ನಾವು ಜೀವಿಸುತ್ತಿರೋ ನೈಜ ಜಗತ್ತು ಮತ್ತು ಕಂಪ್ಯೂಟರಿನ ಒಳ ಜಗತ್ತು ಭೌತಿಕ ನೆಲೆಯಲ್ಲಿ ಬೇರೆ ಬೇರೆಯೇ ಸರಿ.
ಏ ಬಾ.. ಇಲ್ಲಿ ಎಂದು ಕೈ ಸನ್ನೆ ಮಾಡಿ ಕೂಗಿದರೆ.. ಎದುರಿಗಿದ್ದವರು ನಮ್ಮ ಬಳಿ ಬರೋ ರೀತಿಯಲ್ಲಿ....ಕೀಲಿಮಣೆ ಬಳಸದೇ ಬರೀ ಅಂಗಸನ್ನೆಗಳ ಮೂಲಕ ಕಂಪ್ಯೂಟರ್ಗೆ ಸನ್ನೆ ಮಾಡಿ ಏನಾದ್ರು ಹೇಳಿದ್ರೆ ಊಹಿಸಿಕೊಳ್ಳಿ!! ಅದು ಅರ್ಥಮಾಡಿಕೊಳ್ಳುತ್ತಾ?? ಇಲ್ವಾ!!
ಇದೆಂತಹ ಸಿಲ್ಲಿ ಪ್ರಶ್ನೆ ಅಂತೀರಾ?!!ಮುಂದೆ ಓದಿ..
ನೀವು ಕಾಗದದ ಮೇಲೆ ಬರೆದಂತೆಲ್ಲಾ..ಆ ಸಾಲುಗಳು ನೇರವಾಗಿ ನಿಮ್ಮ ಮೊಬೈಲ್ನಲ್ಲಿ ಮೆಸೇಜಾಗಿ ಬಂದರೆ!
ಹಾಗೇ ಚಿಕ್ಕಂದಿನಲ್ಲಿ ನಮ್ಮ ಪುಟಾಣಿ ಕೈಗಳನ್ನ ಕಣ್ ಸುತ್ತ ಹಿಡಿದು ಕಂಡ ಅಚ್ಚರಿಯ ದೃಶ್ಯಗಳನ್ನ ಸೆರೆ ಹಿಡಿದು "ಕ್ಲಿಕ್" ಎಂದು ಬಾಯಲ್ಲಿ ಹೇಳಿ ಅದನ್ನ ಮನಸ್ಸಿನ ಮೂಲೆಯಲ್ಲಿ ಸೇವ್ ಮಾಡುವ ರೀತಿ, ಈಗಲೂ ಕೂಡ ಖಾಲಿ ಕೈಗಳಲ್ಲಿ ಕ್ಲಿಕ್ ಮಾಡಿದಾಗ ನಿಜವಾದ ಡಿಜಿಟಲ್ ಫೊಟೊ ಬಂದರೆ ಹೇಗಿರತ್ತೆ?!!
ಹುಡುಕು ಪದ ಟೈಪಿಸದೆ! ಗೂಗಲ್ ಮ್ಯಾಪ್ನಲ್ಲಿ ನಮಗೆ ಬೇಕಾದ ವಿಚಾರವನ್ನ ಹುಡುಕುವಂತಿದ್ದರೆ.. ಉದಾ: ಮ್ಯಾಪ್ ಮೇಲೆ ಕಾಫಿ ಕಪ್ ಇಟ್ಟರೆ ಕಾಫಿ ಶಾಪ್ ಎಲ್ಲಿವೆ, ಎಟಿಎಂ ಕಾರ್ಡ್ ಇಟ್ಟರೆ ಎಟಿಎಂ ಸೆಂಟರ್ ಎಲ್ಲಿವೆ ಎಂದು ತೋರಿಸುವಂತಿದ್ದರೆ!!
ಕಾಗದದ ನ್ಯೂಸ್ ಪೇಪರಿನಲ್ಲಿ ಲೈವ್ ನ್ಯೂಸ್ ವೀಡಿಯೋ ನೋಡುವಂತಿದ್ದರೆ!!
ಕೈಲಿ ಹಿಡಿದ ಬಿಳಿ ಕಾಗದದಲ್ಲಿ ಸಿನೆಮಾ ನೋಡುವಂತಿದ್ದರೆ,ಕಾರ್ ರೇಸಿಂಗ್ ಗೇಮ್ ಆಡುವಂತಿದ್ದರೆ!!
.
.
ಇವೆಲ್ಲಾ ಬರೀ ಸಿನೆಮಾಗಳಲ್ಲಿ ನೋಡಬಹುದು ಅಂತೀರಾ? ಇಲ್ಲ ಈಗ ಇವೆಲ್ಲ ನಿಜವಾಗುವ ದಿನಗಳು ದೂರಿಲ್ಲ...
ಹೀಗೇ ಕೀಲಿಮಣೆಯಿಲ್ಲದೆಯೆ...ಕಂಪ್ಯೂಟಿಂಗ್ ಡಿವೈಸ್ ಸಹಾಯದಿಂದ...ಬರೀ ಕೈಬೆರಳುಗಳ ಮೂಲಕ ನಾವು ಡಿಜಿಟಲ್ ಪ್ರಪಂಚದ ಒಳ ಹೋಗುವುದಕ್ಕೆ ಅವೆಷ್ಟೊಂದು ರೀತಿಯ ಸಾಧನಗಳನ್ನ... ಕಳೆದ 8 ವರ್ಷಗಳ ತಮ್ಮ ಸಂಶೋಧನೆಗಳಿಂದ ಸಾಕಾರ ಮಾಡಿ "ಸಿಕ್ಸ್ತ್ ಸೆನ್ಸ್ ಡಿವೈಸ್" ತಯ್ಯಾರು ಮಾಡಿರುವ ಮಿಸ್ಟ್ರಿ ಮ್ಯಾನ್ - ಪ್ರಣವ್ ಮಿಸ್ಟ್ರಿ.
ಈ ನವೆಂಬರ್ ಶುರುವಿನಲ್ಲಿ ಮೈಸೂರಿನಲ್ಲಿ ನಡೆದ ಇಂಡಿಯಾ TED ಸಮ್ಮೇಳನದಲ್ಲಿ ಪ್ರಣವ್ ಮಿಸ್ಟ್ರಿ ಕೊಟ್ಟ ___LINK_OPEN_href="http://www.ted.com/talks/pranav_mistry_the_thrilling_potential_of_sixthsense_technology.html" target="_blank"___ಟಾಕಿನ ವೀಡಿಯೋ ಇಲ್ಲಿದೆ ನೋಡಿ. ಸಕತ್ ಕುತೂಹಲಕಾರಿಯಾಗಿದೆ!! :)
MIT Media Labನಲ್ಲಿ PhD ಮಾಡುತ್ತಿರುವ ___LINK_OPEN_href="http://www.ted.com/speakers/pranav_mistry.html" target="_blank"___ಪ್ರಣವ್ ಮಿಸ್ಟ್ರಿ ಗುಜರಾತಿನ ’ಪಾಲನ್ಪುರ್’ನವರು. ಹಾಗೇ ಇಷ್ಟೊಂದು ಅಚ್ಚರಿ ಮೂಡಿಸಿರುವ ಈ "ಸಿಕ್ಸ್ತ್ ಸೆನ್ಸ್ ಡಿವೈಸ್ನ" ಹಿಂದಿರುವ ತಂತ್ರಾಂಶವನ್ನ ಓಪನ್ ಸೋರ್ಸ್ ಮಾಡುವರೆಂದು ಕೂಡ ಹೇಳಿದ್ದಾರೆ!!! :)
TED-Ideas Worth Spreading ಬಗ್ಗೆ ಹೆಚ್ಚಿನ ವಿವರಗಳಿಗೆ ___LINK_OPEN_href="http://www.ted.com/" target="_blank"___ಇಲ್ಲಿ ನೋಡಿ.
ಧನ್ಯವಾದಗಳು
-ಸವಿತ
ಪ್ರತಿಕ್ರಿಯೆ (1)