’ಕರ್ನಾಟಕ ಜ್ಞಾನ ಆಯೋಗದ ಹೆಮ್ಮೆಯ ಪ್ರಯತ್ನ’ವಾಗಿರುವ ’ಕಣಜ’ ಕನ್ನಡ ವಿದ್ಯುನ್ಮಾನ ಜ್ಞಾನಕೋಶ ಸುಂದರವಾಗಿ ಹೊರಹೊಮ್ಮಿದೆ. ಜ್ಞಾನಪೀಠ ಪುರಸ್ಕಾರಾನ್ವಿತರೂ ಸೇರಿದಂತೆ ಹನ್ನೆರಡು ಮಂದಿ ಹಿರಿಯ ಕನ್ನಡ ಸಾಹಿತಿಗಳ ಕಿರುಪರಿಚಯದ ಸತ್ತ್ವಯುತ ಕಾಳುಗಳೊಂದಿಗೆ ಕಣಜ ತೆರೆದುಕೊಂಡಿದೆ. ಕಣಜವನ್ನು ಗಟ್ಟಿಕಾಳುಗಳಿಂದ ತುಂಬುತ್ತಹೋಗುವ ಕೆಲಸವನ್ನು ಕನ್ನಡಿಗರೆಲ್ಲ ಮಾಡಬೇಕಿದೆ. ಮೊಗೆದಷ್ಟೂ ಸಿಕ್ಕುವ, ದಕ್ಕುವ ಉತ್ತಮ ಧಾನ್ಯರಾಶಿಯ ಅಕ್ಷಯಕಣಜ ಇದಾಗಲೆಂದು ಕನ್ನಡಿಗರೆಲ್ಲರ ಪರವಾಗಿ ಹಾರೈಸುತ್ತೇನೆ.