ಜ್ಞಾನಕ್ಕೆ ಮಿತಿಯಲ್ಲದೆ ಅಜ್ಞಾನಕ್ಕೆ ಮಿತಿಯುಂಟೆ? ಪೆಱರ ಮಚ್ಚರಕ್ಕೆ ಮಿತಿಯುಂಟಲ್ಲದೆ ಗುರುಕರುಣಕ್ಕೆ ಮಿತಿಯುಂಟೆ?

ನಮ್ಮ ಜ್ಞಾನಕ್ಕೆ ಮಿತಿಯುಂಟು. ಅಜ್ಞಾನಕ್ಕೆ ಪಾರವೇ ಇಲ್ಲ. ಹಾಗೆಯೇ ನಮ್ಮನ್ನು ಕಂಡು ಹೊಟ್ಟೆಕಿಚ್ಚು ಪಡುವ ಜನರ ಅಸೂಯೆಗೆ ಮಿತಿಯುಂಟು. ಆದರೆ ನಮ್ಮನ್ನುದ್ಧರಿಸುವ ಸಂಕಲ್ಪ ತೊಟ್ಟ ಗುರುವಿನ ಕರುಣೆ ಅಮಿತವಾದದ್ದು. ಅಂತಹ ಗುರುವಿನ ಕರುಣೆಗೆ ಇತಿಮಿತಿಯೆಂಬುದಿಲ್ಲ.