೧
ಸಂಜೆಹೊತ್ತು
ನಿಮ್ಮ ಮನೆ ಹೊರಗಿನ ಮರದಲ್ಲಿರುವ
ಗಿಣಿಗಳನ್ನು ನೋಡಿದ್ದೀರಾ?
ಅವುಗಳೊಡನೆ ಆಡಿದ್ದೀರಾ?
ರಾತ್ರಿಯಾದೊಡನೆ
ಆ ಮರದ ನೇರಕ್ಕೇ ಮೇಲೊಂದು
ನಕ್ಷತ್ರ ಬಂದು
ಮರಕ್ಕೆ ಮುತ್ತಿಡುತ್ತಿದೆಯಲ್ಲ
ಗಮನಿಸಿದ್ದೀರಾ?
ಮರಕ್ಕೆ ಹೇಗನ್ನಿಸಬಹುದು, ಊಹಿಸಿದ್ದೀರಾ?
ಸ್ವಲ್ಪ ಆಚೆ, ಅಗೋ ಅಲ್ಲಿ, ಚಂದ್ರ
ನಗುತ್ತಿದ್ದಾನೆ. ಯಾಕೆ ಗೊತ್ತೆ?
ನಿನ್ನೆಯೂ ಅವನ ನಗು ಹೀಗೇ ಇತ್ತೆ?
ಚಂದ್ರನ ಮುಖಕ್ಕೆ ಬೆಳಕು ಬಳಿದು
ಬೆಳಗಿನ ಸೂರ್ಯ
ಥಕಥಕ! ಥೈ ಥೈ!
ಚಂದ್ರ ತಾನೂ ಸೈ ಸೈ
ಕುಣಿಯುತ್ತಿದ್ದಾರಲ್ಲ,
ನಿಮ್ಮನ್ನೂ
ಕರೆಯುತ್ತಿದ್ದಾರಲ್ಲ, ಕಾಣುತ್ತಿಲ್ಲವೆ?
ಏನು?
ಮನೆ ಹೊರಗಿನ ದಾರಿಯೇ ಕಾಣುತ್ತಿಲ್ಲವೆ?
೨
ನಿಮ್ಮ ಮಗು ನೋಡಿ, ಎಲ್ಲಿದೆ!
ಪಾಪ ನೀವು!
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಪಿಬಿಎಸ್ : ಅಚ್ಚರಿ ಕಾದಿದೆ
ಬಿಲ್ ಗೇಟ್ಸ್ ಮತ್ತು ಗಿಲ್ ಬೇಟ್ಸ್
’ಸಂಪದ ಸಮ್ಮಿಲನ # 4’ ಕುರಿತು
"ನೆನಪುಗಳ" ಪೋಣಿಸಿ ಬರೆದ “ಹನಿ”ಗಳು...1
ಮಾನವ ಜನ್ಮ ದೊಡ್ಡದು
ತಿಳಿಯದೋ ನಿನ್ನಾಟ..ರಚನೆ ಹೆಳವನಕಟ್ಟೆ ಗಿರಿಯಮ್ಮ
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!