ವಿಷ್ಣುವರ್ಧನ್ ನಮ್ಮನ್ನು ಬಿಟ್ಟು ಅಗಲಿದ್ದಾರೆ ಅ೦ದರೆ ಮನಸ್ಸಿಗೆ ತು೦ಬ ಘಾಸಿಯಾಗುತ್ತದೆ. ಒಬ್ಬ ನಾಯಕನಾಗಿ ಸಿ೦ಹ ಮರೆಯಾಗಿದೆ. ಇನ್ನೇನನ್ನು ಹೇಳೋದಿಕ್ಕೆ ತೋಚದು. ಕನ್ನಡದ ಮತ್ತೂ೦ದು ಗರಿ ಕಳಚಿದೆ. ನೆನ್ನೆ ಗಾನ ಗಾರುಡಿಗ ಇ೦ದು ಅಭಿನವ ಭಾರ್ಗವ ಎ೦ತ ದುರ್ಗತಿ ನಮ್ಮ ನಾಡಿಗೆ. ಛೇ....ಕನ್ನಡಿಗರಿಗೆ ಈ ವರ್ಷ ಬಲು ಭಾರ.
ಮೈಸೂರಿನಲ್ಲಿದ್ದ ವಿಷ್ಣುವರ್ಧನ್ರಿಗೆ ಬುಧವಾರ ಮುಂಜಾನೆ 2.30ರ ಹೊತ್ತಿಗೆ ಎದೆನೋವು ತೀವ್ರಗೊಂಡ ಹಿನ್ನೆಲೆಯಲ್ಲಿ ವಿಕ್ರಮ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಆಸ್ಪತ್ರೆ ಮುಟ್ಟುವ ಮೊದಲೇ ಅವರು ಸುಮಾರು 3.00 ಗಂಟೆ ಹೊತ್ತಿಗೆ ಇಹಲೋಕ ತ್ಯಜಿಸಿದ್ದಾರೆ.
ಪ್ರತಿಕ್ರಿಯೆ (5)