ಮಾಜಿ ಪ್ರಧಾನಿ ದೇವೇಗೌಡರಿಗೆ ಇತ್ತೀಚೆಗೆ ಅದೇಕೋ ’ಬ್ಲಡಿ ಬಾಸ್ಟರ್ಡ್’ ಎಂಬ ಪ್ರಶಂಸಾ ಪದದ ಬಳಕೆಯು ಅಚ್ಚುಮೆಚ್ಚಾದಂತೆ ಕಂಡುಬರುತ್ತಿದೆ. ಈ ರಾಜ್ಯದ ಮುಖ್ಯಮಂತ್ರಿಗೆ, ಅಡ್ವೊಕೇಟ್ ಜನರಲ್ ಅವರಿಗೆ, ಹೀಗೆ ಎಂಥೆಂಥವರಿಗೆಲ್ಲ ಗೌಡರು ಆ ಪ್ರಶಂಸಾ ಪದವನ್ನು ಲಗತ್ತಿಸುತ್ತಿರುವುದನ್ನು ಗಮನಿಸಿದರೆ ಅವರಿಗದು ಅಚ್ಚುಮೆಚ್ಚೋ ಅಥವಾ ಹುಚ್ಚೋ ಎಂಬ ಸಂಶಯ ಬರದಿರದು. ಅದೇನೇ ಇರಲಿ, ದೇವೇಗೌಡರ ಬಳಕೆಯ ಅನುಕೂಲಕ್ಕಾಗಿ ಅವರಿಗೆ ’ಬ್ಲಡಿ ಬಾಸ್ಟರ್ಡ್’ ಪ್ರಶಂಸಾ ಪದದ ಹೂರಣವನ್ನಿಲ್ಲಿ ನೀಡುತ್ತಿದ್ದೇನೆ. ದಯೆಯಿಟ್ಟು ಅವಗಾಹಿಸುವುದು.
’ಬಾಸ್ಟರ್ಡ್’ ಎಂಬ ಪದಕ್ಕೆ ’ವಿವಾಹೇತರ ಸಂಬಂಧದಿಂದ ಹುಟ್ಟಿದ ವ್ಯಕ್ತಿ’, ’ಬೆರಕೆ ಜನಾಂಗದವ’, ’ಅದೃಷ್ಟಹೀನ’, ’ದರಿದ್ರಮುಂಡೇದು’ ಎಂಬೆಲ್ಲ ಅರ್ಥಗಳಿವೆ. ’ಬ್ಲಡಿ’ ಎಂಬ ಪದಕ್ಕೆ ’ರಕ್ತಸದೃಶ’, ’ರಕ್ತಮಯ’, ’ಕಡು ಕ್ರೂರ’, ’ಅನಿಷ್ಟ’ ಮೊದಲಾದ ಅರ್ಥಗಳಿವೆ. ಈ ಅರ್ಥಗಳ ಬೆಳಕಿನಲ್ಲಿ ನಾವೀಗ ದೇವೇಗೌಡರ ’ಬ್ಲಡಿ ಬಾಸ್ಟರ್ಡ್’ ಪದಬಳಕೆಯ ಔಚಿತ್ಯವನ್ನು ಒರೆಗಲ್ಲಿಗೆ ಹಚ್ಚೋಣ.
ಶಾಸಕರನ್ನು ಸೆಳೆದುಕೊಂಡು ಬಂಡೆದ್ದು ಸರ್ಕಾರವನ್ನು ಉರುಳಿಸಿ ಯಾರಾದರೂ ಮುಖ್ಯಮಂತ್ರಿಯಾದರೆ ಅಂಥವರ ಸರ್ಕಾರ ಒಂಥರಾ ’ವಿವಾಹೇತರ ಸಂಬಂಧದಿಂದ ಹುಟ್ಟಿದ ಸರ್ಕಾರ’.
ಕೊಟ್ಟ ಮಾತಿಗೆ ತಕ್ಕಂತೆ ಅಧಿಕಾರವನ್ನು ಹಸ್ತಾಂತರ ಮಾಡದಿದ್ದರೆ ಅಂಥ ವ್ಯಕ್ತಿ ಒಂಥರಾ ’ಬೆರಕೆ.....’
ಖ’ರೇವನ್’ದ್ರು (ಅರ್ಥಾತ್ ನಿಜವಾಗಿಯೂ) ಶತಪ್ರಯತ್ನ ಮಾಡಿದರೂ ಮುಖ್ಯಮಂತ್ರಿಯ ಪದವಿ ಸಿಗದಿದ್ದರೆ ಆ ವ್ಯಕ್ತಿ ಖ’ರೇವನ್’ದ್ರು ’ಅದೃಷ್ಟಹೀನ’.
ವಿಷಯಜ್ಞಾನವಿಲ್ಲದೆ ಏನೇನೋ ಮಾತಾಡುವವನನ್ನು ಜನರು ಖ’ರೇವನ್’ದ್ರು, ’ದರಿದ್ರಮುಂಡೇದು’ ಅನ್ನುತ್ತಾರೆ.
ಜನರನ್ನು ಕೆರಳಿಸುವ ಮಾತುಗಳನ್ನು ’ರಕ್ತಸದೃಶ’, ’ರಕ್ತಮಯ’ ಎನ್ನಬಹುದು.
ರಾಮಕೃಷ್ಣ ಹೆಗಡೆಯವರಿಂದ ಮೊದಲ್ಗೊಂಡು ಸಿದ್ಧರಾಮಯ್ಯನವರವರೆಗೆ ತಮ್ಮವರನ್ನೇ ಒಬ್ಬೊಬ್ಬರನ್ನಾಗಿ ತುಳಿಯುವ ವ್ಯಕ್ತಿಯು ’ಕಡು ಕ್ರೂರ’ನೆನ್ನಿಸಿಕೊಳ್ಳುತ್ತಾನೆ.
ಮಾತಿನಲ್ಲಾಗಲೀ ಅಥವಾ ನನ್ನಹಾಗೆ ಬರವಣಿಗೆಯಲ್ಲಾಗಲೀ ಸದಾಕಾಲ ಎಲ್ಲರನ್ನೂ ಬೈಯುತ್ತಲೇ ಇರುವವನನ್ನು ’ಇವನೆಲ್ಲೋ ಅನಿಷ್ಟ’ ಎಂದು ಜನರು ಟೀಕಿಸುತ್ತಾರೆ.
ಮಾನ್ಯ ದೇವೇಗೌಡರು ಈ ಎಲ್ಲ ಅರ್ಥವಿವರಗಳನ್ನೂ ಅರಿತು, ಅನಂತರ ಸದರಿ ’ಬ್ಲಡಿ ಬಾಸ್ಟರ್ಡ್’ ಪ್ರಶಂಸಾ ಪದವನ್ನು ಬಳಸುವುದೋ ಬಿಡುವುದೋ ನಿರ್ಧರಿಸುವುದು ಒಳ್ಳೆಯದು. ಅಲ್ಲಿಗೂ ಅವರು ’ಬ್ಲಡಿ ಬಾಸ್ಟರ್ಡ್’ ಬಳಕೆಯನ್ನು ಮುಂದುವರಿಸಿದರೆಂದರೆ, ಆಗ ’ಬಿ.ಬಿ.’ ಎಂಬ ಅಕ್ಷರಯುಗಳವು ’ಬಿಗ್ ಬಿ’ ಮತ್ತು ’ಬಿಟಿ ಬದನೆ’ ಜೊತೆಗೆ ’ಬ್ಲಡಿ ಬಾಸ್ಟರ್ಡ್’ ಎಂಬರ್ಥದಲ್ಲೂ ಪ್ರಸಿದ್ಧಿ ಹೊಂದುವುದು. ದೇವೇಗೌಡರ ಹೆಸರಿನ ಹಿಂದಿರುವ ’ಮಾಜಿ ಪ್ರಧಾನಿ’ ಎಂಬ ಅಂಕಿತದ ಸ್ಥಾನವನ್ನು ’ಬಿ.ಬಿ.’ ಆಕ್ರಮಿಸಿ ದೇವೇಗೌಡರು ಜನಮನದಲ್ಲಿ ಹೊಸ ಅಂಕಿತದಿಂದ ಅಜರಾಮರರಾದರೂ ಆಶ್ಚರ್ಯವಿಲ್ಲ. ಆಯ್ಕೆಯು ಗೌಡರಿಗೇ ಬಿಟ್ಟದ್ದು.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಪಿಬಿಎಸ್ : ಅಚ್ಚರಿ ಕಾದಿದೆ
ಬಿಲ್ ಗೇಟ್ಸ್ ಮತ್ತು ಗಿಲ್ ಬೇಟ್ಸ್
’ಸಂಪದ ಸಮ್ಮಿಲನ # 4’ ಕುರಿತು
ಶ್ರೀಸಾಮಾನ್ಯನ VIP ಕಥೆಗಳು- ಚಿನ್ನ, ಬೆಳ್ಳಿ, ಈರುಳ್ಳಿ
ಅನುಭವ ಮತ್ತು ಪರಿಪಕ್ವತೆ
ಸೊಂಟದ ಮಹಿಮೆ
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (5)