ಓ ಹೆಂಗಸರೇ, ನೀವೆಷ್ಟು ಒಳ್ಳೆಯವರು!

ತಾಯಾಗಿ ಮಗುವಿಗೆ, ಎದೆ ಹಾಲ ನೀಡಿ,
ತಂಗಿಯಾಗಿ ಮಧುರ ಪ್ರೀತಿಯ ನೀಡಿ,
ಅಕ್ಕನಾಗಿ ಅಮರ ವಾತ್ಸಲ್ಯ ತೋರಿ,
ಪತ್ನಿಯಾಗಿ ಬಾಳ ದೋಣಿಯ ಜೊತೆ ಸಾಗುವಿರಿ,

ಓ ಹೆಂಗಸರೇ, ನೀವೆಷ್ಟು ಒಳ್ಳೆಯವರು!

ಅಮೃತವಾಗುವಿರಿ, ನಿಮ್ಮವರಿಗೆ
ವಿಷವಾಗುವಿರಿ ನಿಮಗಾಗದವರಿಗೆ,
ಸುರಿಸುವಿರಿ ಪ್ರೀತಿಯ ಹೂಮಳೆ,
ಕಕ್ಕುವಿರಿ, ವಿಷದ ಜ್ವಾಲೆ,
ಸಂಬಂಧಗಳ ಸುಡುವಿರಿ,

ಓ ಹೆಂಗಸರೆ, ನೀವೆಷ್ಟು ಒಳ್ಳೆಯವರು!!

ಗೋಡೆ ಎಬ್ಬಿಸುವಿರಿ ಮನಗಳ ನಡುವೆ,
ಮನಗಳ ಒಡೆಸುವಿರಿ, ತಾಯ್ತಂದೆಯರ ನಡುವೆ,
ವೈಮನಸ್ಯ ಹುಟ್ಟಿಸುವಿರಿ, ಅಣ್ಣ ತಮ್ಮಂದಿರ ನಡುವೆ,
ಗಾಯಗಳ ಮಾಡುವಿರಿ, ಕಂದಮ್ಮಗಳ ಎದೆಯಲ್ಲಿ,

ಓ ಹೆಂಗಸರೆ, ನೀವೆಷ್ಟು ಒಳ್ಳೆಯವರು!!!