ಜೀವ ಜೀವ ಸೆಳೆತ, ಪ್ರತಿ ಮನಸಿನ ಮಿಡಿತ

ಹಿಡಿ ಎದೆಯ ಏರಿಳಿತ, ಆತ್ಮನ ತುಡಿತ

ಎಲ್ಲಾ ಬಯಸುವುದೊಂದೇ, ಬರೀ ಪ್ರೀತಿ, ಒಲವು.

 

ಇರಲಾರ ಯಾವನೂ, ಯಾವಳೂ, ಇರದೇ ಸ್ಪಂದನ

ಸ್ಪಂದನವೇ ಬಂಧನ, ಬಂಧನವೇ ಜೀವನ

ಮನ ಮನಸಿನ ಸಮ್ಮೋಹನ, ಸ್ನೇಹದ ಸಂಕಲೆಯ ಬಂಧನ

 

ಕಣ್ಣು ಕಣ್ಣು ಸೇರಿದರೇ ಮೋಹನ, ಸಮ್ಮೋಹನ

ಮನಸು ಮನಸು ಸೇರಿದರೇ ಸ್ಪಂದನ, ಅಂತರಾತ್ಮಗಳು ಸೇರಿದರೆ ಬಂಧನ

ಹೃದಯ ಹೃದಯ ಸೇರಿದಾಗಲೇ ಜೇವನ.