ಕಳೆದ ಒಂದೆರಡು ವಾರಗಳಲ್ಲೇ ಏನಿಲ್ಲ ಅಂದರೆ ಹತ್ತು ಕನ್ನಡ ಚಲನ-ಚಿತ್ರಗಳ ಬಿಡುಗಡೆ ಆಗಿದೆ. ಆದರೆ FUN ಸಿನಿಮಾಸ್ ಅವರು ತೋರಿಸುತ್ತಿರುವುದು ಎಷ್ಟು - ಸೊನ್ನೆ! ಅದೇ ಹಿಂದಿ ಚಲನ-ಚಿತ್ರಗಳ ಸುರಿಮಳೆ ನಡೆಯುತ್ತಲೆ ಇದೆ ಇವರಲ್ಲಿ.

ಇಷ್ಟೇ
ಅಲ್ಲ..ಇವರು ಹಲವಾರು ಹಿಂದಿ ಚಲನ-ಚಿತ್ರಗಳನ್ನು (ಗುಣಮಟ್ಟ ಇರಲಿ ಇಲ್ಲದಿರಲಿ) ತೋರಿಸುವುದರಲ್ಲಿ ತೊಡಗಿದ್ದು,
ಇವುಗಳ ಭರ್ಜರಿ ಪ್ರಚಾರ ಬೇರೆ ಮಾಡುತ್ತಿದ್ದಾರೆ. ಇಲ್ಲಿ ಕಾಣುವ ಚಿತ್ರದಿಂದ (___LINK_OPEN_href="/image/22160" target="_blank"___http://sampada.net/image/22160) ಇನ್ನೂ ಚೆನ್ನಾಗಿ ಅರ್ಥವಾದೀತು.. ಈ ಚಿತ್ರ ಎಲ್ಲರಿಗೂ ಫನ್ ಅವರು ಪ್ರಚಾರಕ್ಕೆಂದು ಕಳುಹಿಸುವ ಮಿಂಚೆಯಲ್ಲಿ ಪ್ರಕಟಗೊಳ್ಳುತ್ತಿದೆ.

ಅಲ್ಲದೆ ಈ ಚಿತ್ರವನ್ನೂ ನೋಡಿ (___LINK_OPEN_href="/image/22161" target="_blank"___http://sampada.net/image/22161). ಇದರಲ್ಲಿ 1
2 3 4 ಹೀಗೆ ಗುರುತು ಮಾಡಿರುವ ಜಾಗಗಳನ್ನು ಸರಿಯಾಗಿ ನೋಡಿ. ಇದು ಇವರ ಅಂತರ್ಜಾಲ ತಾಣದ ಮುಖಪುಟದ ನೋಟ. ಈ ತಾಣದಲ್ಲಿ
ಹಿಂದಿಯ ಪೂಜೆಯೇ ನಡೀತಿದೆ. ನಡೆಯಲಿ, ಆದರೆ ಬೆಂಗಳೂರಿನ IP ವಿಳಾಸಗಳಿಂದ ಬಂದ ನೋಡುಗನಿಗೂ ಈ ನೋಟವೇ? ನಮ್ಮ ಕನ್ನಡದ ಕಲಾವಿದರೆಲ್ಲಾ ತಾಣದಲ್ಲಿ ಕಾಣಿಸಿಕೊಳ್ಳಲು ಅರ್ಹರಲ್ಲವೆಂದೇ ಇವರ ನಿಲುವು? ಎಂತಹ ಅವಮಾನ!?

ಈ ಚಿತ್ರದಲ್ಲಿ ಹಿಂದಿ ಚಿತ್ರೋದ್ಯಮದವರು ಹಾಕಿಸಿರುವ ಜಾಹಿರಾತುಗಳನ್ನು
ಹೊರತುಪಡಿಸಿದರೆ ಮಿಕ್ಕೆಲ್ಲವೂ ಫನ್ ಅವರದ್ದೇ ಕರಾಮತ್ತು.. ಇವರಿಗೆ ಭಾರತದೆಲ್ಲೆಡೆ ಚಿತ್ರಮಂದಿರ ತೆಗೆಯಲು ಬಂದರೂ, ದೇಶದ ಒಂದೊಂದು ಭಾಗದಲ್ಲಿ ಒಂದೊಂದುಭಾಷೆ ಮಾತನಾಡುವ ಜನ ಇದ್ದಾರೆ, ಕರ್ನಾಟಕದೊಳಗಿರುವ ಬೆಂಗಳೂರಿನಲ್ಲಿ ಈ ಭಾಷೆ ಕನ್ನಡ, ಇಲ್ಲಿ ಜನ ಕನ್ನಡ ಚಿತ್ರ ನೋಡುತ್ತಾರೆ ಅನ್ನುವ ಸಾಮಾಣ್ಯ ಜ್ಞಾನ ಇವರಿಗೆ ಇಲ್ಲವೆಂಬಂತೆ ಗೋಚರವಾಗುತ್ತಿದೆ. ಈ ತಾಣವನ್ನು ನೋಡಿದ ಯಾರೇ ಆದರು ಏನು ನಂಬಬೇಕು - ಬೆಂಗಳೂರು ಅನ್ನುವ ಊರಿನಲ್ಲಿ ಚಲನ ಚಿತ್ರಗಳು ನೋಡುತ್ತಾರೆ, ಆದರೆ ಅವೆಲ್ಲಾ ಹಿಂದಿ ಅಥವಾ ಆಂಗ್ಲವೇ.. ಕನ್ನಡ ಚಿತ್ರರಂಗ ನಿದ್ದೆ ಮಾಡುತ್ತದೆ, ನೋಡಲಾಗುವಂತಹ ಚಿತ್ರ ತೆಗೆಯುವುದಿಲ್ಲ ಎಂದು ಅಂದುಕೊಳ್ಳುವುದು ಖಚಿತ.

ಈ ವಿಷಯದಲ್ಲಿ ಜವಾಬ್ದಾರಿಯುತ ಕನ್ನಡಿಗ ಗ್ರಾಹಕನು ಈ ಕಂಪನಿಗೆ ದೂರು ನೀಡಬಹುದು. ಇವರಿಗೆ ಕನ್ನಡ ಚಿತ್ರಗಳನ್ನು ತೋರಿಸುವುದರಿಂದ ಆಗುವ ಲಾಭದ ಮನವರಿಕೆ ಮಾಡಿಕೊಡಬಹುದು, ಕನ್ನಡ ಮಾತಾಡುವ ಜನರಿರುವ ಸಮಾಜದಲ್ಲಿ ಭಾಷೆಯ ಆಧಾರದ ಮೇಲೆ ಬಿರುಕು ತಂದರು ಎಂಬ ಮಾತಿಗೆ ತುತ್ತಾಗದೇ ಇರಲು, ಕನ್ನಡ ಚಿತ್ರಗಳನ್ನೇ ತೋರಿಸಿ, ಆಗ ನೋಡಿ ನಿಮ್ಮ ಸಂಪಾದನೆಯನ್ನ ಅಂತಲೂ ಹೇಳಬಹುದು.

ಈ ವಿಷಯಕ್ಕೆ ನಿಮ್ಮ ಅನಿಸಿಕೆ "ಹೌದು" ಆದರೆ ಇವರಿಗೆ ಬುದ್ದಿ ಮಾತು ಹೇಳುವ ಮಿಂಚೆ ಬರೆಯಿರಿ - <___LINK_OPEN_href="mailto:[email protected]" target="_blank"[email protected]>. ಈತ ಈ ಕಂಪನಿಯ ಬೆಂಗಳೂರಿನ ಜವಾಬ್ದಾರಿಯುತ ಕಾರ್ಮಿಕ.
ಕನ್ನಡ ಚಿತ್ರೋದ್ಯಮ ಸತ್ತಿಲ್ಲ, ಜೀವಂತವಾಗಿರುವ ಉದ್ಯಮ, ಇಲ್ಲಿ ಸಾಕಷ್ಟು ಜನಪ್ರಿಯ ಚಿತ್ರಗಳು ಹೊರಬರುತ್ತಿವೆ, ಸಂಗೀತ ಅಂತೂ ಹೇಳುವ ಹಾಗೇ ಇಲ್ಲ, ಒಂದೊಂದೂ ಸೂಪರ್ ಹಿಟ್ ಗಳೇ ಆಗುತ್ತಿವೆ. ಇನ್ನು ಕನ್ನಡ ಚಿತ್ರಗಳನ್ನೇ ತೋರಿಸದಿರಲು ಏನು ಇವರ ಕಾರಣ ಎಂದು ಕೇಳೋಣ. ಕಾರವೇ ಕೊಡದೇ ಹೋದಲ್ಲಿ ನಿಜವಾದ ಕಾರಣ ಏನು ಅಂತ ಅರ್ಥವಾಗುತ್ತಲ್ಲಾ!

(ಇದಕ್ಕೆ ಸಂಬಂಧಿಸಿದ ಈ ಬ್ಲಾಗನ್ನೂ ಓದಿ: ___LINK_OPEN_href="/blog/priyankks/17/05/2009/20340" target="_blank"___http://sampada.net/blog/priyankks/17/05/2009/20340 ; ಇಷ್ಟೋಂದು ಜನ ಇವರ ಸಮಸ್ಯೆಯ ಬಗ್ಗೆ ಬರೆಯುತ್ತಿದ್ದಾರೆ ಅಂದರೆ ಏನೋ ಸಕ್ಕತ್ ತೊಂದರೆ ಇದೆ ಫನ್ ಅವರಲ್ಲಿ)