'ತವಾಂಗ್'! ಇತ್ತೀಚಿಗೆ ಬಹಳ ಸುದ್ದಿ ಮಾಡುತ್ತಿದೆ.ದೆಹಲಿ-ಬೀಜಿಂಗ್ ಮಧ್ಯೆ ಉರಿಯುತ್ತಿರುವ ಬೆಂಕಿಗೆ 'ತವಾಂಗ್' ತುಪ್ಪ ಸುರಿಯುತ್ತಿದೆ."ನೀವು ಭಾರತೀಯರು ೧೯೬೨ ರ ಅನುಭವವನ್ನ ಮರೆತಿದ್ದಿರ!" ಅಂತ ಚೀನಿಗಳು ಬಹಿರಂಗವಾಗೇ ಹೇಳುವ ದಾರ್ಷ್ಟ್ಯ ತೋರುತಿದ್ದಾರೆ.
ಚೀನಿಗಳ ಬೆದರಿಕೆ ಬಗ್ಗೆ ಮಾತಡುವುದಕ್ಕಿಂತ ಮೊದಲು, ಏನಿದು 'ತವಾಂಗ್' ಅದಕ್ಕಾಗಿ ಯಾಕಿಷ್ಟು ಕಿತ್ತಾಟ? ಇದು ಯಾರಿಗೆ ಸೇರಿದ್ದು? ಭಾರತೀಯರಿಗೋ? ಚೀನಿಗಳಿಗೋ? ಈ ಮೊದಲು ಇದು ಯಾರಿಗೆ ಸೇರಿತ್ತು? ಅಂತ ನೋಡ ಹೊರಟರೆ, ಐತಿಹಾಸಿಕಾವಾಗಿ ಅಂದರೆ ೧೯೧೪ರಲ್ಲಿ ಬ್ರಿಟಿಷರು ಮೆಕ್-ಮಹೂನ್ ರೇಖೆಯನ್ನ ಗುರುತಿಸುವವರೆಗೂ ಅದು ಆಗಿನ 'ಟಿಬೆಟ್' ಗೆ ಸೇರಿತ್ತು. ೧೯೧೪ರಲ್ಲಿ ತವಾಂಗ್ ಅನ್ನು ೧೩ನೆ ಲಾಮ ಭಾರತಕ್ಕೆ ಬಿಟ್ಟು ಕೊಟ್ಟರು.ಆ ನಂತರ ಬಂದ ೧೪ನೆ ಅಂದರೆ ಈಗಿನ 'ದಲೈ ಲಾಮ' ಕೂಡ ತವಾಂಗ್ ಅನ್ನು ಭಾರತದ ಅಂಗವೆಂದೇ ಮಾನ್ಯ ಮಾಡಿದರು.
ಆದರೆ ೧೯೫೦ ರ ದಶಕದಲ್ಲಿ ಚೀನಿಗಳು 'ಟಿಬೆಟ್' ಅನ್ನು ಆಕ್ರಮಿಸಿಕೊಂಡರಲ್ಲ. ಈಗ ಅವರು ಹೇಳುವುದು , 'ಒಂದು ಕಾಲದಲ್ಲಿ ತವಾಂಗ್ ಟಿಬೆಟ್ಗೆ ಸೇರಿತ್ತು, ಈಗ ಟಿಬೆಟ್ ನಮಗೆ ಸೇರಿದೆ, ಹಾಗಾಗಿ ಈ ತವಾಂಗ್ ನಮಗೆ ಸೇರಬೇಕು' ಅಂತ (ಅದರ ಜೊತೆಗೆ ಇರಲಿ ಅಂತ ಇಡಿ ಅರುಣಾಚಲ ಪ್ರದೇಶನು ಕೊಡಿ ಅಂತಿದ್ದಾರೆ).
ಟಿಬೆಟ್ ಅನ್ನು ಚೀನಾ ಆಕ್ರಮಿಸಿಕೊಂಡಾಗ ವಿಶ್ವದ ರಾಷ್ಟ್ರಗಳೆಲ್ಲ ಚೀನಾದ ತಪ್ಪು ಮಾಡಿದೆ ಅಂತ ವಿಶ್ವ ಸಂಸ್ಥೆಯಲ್ಲಿ ಮಾತಾಡ ಹೊರಟರೆ, ನೆಹರು ಅದು ಚೀನಿಗಳ ಆಂತರೀಕ ವಿಷಯ ನಾವ್ ಮಾತಾಡೋದೇ ತಪ್ಪು, ಸುಮ್ನಿರಿ ಅಂದ್ಬುಟ್ರು! ಅಲ್ಲಿಗೆ ಟಿಬೆಟಿಯನ್ನರದು ಅರಣ್ಯ ರೋದನವಾಯ್ತು. ಮುಂದೊಂದು ದಿನ ಇದೆ ಟಿಬೆಟ್ ಅನ್ನು ಭಾರತದ ಮೇಲೆ ಸವಾರಿ ಮಾಡಲು ಚೀನಿಗಳು ಬಳಸಬಹುದು ಎನ್ನುವ ಸಾಮನ್ಯ ಜ್ಞಾನವು ನೆಹರು ಸೇರಿದಂತೆ ಯಾವ ನಾಯಕರಿಗೆ ಅನ್ನಿಸಲೇ ಇಲ್ಲ.
ಟಿಬೆಟ್ ಅನ್ನು ಆಕ್ರಮಿಸಿದ ನಂತರ ಚೀನಿಗಳು, ಗಡಿಯುದ್ದಕ್ಕೂ ರಸ್ತೆ,ಬಂಕರ್ಗಳನ್ನ ನಿರ್ಮಿಸಿದರು,ಸೇನಾ ಜಮಾವಣೆ ಮಾಡಿದರು.ಆದರೆ ನಮ್ಮ 'ಕೆಂಪು ಗುಲಾಬಿ'ಯ ನಾಯಕ ಅವರ ಅಧಿಕಾರಿ ವರ್ಗ,ವಿರೋಧ ಪಕ್ಷ ಎಲ್ಲ ಎಲ್ಲರೂ ಧೀರ್ಘ ನಿದ್ರೆಯಲಿದ್ದರು. ಜನರಲ್ ತಿಮ್ಮಯ್ಯನಂತಹ ದಕ್ಷ ಮಿಲಿಟರಿ ಅಧಿಕಾರಿ ಮುಂದೆ ಇಂತ ಅನಾಹುತವನ್ನ ಊಹಿಸಿ ಮಿಲಿಟರಿ ಬಲಪಡಿಸ ಹೊರಟರೆ, ಅದಕ್ಕೆ ಅಡ್ಡಗಾಲು ಹಾಕಿದ್ದು ರಕ್ಷಣಾ ಮಂತ್ರಿ ಕೃಷ್ಣನ್ ಮೆನನ್!. ಈತನ ರಾಜಕೀಯದಿಂದ ಬೇಸತ್ತ ತಿಮ್ಮಯ್ಯ ರಾಜಿನಾಮೆ ನೀಡ ಹೊರಟರೆ ಕೆಂಪು ಗುಲಾಬಿ ತಡೆದು ಬಿಟ್ಟಿತು , ನಂತರ ಸದನದಲ್ಲಿ 'ಕೆಂಪು ಗುಲಾಬಿ' ಆ ವೀರ ಯೋಧನ ಬಗ್ಗೆ ಕೇವಲವಾಗಿ ಮಾತಾಡಿದ್ದರು.
ತಿಮ್ಮಯ್ಯ ನಿವೃತ್ತಿಯಾಗುತ್ತಲೇ, ರಾಜಕೀಯವನ್ನ ದೇಶದ ಸೈನ್ಯದೊಳಗೆ ನುಗ್ಗಿಸಿಡ ಕೆಂಪು ಗುಲಾಬಿ, ಹುಡುಕಿ ಹುಡುಕಿ , ಅರ್ಹತೆ ಹಾಗು ಅನುಭವ ಎರಡು ಇಲ್ಲದ 'ಕೌಲ್ ಮತ್ತೆ ಥಾಪರ್' ಅನ್ನುವವರನ್ನ ಕರೆದು ಪಟ್ಟ ಕಟ್ಟಿತು.ಆ ಜಾಗಕ್ಕೆ ನ್ಯಾಯವಾಗಿ ಬರಬೇಕಾಗಿದ್ದ ದಕ್ಷ ಅಧಿಕಾರಿ 'ಜನರಲ್ ಥೋರಟ್' ಅವರಿಗೆ ಪಿಂಚಣಿ ಮಂಜೂರು ಮಾಡಿ ಬಿಟ್ಟರು, ಕಾರಣ ಅಧಿಕಾರಿ ಇವರ ಹುಚ್ಚತಕ್ಕೆ ಮಣಿಯುತ್ತಿರಲಿಲ್ಲ.ಅವರ ಹಿಂದೆಯೇ ಸಿಡಿದ್ದೆದು ರಾಜಿನಾಮೆ ನೀಡಿ ಹೋದವರು ಮತ್ತೊಬ್ಬ ಹಿರಿಯ ದಕ್ಷ ಅಧಿಕಾರಿ 'ಜನರಲ್ ವರ್ಮಾ'. 'ಫಾರ್ವರ್ಡ್ ಫಾಲಸಿ' ಎಂಬ ಆಕ್ರಮಣಕಾರಿ ಕ್ರಮಕ್ಕೆ ಈ ಇಬ್ಬರು ಜನರಲ್ಗಳು ಸೊಪ್ಪು ಹಾಕಲಿಲ್ಲ ಎಂಬುದೇ ಅವರ ಮೇಲೆ ಕೆಂಪು ಗುಲಾಬಿಗೆ ಮುನಿಸು ಬರಲು ಕಾರಣ.ಭಾರತದ ಮಿಲಿಟರಿಯಲ್ಲಿ ಹೊಲಸು ರಾಜಕೀಯ ಈ ಪರಿ ರಾದ್ದಾಂತ ಮಾಡುತ್ತಲೇ, ಬಂದಿತ್ತು ಇಸವಿ ೧೯೬೨!
ಅತ್ತ ಚೀನಿಗಳು ಸರ್ವ ಸನ್ನದ್ಧರಾಗಿದ್ದರೆ ಇತ್ತ ನಮ್ಮ ನಾಯಕರಿಗೆ (?) ಇದ್ಯಾವುದರ ಪರಿವೆ ಇರಲಿಲ್ಲ.ಅವರಿನ್ನು ಕೆಂಪು ಗುಲಾಬಿ, ಬಿಳಿ ಪಾರಿವಾಳದ ಗುಂಗಿನಿಂದ ಹೊರ ಬಂದಿರಲೇ ಇಲ್ಲ.ವಿಪರ್ಯಾಸವೆಂದರೆ ಚೀನಿಗಳು ಮುಗಿಬಿದ್ದು ನಮ್ಮ ಸೈನಿಕರ ಬಲಿ ತೆಗೆದುಕೊಳ್ಳುತಿದ್ದರೆ, ಆ ನಾಯಕ ಮಾತ್ರ ಅದೇ ಬಿಳಿ ಪಾರಿವಾಳ ಕೆಂಪು ಗುಲಾಬಿಯ ಗುಂಗಿನಲ್ಲಿ ವಿದೇಶ ಪ್ರವಾಸದಲ್ಲಿದ್ದರು, ಅವರ ಜೊತೆಗೆ ಅವನೊಬ್ಬ ರಕ್ಷಣಾ ಮಂತ್ರಿ ಅವನದು ಪ್ರವಾಸವೇ, ಇನ್ನುಳಿದ ಜನರಲ್ ಕೌಲ ಕಾಶ್ಮೀರದಲ್ಲಿ ರಜೆಯ ಮೋಜಿನಲ್ಲಿದ್ದ.
ಅಲ್ಲಿ ದೂರದ ತವಾಂಗ್,ನಮ್ಕಾಚು,ಬೋಮ್ದಿಲದಲ್ಲಿ ನಮ್ಮ ಸೈನಿಕರು ಚೀನಿಗಳ ಗುಂಡಿಗೆ ಎದೆಯೊಡ್ಡಿ ಧರೆಗುರುಳುತಿದ್ದರು.
ಛೆ! ಅದೆಂತ ಅವಮಾನಕರ ಸೋಲು.ನಿಜವೇನೆಂದರೆ ಆ ಯುದ್ಧದಲ್ಲಿ ನಾವು ಆಕ್ರಮಣ ಮಾಡಲೇ ಇಲ್ಲ ನಮ್ಮದೇನಿದ್ದರೂ ರಕ್ಷಣಾತ್ಮಕ ಆಟ. ಜೇಬಿನಲ್ಲಿದ್ದ ಹಿಡಿ ಕಾಡತೂಸು ಖಾಲಿಯಾಗುವವರೆಗಷ್ಟೇ ನಮ್ಮ ಸೈನಿಕರ ಹೋರಾಟ, ಆಮೇಲೆ ಚೀನಿ ಶತ್ರುವಿನ ಆರ್ಭಟ!
ಒಂದು ಬೆಚ್ಚನೆಯ ಅಂಗಿ,ಬೂಟು,ಬಂದೂಕು,ಬಾಂಬು,ಕನ್ನಡಕ,ಸರಿಯಾದ ಆಹಾರ,ಶಸ್ತ್ರ ಬಲ,ಸೈನ್ಯ ಬಲ ಯಾವುದನ್ನು ಕೊಡದೆ ನಮ್ಮ ಯೋಧರನ್ನ ಯುದ್ಧ ಭೂಮಿಗೆ ಕಳಿಸಿತ್ತು ನಮ್ಮ ಘನ ಸರ್ಕಾರ! ನಮ್ಮ ನಾಯಕರ ಹುಚ್ಚಾಟಕ್ಕೆ ಬಲಿಯಾದ ಯೋಧರ ಸಂಖ್ಯೆ ೨-೩ ಸಾವಿರ!
ಇಂದು ಭಾರತ ನಮ್ಮದು ನಮ್ಮದು ಅನ್ನುತ್ತಿರುವ 'ತವಾಂಗ್' ಅಂದು ಚೀನಿಗಳ ಕೈವಶವಾಗಿತ್ತು! ಅಂದು ಅಲ್ಲಿ ಹಾರಿದ್ದು 'ಕೆಂಪು ಬಾವುಟ!' . ಅದೇ ಬಾವುಟವನ್ನ ಮತ್ತೊಮ್ಮೆ ನೆನಪಿಸಿಕೊಳ್ಳಿ ಅಂತ ಚೀನಿಗಳು ಹೇಳ್ತಾ ಇದ್ದಾರೆ.
ಅಂದು ಯುದ್ಧವೆಲ್ಲ ಮುಗಿದ ಮೇಲೆ ಚೀನಿಗಳು ಬೆನ್ನಿಗೆ ಹಿರಿದರು ಅಂತ ಗೋಳಾಡಿದರು.ಆದರೆ ಅವರನ್ನು ಹಿರಿಯುವಂತೆ ಆಹ್ವಾನಿಸಿದವರು ಯಾರು?
ಸುಮ್ಮನೆ ಆವೇಶಕ್ಕೊಳಗಾಗಿ ಅವರನ್ನು ದೂರುವ ಮೊದಲು,ನಮ್ಮ ಕಡೆಯಿಂದ ಏನು ಮಾಡಿದ್ದೆವು ಅಂತ ನೋಡಿದರೆ ತಪ್ಪುಗಳು ನಮ್ಮಲ್ಲೂ ಸಿಗುತ್ತವೆ. ಮೊದಲೆನೆಯದಾಗಿ ಟಿಬೆಟ್ ಆಕ್ರಮಣವನ್ನ ಸಮರ್ಥಿಸುತ್ತಲೇ, ದಲೈಲಾಮರನ್ನು ಒಳಗೆ ಬಿಟ್ಟು ಕೊಂಡಿದ್ದು. ಚೀನಾ ಪಡೆ ಪಡೆ ಗಡಿಯಲ್ಲಿ ತಂಟೆ ಮಾಡಿದರೂ ಒಮ್ಮೆಯೂ ಅದರ ಬಳಿ ಪಟ್ಟಾಗಿ ಕೂತು ಮಾತು ಕತೆ ನಡೆಸಲೇ ಇಲ್ಲ.ಅತ್ತ ಮಾತುಕತೆಯ ಮನಸು ಮಾಡಲಿಲ್ಲ, ಇತ್ತ ರಕ್ಷಣೆಯ ಬಗ್ಗೆಯೂ ಗಮನ ಹರಿಸಲಿಲ್ಲ.ಪರಿಣಾಮ ೬೨ರ ಗಾಯಕ್ಕೆ ಭಾರತ ವಿಶ್ವದ ಮುಂದೆ ತಲೆ ತಗ್ಗಿಸುವಂತಾಯಿತು.
ನಮ್ಮ್ ಪುಣ್ಯ ,ಈಗಿನ ಪ್ರಧಾನಿ ಇತ್ತೀಚೆಗಷ್ಟೇ ಒಂದು ಖಡಕ್ ಸಂದೇಶವನ್ನ ಚೀನಿಗಳಿಗೆ ಕೊಟ್ಟಿದ್ದಾರೆ.ಭಾವೇಶದ ಭಾಷಣದಲ್ಲಿ ಅರುಣಾಚಲ ನಮ್ಮದು ಎನ್ನುವ ಸರ್ಕಾರ ಹಾಗೆ ಸ್ವಲ್ಪ ಈಶಾನ್ಯ ರಾಜ್ಯಗಳಾದ ಮಣಿಪುರ,ನಾಗಾಲ್ಯಾಂಡ್ ನಲ್ಲಿ ಪರಿಸ್ಥಿತಿ ಹೇಗಿದೆ ಅನ್ನುವ ಬಗ್ಗೆ ಸಹ ಪ್ರಾಕ್ಟಿಕಲ್ ಆಗಿ ಯೋಚಿಸುವುದು ಒಳ್ಳೆಯದು.ಮಾತಿನಲ್ಲಿ ಮೈ
ಮರೆಸಿ ಒಮ್ಮೆಲೇ ದಾಳಿ ಮಾಡುವುದು ಚೀನಿಗಳ ಅಭ್ಯಾಸ ಈ ಬಾರಿಯಾದರೂ ನಾವು ಎಚ್ಚರವಾಗಿರದಿದ್ದರೆ ಮತ್ತೊಮ್ಮೆ 'History Repeats'!? ಅನ್ನೋ ಮಾತು ನಿಜವಾಗಬಹುದು!
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
‘ರಾಹುಲ್ ಗಾಂಧೀ’ ಪಿ.ಎಂ ಆಗ್ಬಹುದಾದರೆ ‘ರಾಕೇಶ್ ಶೆಟ್ಟಿ’ ಯಾಕ್ ಆಗ್ಬಾರ್ದು !?
ಶಾಸ್ತ್ರಿಗಳಿಗೊಂದು ಸಲಾಂ ಹೇಳೋಣ ಬನ್ನಿ!
ಬೆಂಗಳೂರು ಮಳೆಯಲ್ಲಿ…
ಕಬ್ಬು ಬೆಳೆಗಾರರಿಗೆ ಕಬ್ಬು ಸಿಹಿಯಾದೀತೇ?
ಕೃಷಿಹೊಂಡಗಳಿಗೆ ಪ್ಲಾಸ್ಟಿಕ್ ಹಾಳೆ, ಲಾಭ ಯಾರಿಗೆ?
ಕಬ್ಬು ಬೆಳೆಗಾರ: ರಾಜಕೀಯದ ದಾಳ
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (4)