ಸಂಪದ ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ, ಆದರೆ ಎಲ್ಲ ಸರಿ ಹೋಗಿಲ್ಲ. ಇನ್ನೂ ಹಲವು ಕೆಲಸ ಕಾರ್ಯಗಳು ಬಾಕಿ ಇವೆ. ಸಂಪದ ಪುಟ್ಟ ಹೆಜ್ಜೆಗಳನ್ನಿಡುತ್ತ ಚೆಂದಗೊಳ್ಳುತ್ತ ಹೋಗಲಿ.
ಈ ದಿಶೆಯಲ್ಲಿ ನಡೆಯುವಾಗ ಸಮುದಾಯದ ಸದಸ್ಯರ ಸಾಥ್ ಕೂಡ ಬೇಕು.
ತಕ್ಷಣ ಎದುರಿರುವ ಕೆಲವು ತಾಂತ್ರಿಕ ಕೆಲಸಗಳು ಕೆಳಗಿನಂತಿವೆ:
- ಸಂಪದ ಸರ್ವರಿನ MySQL ಸರ್ವರ್ optimize ಮಾಡಬೇಕಿದೆ.
- ಸಂಪದ ಸರ್ವರಿನ ಮೇಯ್ಲಿಂಗ್ ಲಿಸ್ಟುಗಳು mailman ಎಂಬ ಸ್ವತಂತ್ರ ತಂತ್ರಾಂಶ ಬಳಸುತ್ತದೆ. ಇದನ್ನು ಮತ್ತೆ ಹಿಂದಿನಂತೆ ರೆಡಿ ಮಾಡುವ ಕೆಲಸ ಬಾಕಿ ಇದೆ.
- ಸಂಪದ ತೀರ ದೊಡ್ಡದಾಗಿಬಿಟ್ಟಿರುವ ಕಾರಣ ಸರ್ಚ್ ಎಂಜಿನುಗಳ bots ಭೇಟಿಕೊಟ್ಟಾಗ ಹಲವು ಸಮಸ್ಯೆಗಳು ಎದುರಾಗುತ್ತಿವೆ. ಇದನ್ನು ಕೂಡ ಹೊಂದಿಸಬೇಕಿದೆ.
'ಸಂಪದ' ಸದಸ್ಯರಲ್ಲಿ ಈ ಕುರಿತ ತಾಂತ್ರಿಕ ಪರಿಣಿತಿ ಇರುವವರು ಮೇಲಿನ ಕೆಲಸಗಳನ್ನು ಕೈಗೆತ್ತಿಕೊಳ್ಳುವಲ್ಲಿ ಆಸಕ್ತಿ ಇದ್ದಲ್ಲಿ ನಿರ್ವಹಣೆ ತಂಡವನ್ನು ಸಂಪರ್ಕಿಸಬಹುದು.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!