ಮನಸ್ಸಿನ ಬಾವನೆಗೆ ಕವಿದಿದೆ ಮುಸುಕು..

ಮುಸುಕು ತೆರೆಯಲು ಬೇಕಿದೆ ತುಸು ಬೆಳಕು.

ಮನಸ್ಸಿನ ಆಳದಲ್ಲಿ ಮಾಸದ ನೆನಪು

ತುಂಬಿದೆ ಬರೀ ಯಾತನೆ......!

 

ತೊಳಲಾಟದ ಬದುಕಿನಲ್ಲಿ ತೆವಳುತಿದೆ ಜೀವ

ತೊಡಕು ಸರಿಯದೆ ಕಳೆಯದು ಈ ನೋವು

ಹರುಕು ಮುರುಕು ಮನಸ್ಸಿನಲ್ಲಿ

ತುಂಬಿದೆ ಬರೀ ಯಾತನೆ...!

 

ದಡವ ಮುಟ್ಟುವ ತವಕದಲ್ಲಿ ತೀರವ ಮರೆತು

ದಿಕ್ಕು ತೋಚ್ಚಿದ ಕಡೆಗೆ ಈಜುತಿರುವ ಬದುಕು

ಆಯಾತಪ್ಪಿದರೆ ಕೊನೆಯಾಗುವುದು ಪಯಣ

ತುಂಬಿದೆ ಬರೀ ಯಾತನೆ....!

 

ಬರಡು ಭೂಮಿಯಲ್ಲಿ ಹನಿಯೊಂದು ಬಿದ್ದರೆ

ಸುಡುವ ಕಾವು  ಹನಿಯ ನುಂಗಿ

ದಾಹ ತೀರದೆ ಮತ್ತೆ ಕಾಯುವುದು ಮತ್ತೊಂದು ಹನಿಗೆ..

ತುಂಬಿದೆ ಬರೀ ಯಾತನೆ....!

 

ತರೆದ ಮನಕ್ಕೆ ಮರುಕ ಯಾಕೆ

ಸುಡುವ ಕಹಿಯ ನೆನಪು ಬೇಕೆ....?

ಬೀಸದೆ ಹೋದೆಯ ಓ ತಂಗಾಳಿ ನೀನೆಕೆ...

ತುಂಬಿದೆ ಬರೀ ಯಾತನೆ.....!

 

ಯಾತನೆಯು ಏತಕೆ

ಮುನ್ನುಗಿ ನಡೆದರೆ ಎಲ್ಲವು ಸಾದ್ಯತೆ...

ಎಂದೆಬ್ಬಿಸುತ್ತದೆ ಒಳಗಿನ ಮನಸ್ಸು

ಆದರು ಏತಕೋ ಯಾತನೆ.. ಎಂದು ಮರುಗುತಿದೆ ಅದೇ ಮನಸ್ಸು...!

----ಧನು,