ಇದಕ್ಕೆ ಮೊದಲು ಹಿಂದಿನ ಅಧ್ಯಕ್ಷ ’[[ಜಾರ್ಜ್ ಬುಷ್]]’ ರವರು, ದೀಪವಳಿಹಬ್ಬಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿದ್ದರು. ಆದರೆ, ಅವರ ಸಂಗಡಿಗರೊಡನೆ ಹಬ್ಬವನ್ನು ಆಚರಿಸಲಾಗಲಿಲ್ಲ. ಈ ಬಾರಿ ’[[ಅಧ್ಯಕ್ಷ ಒಬಾಮಾ]]’ ರವರು, ’[[ವೈಟ್ ಹೌಸ್]] ನ ಸಿಬ್ಬಂದಿವರ್ಗ ಹಾಗೂ ಭಾರತೀಯ ಸಮುದಾಯದವರೊಂದಿಗೆ, ಸೇರಿಕೊಂಡು ದೀಪಾವಳಿಯನ್ನು ಆಚರಿಸಿದ ಪ್ರಪ್ರಥಮ ಅಧ್ಯಕ್ಷರೆಂಬ ಹೆಗ್ಗಳಿಕೆಗೆ ಪಾತ್ರರಾದರು. ಪಂ. ನಾರಾಯಣಾಚಾರ್ ದಿಗಲ್ ಕೋಟೆಯವರು ಮಂತ್ರ ಪಠಿಸುತ್ತಿದ್ದಂತೆಯೇ ವಿಶ್ವಶಾಂತಿಯ ಪ್ರಾರ್ಥನೆಗೈದು, ದೀಪ ಬೆಳಗಿ ದೀಪಾವಳಿಯ ಶುಭಾಶಗಳನ್ನು ಎಲ್ಲರೊಡನೆ ಹಂಚಿಕೊಂಡರು. ಐತಿಹಾಸಿಕ, ’[[ಈಸ್ಟ್ ರೂಂ]],’ ನಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಒಬಾಮಾರವರು, "ಬೆಳಕಿನ ಹಬ್ಬ ದೀಪಾವಳಿಯು ಕೆಟ್ಟದರ ವಿರುದ್ಧ ಒಳಿತಿನ ವಿಜಯವಾಗಿದೆ. ಮನುಷ್ಯನಲ್ಲಿನ ಅಜ್ಞಾನವನ್ನು ತೊಲಗಿಸುವ ಪರ್ವದಿನವಾಗಿದೆ," ಯೆಂದು ನುಡಿದರು.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!