ಅಣೋರಣೀಯ, ಮಹತೋ ಮಹೀಯ ಅವ
ಜಗವನ್ನು ಸೃಷ್ಟಿಸಿದ ಆ ದೇವರು.
ಅಣುವಿಂದ ಬಾಂಬ್ ಮಾಡಿ ಮಹತ್ಸಾಧನೆಯೆಂದು
ಬಿಂಬಿಸುತ್ತಿದ್ದಾರೆ ಹುಲುಮಾನವರು!
ಅಣುಗಳೊಳಗಿಂದೊಂದು ಮಹಾಸ್ಫೋಟವಗೈದು
ಕೆಲವು ವಿಪರೀತಜ್ಞ ವಿಜ್ಞಾನಿಗಳು
ವಿಶ್ವಸೃಷ್ಟಿಯ ಬಗೆಯ ಅರಿಯಲಿದ್ದಾರಂತೆ
ಜಗಕಪಾಯವನೊಡ್ಡಿ ಆ ಭ್ರಮೆಯೊಳು!
ಅಣುಶಕ್ತಿಯಿಂದ ವಿದ್ಯುತ್ತನ್ನು ಪಡೆವಂಥ
ಕೈಗಾರಿಕೆಗೆ ತುತ್ತಾಯ್ತು ಕೈಗಾ.
ಅಲ್ಲಿಂದು ಕುಡಿವ ನೀರೊಳಗೆ ವಿಕಿರಣ ಬಾಧೆ!
ಭದ್ರತೆಯ ಗ್ಯಾರಂಟಿ ಇಲ್ಲ ಈಗ!
ಅಣುಬಾಂಬು, ಅಣು ವಿದ್ಯುತ್, ಬಿಗ್ ಬ್ಯಾಂಗು, ಕೈಗಾ...
ಕೊನೆಗಿವೆಲ್ಲವು ನಮ್ಮ ಕೈಗಾ? ಕಾಲಿಗಾ?
ಅಥವಾ......ತಲೆಗಾ?!
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಪಿಬಿಎಸ್ : ಅಚ್ಚರಿ ಕಾದಿದೆ
ಬಿಲ್ ಗೇಟ್ಸ್ ಮತ್ತು ಗಿಲ್ ಬೇಟ್ಸ್
’ಸಂಪದ ಸಮ್ಮಿಲನ # 4’ ಕುರಿತು
ಕಗ್ಗ ದರ್ಶನ – 50 (2)
ಕಗ್ಗ ದರ್ಶನ – 50 (1)
ಕಗ್ಗ ದರ್ಶನ – 49 (2)
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!