್ ಎಂದು ಕಾಣುತ್ತದೆ- ಇದು ಅದಿಕೃತ ವಿಂಡೋ ಎಕ್ಸ್ಪಿ ಬಳಸುವವರಿಗೆ ಡೌನ್ ಲೋಡ್ಗೆ ಲಭ್ಯವಿದೆ). ಇದನ್ನು ಬಳಸಿ ಮೇಲಿನವನ್ನು ಮುಖ್ಯ ಕೀಬೋರ್ಡ್ಗೆ ವರ್ಗಾಯಿಸಲು ಸಾಧ್ಯವಾಯಿತು. ಈಗ ಕನ್ನಡ ಟೈಪಿಸುವಾಗ ಇಂಗ್ಲೀಷ್ ಕೀಬೋರ್ಡ್ಗೆ ಬದಲಾಯಿಸುವ ಅಗತ್ಯವಿಲ್ಲ.
ಆದಾಗ್ಯೂ ಮೈಕ್ರೋಸಾಪ್ಟ್ ಒಂದು ಬಹುರಾಷ್ಟ್ರೀಯ ಕಂಪೆನಿ ಎಂಬುದನ್ನು ನಾವು ಮರೆಯ ಬಾರದು. ಲಾಭವಲ್ಲದೆ ಯಾವ ಸಾಂಸ್ಕೃತಿ ಜವಾಬುದಾರಿಯನ್ನು ಅದರಿಂದ ನಿರೀಕ್ಷಿಸುವುದು ಸಾಧ್ಯವಾಗುವುದಿಲ್ಲ. ವಿಂಡೋ ಎಕ್ಸ್ಪಿ ಕೊಂಡವರಿಗೆ ಹೊಸ ಮಾದರಿಯ ತುಂಗಾ ಪಾಂಟ್ ಕೊಡದಿರುವುದು (ಈ ಬಗೆಗಿನ ಭರವಸೆಯ ನಡುವೆಯೂ) ಅದರ ಕಾಳಜಿಯ ನೆಲೆಗಟ್ಟನ್ನು ಪ್ರದರ್ಶಿಸುತ್ತದೆ. ಹೀಗಾಗಿ ಅಂತ್ಯದಲ್ಲಿ ನಮಗೆ ಏನಿದ್ದರೂ ಓಪನ್ ಸೋರ್ಸ್ ಒಂದೇ ದಾರಿ. ಆದರೆ ಈ ಬಗೆಗಿನ ತಂತ್ರಾಶ ಸುಲಭ ಬಳಕೆ ಸಾಧ್ಯವಾಗುವವರೆಗೂ, ಕನ್ನಡದಲ್ಲಿ ಸುಲಭ ಬಳಕೆ ಅಸಾಧ್ಯ ಎಂಬ ಕಾರಣ ನೀಡಿ ಬಳಸದಿರುವ ಅಧಿಕಾರಶಾಹಿಗಳು (ಇಂಗ್ಲೀಷ್ ಪರ ವಾದಿಗಳು) ಹೆಚ್ಚಾಗಿದ್ದಾರೆ ಎಂಬುದನ್ನು ಸಹ ನಾವು ಮರೆಯಬಾರದು.
ಆಸಕ್ತಿದಾಯಕ ಅಂಶವೆಂದರೆ ಈಗ ಕನ್ನಡದ ಎರಡು ಪತ್ರಿಕೆಗಳು ಇ-ಪೇಪರ್ ಹೊರತಂದಿವೆ. ಆದರೆ ಅಲ್ಲಿ ಪದ ಹುಡುಕುವುದು ಸುಲಭವಲ್ಲ. (ಅವರೆಲ್ಲರೂ ಬೇರೆ ಬೇರೆ ಪಾಂಟ್ ಉಪಯೋಗಿಸುತ್ತಾರೆ) ಭಿನ್ನ ಭಿನ್ನ ಪಾಂಟ್ ಬಳಸುವ ಬದಲು ಯುನಿಕೋಡ್ ಪಾಂಟ್ಗಳನ್ನೇ ಅಭಿವೃದ್ಧಿ ಪಡಿಸಿ ಕೊಡಬಹುದಾಗಿತ್ತು. (ವಿಂಡೋ ಎಕ್ಸ್ಗಿಂತ ಹಿಂದಿನ ವಿಂಡೋ ಆವೃತ್ತಿಗಳನ್ನು ಬಳಸುತ್ತಿರುವವರ ಬಗೆಗಿನ ಸಮಸ್ಯೆಗೆ ಬೇರೆ ಪರಿಹಾರವಿಲ್ಲವೇ?) ತಕ್ಷಣದ ಪ್ರಜಾವಾಣಿಯ ಬಗೆಗಿನ ಪರಿಹಾರವೆಂದರೆ ವಾಸು ಅವರು ಕೊಡುವ ಕನ್ವರ್ಟ್ರ್ ಬಳಸಿ ಯುನಿಕೋಡ್ನಿಂದ ಬರಹಕ್ಕೂ ನಂತರ ಡೆಕ್ಕ್ನ್ ಶ್ರೀ ಪಾಂಟ್ಗೂ ಪರಿವರ್ತಿಸಿ ಹುಡುಕುವುದು. ಅದು ಅಷ್ಟು ಸಮಂಜಸವಾಗಿ ಕೆಲಸ ಮಾಡುತ್ತಿದ್ದಂತೆ ಭಾಸವಾಗುವುದಿಲ್ಲವಾದರೂ ಏನು ಇಲ್ಲದಿರುವುದಕ್ಕಿಂತ ಮೇಲು.
ಅದಕ್ಕಿಂತ ಹೆಚ್ಚಾಗಿ ಅಲ್ಲಿ ಬಳಸುವ ಅಡೋಬ್ ರೀಡರ್ (PDF) ಕನ್ನಡ ಯುನಿಕೋಡ್ನ್ನಾಗಲಿ, ಹುಡುಕುನಲ್ಲಿ ಪೋಸ್ಟ್ಕ್ರಿಪ್ಟ್ ಫಾಂಟ್ನ್ನಾಗಲಿ ತೋರಿಸಲಾರದು. ಅಷ್ಟು ವಿಸೃತವಾಗಿ ಅದನ್ನು ಕನ್ನಡಕ್ಕೆ ಬಳಸುತ್ತಿದ್ದಾಗ ಈ ಬಗೆಗಿ ಕಂಪೆನಿಯನ್ನು ಕೇಳಬಹುದಾಗಿತ್ತೇನೋ. ಈ ಕಂಪೆನಿ ಹಲವು ಭಾಷೆಗಳ ಬೆಂಬಲಕ್ಕೆ ಪೂರಕ ತಂತ್ರಾಶ ಬಿಡುಗಡೆ ಮಾಡಿದೆಯಾದರೂ ಅದರಲ್ಲಿ ಕನ್ನಡವಿಲ್ಲ. (ಯಾವುದೇ ಭಾರತೀಯ ಭಾಷೆ ಇಲ್ಲ). ಈ ಬಗೆಗೆ ಕನ್ನಡ ಪತ್ರಿಕೆಗಳಾವುವೂ ತಲೆಕೆಡಿಸಿಕೊಂಡಂತೆಯೂ ಕಾಣುತ್ತಿಲ್ಲ. ವಾಸ್ತವದಲ್ಲಿ ಸಾಂಸ್ಕೃತಿಕ ಜವಾಬುದಾರಿಯೆಂದರೆ ಇದೇ ಎಂದು ನನ್ನ ಗ್ರಹಿಕೆ.
ಇಂತಹ ಪ್ರಶ್ನೆಗಳ ಬಗೆಗೆ ನಾವು ಗಂಭೀರವಾಗಿ ಪರಿಗಣಿಸುವುದು ಯಾವಾಗ.