ಭಾಗ - 1 -->
___LINK_OPEN_href="http://sampada.net/article/22231" target="_blank"___"ವಂದೇ ಮಾತರಂ" ನಮ್ಮ ರಾಷ್ಟ್ರಗೀತೆಯಾಗಬೇಕಿತ್ತೆ...? - ೧
ಮುಂದುವರಿಯುತ್ತ...
"ವಂದೇ ಮಾತರಂ" ಗೀತೆ ಬಂಕಿಮ್ ಚಂದ್ರ ಚಾಟರ್ಜಿ ರವರಿಂದ ನವಂಬರ್ ೭, ೧೮೭೫ ರಲ್ಲಿ ಸಂಸ್ಕ್ರತ ಮತ್ತು ಬೆಂಗಾಳಿ ಮಿಶ್ರಿತ ಸಾಲುಗಳಲ್ಲಿ ರಚಿತವಾಗಿತ್ತು. ಅಂದು ಶೈಶವ್ಯದಲ್ಲಿ ಇದ್ದ ಭಾರತದ ಸ್ವಾತಂತ್ರ ಅಂದೋಲನಕ್ಕೆ ಈ ಗೀತೆಯೇ ಒಂದು ಪ್ರೇರಣೆ. ಬ್ರಿಟಿಷರ ವಿರುದ್ಧ ಹೋರಾಟಕ್ಕೆ ನಿಂತ ಜನರಿಗೆ ಸ್ಪೂರ್ತಿಯ ಸಾಲು... ೧೮೯೬ ರಲ್ಲಿ ನೆಡೆದ ರಾಷ್ಟ್ರೀಯ ಕಾಂಗ್ರೆಸ್ ಸಭೆಯಲ್ಲಿ ಈ ಗೀತೆಯನ್ನು ಪ್ರಥಮ ಬಾರಿ ಹಾಡಲಾಯಿತು. ಈ ಗೀತೆ ೧೮೭೬ ರಲ್ಲೇ ರಚಿತಗೊಂಡಿದ್ದರೂ, ೬ ವರ್ಷಗಳ ಸುದೀರ್ಘ ಸಮಯದ ನಂತರ, ಬ್ರಿಟಿಷ್ ರಾಜ್ ಸರ್ಕಾರದ ನಿಷೇಧದ ಭೀತಿಯ ನೆರಳಿನಲ್ಲಿ ಚಾಟರ್ಜಿಯವರ ಪುಸ್ತಕ "ಆನಂದ ಮಠ" ರಲ್ಲಿ ೧೮೮೨ರ ಇಸವಿಯಂದು ಪ್ರಕಾಶಿತಗೊಂಡಿತ್ತು.
"ವಂದೇ ಮಾತರಂ" ನ ಸಾಲುಗಳೇ ಅಷ್ಟು ಪರಿಣಾಮಕಾರಿಯಾಗಿದ್ದವೆಂದರೆ ಈ ಗೀತೆ ಬ್ರಿಟಿಷರ ವಿರುದ್ಧದ ಆರಂಭಗೊಂಡಿದ್ದ ಸ್ವಾತಂತ್ರ ಅಂದೋಲನದ ಒಂದು ರಾಷ್ಟ್ರೀಯ ಕರೆಯೇ ಆಗಿಹೋಯಿತು. ಬೆಂಗಾಳದಲ್ಲಿ ಆಗ ಏಳುತ್ತಿದ್ದ ಪ್ರತಿಭಟನೆ, ಬೃಹತ್ ರಾಲಿ... ಅದು ಯಾವ ಮೂಲೆಯಾಗಿದ್ದರೂ ಸರಿ.., "ವಂದೇ ಮಾತರಂ" ನ ಜಯಘೋಷವಿರದೆ ಇರುತಿರಲಿಲ್ಲ. ಅಂತೂ ಬ್ರಿಟಿಷರಿಗೆ ಇದರ ಬಿಸಿ ಕೊನೆಗೂ ತಟ್ಟಿ ಅಂದು ನಡೆಯುತ್ತಿದ್ದ ಸಮಾರಂಭಗಳಲ್ಲಿ ಈ ಗೀತೆಯ ಸಾಲುಗಳನ್ನು ಹಾಡದಂತೆ ನಿಷೇಧ ಹೇರಿದ್ದಲ್ಲದೇ ಅದನ್ನು ಉಲ್ಲಂಗಿಸಿದವರಿಗೆ ಜೈಲು ಶಿಕ್ಷೆ ಸಹ ಜಾರಿಗೊಳಿಸಿದರು. ಅದಕ್ಕೆ ಏನೋ, ಇಂದು ಸಹ ಈ ಗೀತೆ ಭಾರತೀಯ ಹೃದಯಗಳಲ್ಲಿ ದೇಶ ಭಕ್ತಿ ಉಕ್ಕಿಸುವ ಮಹಾ ಮಂತ್ರವಾಗಿ ಸದಾ ಕಾಲ ನಿಂತಿದೆ.
ಸ್ವಾತಂತ್ರ ಪೂರ್ವದವರೆಗೂ ಭಾರತದ ರಾಷ್ಟ್ರಗೀತೆಯೆಂದೇ ಭಾವಿಸಲ್ಪಟ್ಟಿದ್ದ "ವಂದೇ ಮಾತರಂ" ಗೀತೆ ಕೊನೆಗೂ "ಜನ ಗಣ ಮನ..." ದ ಮುಂದೆ ತನ್ನ ಸ್ಥಾನ ಬಿಟ್ಟುಕೊಡಬೇಕಾಯಿತು. ಸ್ವತಂತ್ರ ಭಾರತದ ರಾಷ್ಟ್ರಗೀತೆಯನ್ನಾಗಿ ಅಯ್ಕೆಯಾಗಲು ಇವೆರೆಡು ಗೀತೆಗಳ ಮಧ್ಯೆ ಸ್ಪರ್ಧೆ ಏರ್ಪಟ್ಟಾಗ ವಿವಾದಗಳ ನಡುವೆಯೇ "ಜನ ಗಣ ಮನ..." ಅಯ್ಕೆಯಾಗಿತ್ತು. "ವಂದೇ ಮಾತರಂ" ಗೀತೆಯಲ್ಲಿ ದೇಶಭಕ್ತಿಯ ಜೀವರಸ ತುಂಬಿ ಹರಿಯುತ್ತಿದ್ದರೂ ಅನ್ಯ ಧರ್ಮೀಯರು ಆ ಗೀತೆಯಲ್ಲಿ ಭಾರತ ಮಾತೆಯನ್ನು(ದೇಶವನ್ನು) "ದುರ್ಗ ಮಾತೆ" ಗೆ ಹೋಲಿಸಿದ್ದನ್ನು ಇಷ್ಟಪಟ್ಟಿರಲಿಲ್ಲ. ಗೀತೆಯಲ್ಲಿನ ಹಿಂದು ದೇವತೆಯ ಹೆಸರಿನ ಪ್ರಯೋಗ, "ಶಕ್ತಿ" ಸ್ವರೂಪದ ವರ್ಣನೆ ಮತ್ತು ಈ ಗೀತೆ ಮೊದಲಬಾರಿಗೆ ಪ್ರಕಟಗೊಂಡಿದ್ದ "ಅನಂದ ಮಠ" ಪುಸ್ತಕದ "ಅನ್ಯಧರ್ಮದ ವಿರುದ್ಧ ಭಾವನೆ/ಸಂದೇಶ"(!) ಬಿತ್ತುವ ನೆರಳು ಈ ಗೀತೆಯನ್ನು ರಾಷ್ಟ್ರಗೀತೆಯನ್ನಾಗಿ ಅಗದಿರಲು ಮೂಲ ಕಾರಣಗಳಾದವು.
(ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಗಳನ್ನು ಕ್ಲಿಕಿಸಿ: ___LINK_OPEN_rel="nofollow" href="http://en.wikipedia.org/wiki/Vande_Mataram" target="_blank"___ಮಾಹಿತಿ-೧ ಮತ್ತು ___LINK_OPEN_rel="nofollow" href="http://www.vandemataram.com/vande/controversy.htm" target="_blank"___ಮಾಹಿತಿ-೨)
ವಿವಾದಗೊಳಪಟ್ಟ ಆ ಸಾಲುಗಳು ಹೀಗಿವೆ:
ತ್ವಂ ಹಿ ದುರ್ಗಾ ದಶಪ್ರಹರಣಧಾರಿಣೀ
ಕಮಲಾ ಕಮಲದಲ ವಿಹಾರಿಣಿ
ವಾಣಿ ವಿದ್ಯಾದಾಯಿನಿ, ನಮಾಮಿ ತ್ವಾಂ
ನಮಾಮಿ ಕಮಲಾಂ ಅಮಲಾಂ ಅತುಲಾಂ
೧೯೩೭ ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಈ ಗೀತೆಯ ಬಗ್ಗೆ ಚರ್ಚೆ ಅರಂಭಿಸಿದಾಗ, ಮೊದಲೆರಡು ಪದ್ಯದ ಸಾಲುಗಳು (Stanza) ಮಾತೃ ಭೂಮಿಯ ವರ್ಣನೆ ಬಣ್ಣಿಸಲು, (ಇದರ ಬಗ್ಗೆ ಯಾರಿಗೂ ಅಭ್ಯಂತರವಿರಲಿಲ್ಲ...) ಮುಂದುವರೆದ ಭಾಗಗಳಲ್ಲಿ ಮಾತೃ ಭೂಮಿಯನ್ನು (ಅಂದರೆ ಭಾರತವನ್ನು) ಮಾತೆ ದುರ್ಗೆ ಗೆ ಹೋಲಿಸಲಾಗಿದೆ ಎಂದು ಅಭಿಪ್ರಾಯಪಟ್ಟಿತು. ಈ ಎಲ್ಲಾ ವಾದ-ವಿವಾದಗಳ ನಡುವೆ ಕೇವಲ ಮೊದಲೆರಡು ಪದ್ಯದ ಸಾಲುಗಳನ್ನು (Stanza) ಮಾತ್ರ ರಾಷ್ಟ್ರಗೀತೆಯ ಭಾಗವನ್ನಾಗಿ ಅಯ್ಕೆ ಮಾಡಲಾಯಿತು. ಇಂದು ಕೂಡ ಈ ಎರಡು ಪದ್ಯದ ಸಾಲುಗಳನ್ನು ಮಾತ್ರ "ಜನ ಗಣ ಮನ" ಮತ್ತು ೧೯೧೦ ರಲ್ಲಿ ಕವಿ ಇಕ್ಬಾಲ್ ರವರು ಬರೆದ " ಸಾರೆ ಜಹ ಸೇ ಅಚ್ಚಾ" ಗೀತೆಯ ಜೊತೆ ಅಧಿಕೃತವಾಗಿ ಉಳಿಸಿಕೊಳ್ಳಲಾಗಿದೆ.
ಭಾರತದ ಮೊದಲ ರಾಷ್ತ್ರಪತಿಯಾದ ಡಾ|| ರಾಜೇಂದ್ರ ಪ್ರಸಾದ್ ರವರು ಜನವರಿ ೨೪ ೧೯೫೦ ರಂದು ನೆಡೆದ ಮೊದಲ ಸಂವಿಧಾನ ಸಭೆಯ ಅಧ್ಯಕ್ಷತೆ ವಹಿಸಿದ್ದಾಗ "ವಂದೇ ಮಾತರಂ" ಗೀತೆಯ ಬಗ್ಗೆ ಈ ಕೆಳಗಿನ ಮಾತುಗಳನ್ನು ಹೇಳಿದ್ದರು. (ನಂತರ ಇದನ್ನೇ ರಾಷ್ಟ್ರಗೀತೆಯ ಕುರಿತಾದ ಚರ್ಚೆಯ ಕೊನೆಯ ಮತ್ತು ಅಂತಿಮ ನಿರ್ಣಯ ಎಂದೇ ಭಾವಿಸಲಾಯಿತು):
"ಜನ ಗಣ ಮನ ಎಂಬ ಸಾಲನ್ನು ಹೊಂದಿರುವ ಗೀತೆಯನ್ನು ಇಂದು ನಾವು ರಾಷ್ಟ್ರ ಗೀತೆಯೆಂದು ಒಪ್ಪಿಕೊಳ್ಳುತ್ತೇವೆ. ಈ ಗೀತೆಯಯಲ್ಲಿ ಮುಂದೆ ಬರುವ ಎಲ್ಲಾ ಬದಲಾವಣೆಗಳು ಸರ್ಕಾರದ ಮೇಲ್ವಿಚಾರಣೆಯಲ್ಲಿರುತ್ತದೆ. ಇಲ್ಲಿ ನಾವು "ವಂದೇ ಮಾತರಂ" ಗೀತೆಗೂ "ಜನ ಗಣ ಮನ" ಗೀತೆಗೆ ಕೊಟ್ಟಿರುವಷ್ಟೆ ಮಹತ್ವ ಮತ್ತು ಸಮ್ಮಾನವನ್ನು ನೀಡುತ್ತೇವೆ. ಏಕೆಂದರೆ ಈ ಗೀತೆ ನಮ್ಮ ಭಾರತದ ಸ್ವಾತಂತ್ರ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದನ್ನು ನೀವೆಲ್ಲರೂ ನೋಡಿದ್ದೀರಿ. ಹಾಗೇ ಇಂದು ಇದರ ಕುರಿತಾಗಿ ನೆಡೆದ ಚರ್ಚೆ ನಿಮಗೆ ನ್ಯಾಯಸಮ್ಮತವಾಗಿ ಒಪ್ಪಿಗೆಯಾಗಿದೆ ಎಂದು ನಂಬಿರುತ್ತೇನೆ..."
ಮಾಹಿತಿಗೆ ಈ ಕೆಳಗಿನ ಲಿಂಕ್ ಗಳನ್ನು ಕ್ಲಿಕ್ಕಿಸಿ:
___LINK_OPEN_rel="nofollow" href="http://www.responze.com/articles.aspx?DocSource=docs/social/pastures_of_greens.xml&XSL=articles.xslt" target="_blank"___ಮಾಹಿತಿ-೧ ಮತ್ತು ___LINK_OPEN_rel="nofollow" href="http://www.thehindu.com/fline/fl1601/16010940.htm" target="_blank"___ಮಾಹಿತಿ-೨
ಆಂತೂ "ವಂದೇ ಮಾತರಂ" ಅಂದು ರಾಷ್ಟ್ರ ಗೀತೆಯಾಗುವ ಅವಕಾಶ ತಪ್ಪಿಸಿಕೊಂಡಿದ್ದರೂ ತನ್ನ ಅಪ್ಪಟ ದೇಶಭಕ್ತ ನುಡಿಗಳಿಂದ ಭಾರತದ ಪ್ರತಿಯೊಬ್ಬ ಪ್ರಜೆಯ ಹ್ರದಯದಲ್ಲಿ ಎಬ್ಬಿಸಿದ ಸ್ವತಂತ್ರದ ಕಿಡಿ ದೊಡ್ಡ ಜ್ವಾಲೆಯಾಗಿ ಹರಡಿ, ದೇಶದ ಜನರನ್ನು ಒಗ್ಗುಡಿಸುವಲ್ಲಿ ಮಾಡಿದ ಪರಿಣಾಮಕಾರಿ ಪಾತ್ರ... "ಸೂರ್ಯ ಮುಳುಗದ ದೇಶ" ವೇ ಹೆದರಿ ನಮ್ಮ ಭಾರತವನ್ನು ಬಿಟ್ಟು ಓಡುವಂತೆ ಮಾಡಿದ್ದು ಎಂದೂ ಮರೆಯಲಾಗದು... ನಮ್ಮ ಇಂದಿನ ಸ್ವಾತಂತ್ರಕ್ಕೆ ಅಂದು ಈ ಗೀತೆ ಸಲ್ಲಿಸಿದ ಮಹತ್ತರ ಕಾಣಿಕೆ ಆಪಾರ. ಬನ್ನಿ, ನಾವೆಲ್ಲರೂ ಕೂಗಿ-ಕೂಗಿ ಹೇಳೋಣ --- "ವಂದೇ ಮಾತರಂ".
ಜಯ್ ಹಿಂದ್.
ಮುಗಿಯಿತು...
ಪ್ರತಿಕ್ರಿಯೆ (3)
ಈ ಹಾಡನ್ನು ಬರೆದವರಿಗೆ ಹೇಗೆ ಆದು ಸ್ಪೂರ್ತಿಯೋ ಹಾಗೇ ಅದಕ್ಕೆ ಕೊಟ್ಟಿರುವ ಸ್ವರ ಸಂಯೋಜನೆಯೂ ( ರವೀಂದ್ರನಾಥ ಟಾಗೋರರಿಂದ ಎ.ಅರ್. ರೆಹ್ ಮಾನ್ ರವರೆಗೆ...) ಸಹ ಆ ಹಾಡಿಗೆ ಅಷ್ಟೆ ಮಹತ್ವ ಕೊಟ್ಟಿದೆ. ನಿಜಕ್ಕು ಈ ಹಾಡು ಕೇಳಲು ಒಂದು ರೋಮಂಚನ... ಜಯ ಭಾರತ ಮಾತೆಗೆ, ಜಯ ಬಂಕಿಮರಿಗೆ :)