ಇತ್ತೀಚೆಗೆ ಒಂದು ಪ್ರವಚನದಲ್ಲಿ ಕೇಳಿದ್ದೇನೆಂದರೆ ನಾವುಗಳು ನವ ಜನಾಂಗಕ್ಕೆ ಶಿಸ್ತು ಕಲಿಸುತ್ತಿಲ್ಲ ಅಂತ. ಅವರು ಕೊಟ್ಟ ಉದಾಹರಣೆ ಮದುವೆಮನೆಗಳಲ್ಲಿ ನಿಶ್ಶಬ್ದದಿಂದ ಕೂತು ನಡೆಯುವ ವಿಧಿಗಳನ್ನು ಯಾರೂ ಗಮನಿಸುವುದಿಲ್ಲ. ಮದುವೆಮನೆ ಒಂದು ಸಂತೆಯಂತೆ ಕಾಣಿಸುತ್ತದೆ ಎಂದು. ಅಲ್ಲಿನ ಕಾರ್ಯಕ್ರಮದಲ್ಲಿ ತಿಳಿಯಬೇಕಾದದ್ದು ಬಹಳ. ಆದರೆ ಜನಗಳು ಮದುವೆಮನೆಗೆ ಹೋಗುವುದು ಊಟಕ್ಕೋ, ಯಾರನ್ನೋ ಭೇಟಿಯಾಗುವುದಕ್ಕೋ, ಇಸ್ಪೀಟ್ಸಭೆಗೋ, ಹರಟೆಕೊಚ್ಚುವುದಕ್ಕೋ, ವಾರಿಗೆಗೆ ಹುಡುಕುವುದಕ್ಕೋ ಆಗಿಹೋಗುತ್ತಲಿದೆ.
ಇದೇ ಸನ್ನಿವೇಷ ವೈಕುಂಠ ಸಮಾರಾಧನಗಳಲ್ಲೂ ಕೂಡ. ವೇದಘೋಷ ನಡೆಯುತ್ತಿದ್ದಾಗ ಗಿಜಿಗಿಜಿ ಸದ್ದು. ಅಂತಹ ಒಂದುಕಡೆ, ಪುರೋಹಿತರು ಕ್ಲೇಶದಿಂದ, ನಿಶಬ್ದವಿದ್ದರೆ ಮುಂದುವರಿಸುವುದಾಗಿ ಎಚ್ಚರಿಕೆ ಕೊಟ್ಟರು. ಇದು ನಾವು ಹೇಗೆ ತಪ್ಪಾಗಿ ಬದಲಾಗುತ್ತಿದ್ದೇವೆ ಅಂತ ತೋರಿಸುತ್ತದೆ.
___LINK_OPEN_href="http://www.elistmania.com/juice/10_things_not_to_say_at_wedding.aspx" target="_blank"___ಇಲ್ಲಿ ಮದುವೆಮನೆಗಳಲ್ಲಿ ಏನು ಮಾಡಬೇಡಿರೆಂದು ಹೇಳಿರುತ್ತಾರೆ. ಇದು ಪಾಚಾತ್ಯರಿಗಾಗಿಯಾದರೂ ಕೆಲವು ನಮಗೂ ಅನ್ವಯಿಸುತ್ತದೆ. ಕೊಂಚ ಗಮನ ಕೊಡೋಣ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (3)