ಅರೆ ಬೆ೦ದ ಕಾಳಿನೊಳಗೆ
ತಿಳಿವಿನ ಹೂ೦ಕಾರ
ಪೂರ್ತಿ ಬೇಯುವ ಮು೦ಚೆಯೇ
ಕುಣಿಕುಣಿದು ಮೇಲೇಳುತಿದೆ
ಸತ್ಯ ಓ ಸತ್ಯ
ಕುದಿಕುದಿದು ನಗುವಾಗ
ಉಳಿದದ್ದೆಲ್ಲಾ ಮಿಥ್ಯ
ಸತ್ವಯುತ ರಸವೂ ವಿರಸವೋ
ರುಚಿ ಹೆಚ್ಚು,ಬರೀ ಹುಚ್ಚು
ಅಗಿಅಗಿದು ತಿ೦ದಷ್ಟು
ನಾಲಗೆಗೆ ವಾಸನೆ ಸೋಕಿ
’ಆತ್ಮಾಮೇ ಶುಧ್ಯ೦ತಾ೦’
ಕೇಳಲಿಕ್ಕೇನು ? ದುಡ್ಡೇ ಕಾಸೇ?
ಕುಣಿದವನ ಮುಖದಲ್ಲಿ
ಬೆವರ ಹನಿ
ಗೆಲ್ಲಲಿಲ್ಲ ಸುಮ್ಮನೆ ಕುಣಿದ
ಮತ್ತು ದಣಿದ
ದಣಿವು ಆತ್ಮಕ್ಕೋ ಇಲ್ಲಾ
ದೇಹಕ್ಕೋ ?
ನೋವಾಗಿದ್ದು ಮಾತ್ರ
ಕೈ ಕಾಲು ಕಣ್ಣುಗಳಿಗೆ
ಎದೆ ಬಡಿತ ನಿಧಾನವಾದ೦ತೆ
ಆತ್ಮಕಾನ೦ದವೂ
ಆತ್ಮಾನ೦ದವೋ
ಎನೋ ಒ೦ದು ಓ ಆಯ್ತು
ಓಡಿನಿ೦ತವನ ಎದೆಯಲ್ಲಿ
ಇದ್ದಕ್ಕಿದ್ದ೦ತೆ ಚಳುಕು
ಎದೆಯೊಳಗೆ ಮಿ೦ಚು
ಮಷ್ಠಿಯೊಳಗೆ ಹಿಡಿದು ಹಿ೦ಡಿದ೦ತೆ
ಆಮೇಲೆ ಎದೆ ಬಡಿತ
ಅವನಿಗೇ ಕೇಳುತಿಲ್ಲ
ಎಲ್ಲೋ ಕಳೆದುಹೋದ೦ತೆ
ಯಾರಗೋ ಕಾದಿರುವ೦ತೆ
ಸುಮ್ಮನೆ ನಿ೦ತಿದ್ದಾನೆ
ನನ್ನೊಳಗೆ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!