ಯಾರು ಸೋತರೋ ? ಯಾರು ಗೆದ್ದರೋ ? ಪ್ರಜಾಸತ್ತೆ ಮಾತ್ರ ಸೋತಿತು ! 

ಈ ’[[ವಿಶ್ಲೇಷಣೆ]]’ ಪ್ರಕಟವಾಗಿರುವುದು, ಮುಂಬೈನ ’[[ಕರ್ನಾಟಕ ಮಲ್ಲ]]’ದಿನಪತ್ರಿಕೆಯಲ್ಲಿ. ಡಾ ಕೆ. ಎಸ್. ಶರ್ಮಾ, ಸುಂದರವಾಗಿ ದಾಖಲಿಸಿದ್ದಾರೆ.  ಡಾ ಶರ್ಮ, ಹೇಳುವ ಯಡ್ಡಿ ಮತ್ತು ರೆಡ್ಡಿಕಲಹದ ಆಂತರಿಕ ಕಲಹದ ಫಲಶ್ರುತಿ, ಬಹಳ ಕುತೂಹಲಕಾರಿಯಾಗಿದೆ. ಇಂತಹ ಅತ್ಯುತ್ತಮ ವಿಶ್ಲೇಷಣೆಯನ್ನು ಹೊರತರುತ್ತಿರುವ ಹೊರನಾಡ ದಿನಪತ್ರಿಕೆಯಾದ, ’ ಕರ್ನಾಟಕ ಮಲ್ಲಕ್ಕೆ ನಮ್ಮ ಹಾರ್ದಿಕ ಅಭಿನಂದನೆಗಳು. ಬನ್ನಿ, ಶರ್ಮ ಏನನ್ನುತ್ತಾರೆ ಎನ್ನುವುದನ್ನು ನೋಡೊಣ....

-ಡಾ. ಶರ್ಮರವರ ಸೌಹಾರ್ದತೆಯನ್ನು ಕೋರಿ.....ಸಂಪದ ಗೆಳೆಯರಿಗೆ, ಅದನ್ನು ಪ್ರಸ್ತುತಪಡಿಸುತ್ತಿದ್ದೇನೆ.

 

ಈ ಕದನ -ಪ್ರಹಸನದಲ್ಲಿ ಹೊರಹೊಮ್ಮಿದ ಪರಿಣಾಮಗಳು :

೧೪ ದಿನಗಳ ಕದನದಲ್ಲಿ ಮೌಲ್ಯಗಳನ್ನು ಹೇಗೆ ಮಾರಿಕೊಳ್ಳಬಲ್ಲರು,ಅಂತಃಸಾಕ್ಷಿಯನ್ನು ಹೇಗೆ ತ್ಯಜಿಸಬಲ್ಲರು, ಎನ್ನು ವ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ.

 

*  ಭಾರತೀಯ ಜನತಾ ಪಕ್ಷದ ಹೈಕಮಾಂಡ್ ಯಾವ ಪ್ರಭಾವವನ್ನೂ ಬೀರದ ಸ್ಥಿತಿಯಲ್ಲಿದೆ. 

 

*  ಈ ಸಂಧಿಯನಂತರ ನಮ್ಮ ಸಿ. ಎಮ್. ಎಡಿಯೂರಪ್ಪನವರು, ತಮ್ಮ ಎಲ್ಲಾ ಅಧಿಕಾರಗಳನ್ನೂ ರೆಡ್ಡಿ ಸಹೋದರಿಗೊಪ್ಪಿಸಿ, ಕೇವಲ ಅವರ ಕೈಗೊಂಬೆಯಾಗಿ ಅಧಿಕಾರರಹಿತರಾಗಿದ್ದಾರೆ.

 

*   ಕರ್ನಾಟಕ ಇಂದು ಗಣಿ-ದಣಿಗಳ ನಾಡಾಗಿ ರೆಡ್ಡಿ-ಬಣ ಪ್ರಭಾವಿತ ಕೋರ್ ಕಮಿಟಿಯ ಕೈಸನ್ನೆಗೆ ಹೌದೆಂದು ಹೂಗುಟ್ಟುವ ಕೈಬೊಂಬೆಯಾಗಿದೆ. ಸಿ. ಎಂ. ರವರು ಹಿಂದೆ ತಾವು ಸಾರುತ್ತಿದ್ದ ತತ್ವಗಳಿಗೆ ತಿಲಾಂಜಲಿ ಕೊಟ್ಟುಬಂಡವಾಳಶಾಹಿ-ಭೂಮಾಲೀಕ ಶೋಷಕರ ಪಕ್ಷದ ಪ್ರತಿರೂಪವೆಂದು ತಮ್ಮ ನಿಜಬಣ್ಣವನ್ನು ಜನತೆಯಮುಂದಿಟ್ಟಿದ್ದಾರೆ.

ಬೆಂಜಮಿನ್ ಡಿಸ್ ರೇಲಿ ಹೇಳುವಂತೆ, ’ರಾಜಕೀಯದಲ್ಲಿ ಯಾವುದೂ ಹೇಯವಲ್ಲ-ಅಂದರೆ ಇಲ್ಲಿ ಎಲ್ಲವೂ ಹಿತವೇ. ಅವರು ಇನ್ನೊಂದು ಮಾತನ್ನು ಹೇಳಿದ್ದರು. ರಾಜಕೀಯ ಕಸಬುಯೆಂದರೆ ದೋಚೋದು-ಬಾಚೋದು ಹಾಗೂ ಎಡವೋದು-ಎಡವಟ್ಟು ಮಾಡೋದು’.

ಗ್ರೀತಾಮೆ ಥಾಮಸ್ ಫ್ರಾಂಕೋಯಿಸ್ ರೇನಾಲ್ ಹೇಳಿದ್ದರು. ’ ಅಪರಿಮಿತ ರಾಜಕೀಯ ತಪ್ಪುಗಳು ಇರುತ್ತವೆ ; ಅವುಗಳನ್ನು ಅಳವಡಿಸಿಕೊಂಡಾಗ ಅವುಗಳೇ ತತ್ವವಾಗಿಬಿಡುತ್ತವೆ’ ಮೋಸ, ಧಗ, ತಪ್ಪುಗಳು-ಪ್ರಮಾದಗಳು-ಇವೇ ಈ ರಾಜಕಾರಣಿಗಳು ಅಳವಡಿಸಿಕೊಳ್ಳುವ ತತ್ವಗಳು. ಈ ವಾಕ್ಯಗಳನ್ನು ಅಕ್ಷರಶಃ ಪಾಲಿಸಲೆಂದೇ ನಮ್ಮ ಆಳುವ ಪಕ್ಷದ ಧುರೀಣ ಯಡಿಯೂರಪ್ಪನವರು ತಮ್ಮ ಬಣ್ಣ ಬದಲಾಯಿಸಿ, ನೈಜತೆಯನ್ನು ಪ್ರದರ್ಶಿಸುತ್ತಿದ್ದಾರೆ.

ಇವರೇ ಭಾರತೀಯ ಪ್ರಜಾಸತ್ತೆಯ ಪಾಲಕರು ! ಎಂಥ ದುರಂತ ಎಂಥಾ ವಿಪರ್ಯಾಸ !

ಪಾಲ್ ಬ್ಲೊನೆಟ್ ಹೇಳಿರುವ ಮಾತುಗಳು,  "ರಾಜಕಾರಣಿಯ ಅರ್ಹತೆಯನ್ನು ಕುರಿತು ’ರಸಾಯನ ಶಾಸ್ತ್ರಜ್ಞನಾಗಲು, ರಸಾಯನ ಶಾಸ್ತ್ರವನ್ನು ಅಭ್ಯಸಿಸಬೇಕು, ವಕೀಲನೋ ವೈದ್ಯನಾಗಲು, ಕಾನೂನು  ಮತ್ತು ವೈದ್ಯಕೀಯ ಶಾಸ್ತ್ರವನ್ನು ಅಭ್ಯಾಸಮಾಡಬೇಕು, ಆದರೆ ರಾಜಕಾರಣಿಯಾಗಲು ಮಾಡಬೇಕಾದದ್ದು ಒಂದೇ, ಅದೇನೆಂದರೆ ನನ್ನದೇ ಆದ ಹಿತಾಸಕ್ತಿ." ಇದನ್ನು ತಾನೇ ನಮ್ಮ ಮಾನ್ಯ ಸಿ.ಎಮ್, ಎಡಿಯೂರಪ್ಪನವರು ಅನುಸರಿಸುತ್ತಿರುವುದು !

’ಯಾವ ಮಂತ್ರಿಯನ್ನೂ ಬದಲಿಸುವುದಿಲ್ಲ ’ ಎಂದವರೇ, ತಮ್ಮ ನಂಬಿಕೆಗೆ ಅರ್ಹರಾದ ಕಾರ್ಯನಿಷ್ಠರನ್ನು ವಜಾಮಾಡಿದರು. ೧೪ ದಿನಗಳ ಕದನದಲ್ಲಿ ಕದನವಿರಾಮ ಮೂಡಿದಂತೆ ಕಂಡರೂ,ಇದರ ಪರಿಣಾಮ ಮಾತ್ರ ನೀತಿ ನೇಮಗಳಿಲ್ಲದ ನಗ್ನಾಧಿಕಾರ ಸ್ಪಷ್ಟ.

ನಾಚಿಗೆ ಹೇಸಿಗೆಯಿಲ್ಲದ ಗೂಳಿ-ಕಾಳಗದಲ್ಲಿ ಸೋತವರು ಯಾರು ಗೆದ್ದವರು ಯಾರು ಎಂಬ ಪ್ರಶ್ನೆಗಳಿಗಿಂತ ಪ್ರಮುಖವಾದದ್ದು, ಯೆಡ್ಡಿ-ರೆಡ್ಡಿ ಕಾಳಗದಲ್ಲಿ ಪ್ರಜಾಸತ್ತೆ ಸೋತಿತ್ತು, ಎನ್ನುವ ವಿಚಾರವೇ ಹೆಚ್ಚು ರೋಚಕವಾಗಿದೆ !

ಅಷ್ಟೇಅಲ್ಲದೆ,  ಜನ ಯಾವ ಪ್ರಜಾಸತ್ತೆಯ ಸಾರ್ವಭೌಮರೋ ಎಂದು ಹೇಳುತ್ತವೆಯೋ ಅವರು ಸತ್ತು ಸುಣ್ಣವಾಗಿದ್ದರು. ನೀತಿ-ನಡವಳಿಕೆಗಾಗಿ ತಿಲಾಂಜಲಿ ಬಿಡಲಾಗಿತ್ತು. ಅಧಿಕಾರ ರಕ್ಷಣೆಗಾಗಿ ಒಬ್ಬ ರಾಜಕಾರಣಿ ಯಾವಮಟ್ಟಕ್ಕೂ ಇಳಿಯಲು ಸಾಧ್ಯವೆನ್ನುವ ಕಟುಸತ್ಯದ ಅರಿವನ್ನು ಕರ್ನಾಟಕದ ಮತದಾರರಿಗೆ ಸಾಬೀತುಮಾಡಿತು. ಎಡಿಯೂರಪ್ಪನವರು ತಮ್ಮ ಸ್ವಾರ್ಥಕ್ಕಾಗಿ ಆಪ್ತಕಾರ್ಯದರ್ಶಿ, ವಿ.ಪಿ. ಬಳಿಗಾರರ ವರ್ಗಾವಣೆ, ಮತ್ತು  ಸಚಿವೆ, ಶೋಭಾ ಕರಂದ್ಲಾಜೆಯವರನ್ನು ವಜಾಮಾಡಿದ್ದು, ಈ ಕಾರ್ಯಕೈಗೊಂಡ  ’ ನನ್ನನ್ನು ಯಾರೂ ಕ್ಷಮಿಸುವುದಿಲ್ಲ ’ ಎಂದು ಗಳ-ಗಳನೆ ಅತ್ತರು ಆದರೆ ಅಧಿಕಾರಬಿಡಲುಮಾತ್ರ ಸಿದ್ಧರಿರಲಿಲ್ಲ.

ಸುಶ್ಮಾಸ್ವರಾಜ್ ಮನೆಯಲ್ಲಿ, ನೆರೆದಿದ್ದ ಅಸಂತುಷ್ಟ ಶಾಸಕರು,   ’ತಾಯಿಯವರ ಮಾತಿಗೆ ಮಕ್ಕಳಾದ ನಾವು ಬೆಲೆಕೊಡುತ್ತೇವೆ, ಬಿ.ಜೆ.ಪಿ. ಐದಲ್ಲ ಐವತ್ತು ವರ್ಷ ಕರ್ನಾಟಕದಲ್ಲಿ ಆಳುತ್ತೆ” ಎಂದು ಯೆಡ್ಡಿಯವರಕೈಎತ್ತಿಕೊಂಡುನಾವೆಲ್ಲಾ ಕೂಡಿಬಾಳುತ್ತೆವೆ ಎಂದು ಹೇಳಿದ್ದ್ದರು. ’ ನಾನು ತಪ್ಪುಗಳನ್ನು ಮಾಡಿದ್ದೇನೆ. ಇನ್ನುಮುಂದೆ ರೆಡ್ಡಿ ಸಹೋದರರನ್ನೂ ಎಲ್ಲಾ ಶಾಸಕರನೂ ವಿಶ್ವಾಸಕ್ಕಿಟ್ಟೂಕೊಂಡು ಕೆಲಸಮಾಡುತ್ತೇನೆ. ಕರ್ನಾಟಕದ ಜನ ನಮ್ಮನ್ನು ಕ್ಷಮಿಸಲಿ ’ ನಮ್ಮ ಸಿ. ಎಂ. ಎಂದು ಸಾರಿದ್ದರು. ಈ ಮಾತುಗಳಿಗೆ ಏನರ್ಥ ?

ಉತ್ತರ ಕರ್ನಾಟಕದಲ್ಲಿ ಪ್ರವಾಹಪೀಡಿತರು ಕೂಳಿಲ್ಲದೆ ಉಡಲು ಬಟ್ಟೆಯಿಲ್ಲದೆ, ಇರಲು ಸೂರಿಲ್ಲದೆ, ನಿರಾಶ್ರಿತರಾಗಿರುವಾಗ, ರೆಡ್ಡಿಬಣದ ಭಿನ್ನಮತ ಶಾಸಕರು, ಹೈದರಾಬಾದ್, ಗೋವಾಗಳಲ್ಲಿನ ಪಂಚತಾರಾ ಹೋಟೆಲ್ ಗಳಲ್ಲಿ ಐಷಾರಾಮ ನಡೆಸುತ್ತಿದ್ದದು. ’ಇದು ಪ್ರಜಾಪ್ರಭುತ್ವದ ಕಗ್ಗೊಲೆ.”  ಜನ ಸಾಯುತ್ತಿದ್ದರೆ, ಜನಪ್ರತಿನಿಧಿಗಳು ಪಂಚತಾರಾ ಐಷಾರಾಮ ಜೀವನ ನಡೆಸುತ್ತಿದ್ದರು.

’ಎಡಿಯೂರಪ್ಪನವರು ಬದಲಾಗದೆ, ನಾವು ಹಿಂದಿರುಗುವುದಿಲ್ಲ ಎಂದ ಶಾಸಕರು, ಈಗ ಅವರೇ ನಮ್ಮ ನಾಯಕರು ಅವರ ಕಾರ್ಯ ವೈಖರಿಯಬಗ್ಗೆ ಅಸಮಧಾನವಿತ್ತು. ಅದನು ತಿದ್ದಿಕೊಳ್ಳಲು ಅವರು ಒಪ್ಪಿದ್ದಾರೆ.’ ಎಂದು ಹೇಳಿಕೆ ನೀಡಿದ್ದರು.

’ನಮ್ಮದು ವಿಭಿನ್ನ ಪಕ್ಷ; ತಾತ್ವಿಕ ಭೂಯಿಷ್ಠ ಪಕ್ಷವೆಂದು ಬೀಗುತ್ತಿದ ಬಿ. ಜೆ. ಪಿ.  ಈಗ ಆ  ತತ್ವಗಳಿಗೆ ತಿಲಾಂಜಲಿನೀಡಿ, ಬಂಡವಾಳಶಾಹಿ, ಭೂಮಾಲಕ-ಶೋಷಕರ ಪಕ್ಷದ ಪ್ರತಿರೂಪ, ಎಂಬ ತಮ್ಮ ನಿಜಬಣ್ಣವನ್ನು ತೋರಿದೆ’. ಇದರಿಂದ ಕರ್ನಾಟಕದ ಪ್ರಜಾಸತ್ತೆಯ ’ಶ್ರಾದ್ಧ’ ವಾದಂತೆಯೇ ಅಲ್ಲವೇ ? 

ಹೀಗೆ ’ಕರ್ನಾಟಕ ಮಲ್ಲ ದಿನಪತ್ರಿಕೆ’ ಮುಂಬೈನ ಕನ್ನಡಿಗರ ದಿನನಿತ್ಯದ ಸಮಸ್ಯೆಗಳಿಗೆ ಸ್ಪಂದಿಸುತ್ತಾ, ಕರ್ನಾಟಕದ ರಾಜಕೀಯ, ಸಾಮಾಜಿಕ ಸಮಸ್ಯೆಗಳನ್ನು ಚೆನ್ನಾಗಿ ಓದುಗರ ಮುಂದೆ ಇಡುತ್ತಾ ಬಂದಿದೆ.

ಇದಲ್ಲದೆ ಹಲವು ಅಂಕಣಗಳೂ ಅಷ್ಟೇ ಚೆನ್ನಾಗಿವೆ. ಉದಾಹರಣೆಗೆ,

ಪ್ರಿಯತಮರು ಬರೆಯುವ,  ’ಮುಖಾಂತರ’ , ಡಾ. ಜಿ. ವಿ. ಕುಲಕರ್ಣಿಯವರ,  ’ಜೀವನ ,ಮತ್ತು ಸಾಹಿತ್ಯ, ಮತ್ತಿತರ ಅಂಕಣಗಳು, ಜನಪ್ರಿಯವಾಗಿವೆ.

ಪ್ರಧಾನ ಸಂಪಾದಕ, ಶ್ರೀ. ಚಂದ್ರಶೇಖರ್ ಪಾಲೆತ್ತಾಡಿಯವರ ಸಂಪಾದಕೀಯವೂ ಅಷ್ಟೇ ಪರಿಣಾಮಕಾರಿಯಾಗಿದೆ. ’ಉಪಚುನಾವಣೆ : ಮಾಯಾವತಿ, ಮಮತಾ ವಿಜೃಂಭಣೆ.” ಚೆನ್ನಾಗಿ ಮೂಡಿಬಂದಿದೆ.