ಪ್ರಿಯ ಮಿತ್ರರೇ,

 

ನೀವು ಕರ್ನಾಟಕದ (ದೇಶದ್ದು ಮತ್ತೆ ನೋಡೋಣ) ರಾಜಕೀಯ ಸ್ಥಿತಿಯನ್ನು ನೋಡಿ ಮರುಗಿದ್ದೀರಾ? ಅಸಹನೆಯಿಂದ ಶಪಿಸಿದ್ದೀರಾ? ಅಸಹಾಯಕತೆಯಿಂದ ಸಿಟ್ಟಿಗೆದ್ದಿದ್ದಿರೆ? ಏನಾದರೂ ಮಾಡಬೇಕು ಅನಿಸುತ್ತಿದೆಯೇ? ನಿಮ್ಮ ಉತ್ತರ "ಹೌದು" ಎಂದಾದರೆ...ನಾವ್ಯಾಕೆ ಹೊಸ ಪರ್ಯಾಯ ಶಕ್ತಿಯನ್ನು ರೂಪಿಸಬಾರದು? ಯಾವುದೇ ಜಾತಿ- "ism" ಗಳನ್ನೂ ನೋಡದ, ಬರಿಯ ಅಭಿವೃದ್ಧಿ-ಸಮಾನ ಜೀವನವನ್ನು ನೀಡುವ (ಕಮ್ಯುನಿಸಂ ಅಲ್ಲ ನೆನಪಿರಲಿ) ಯುವ ಪಕ್ಷವೊಂದು ಉದಯಿಸಬಾರದೇಕೆ? ರಾಜಕೀಯದಲ್ಲಿ ಕೆಟ್ಟ ಶಕ್ತಿಗಳೇ ಇರುವುದು ಎಂದು ಶಪಿಸುತ್ತ, ಅವರನ್ನೇ ಆಟವಾಡಲು ಬಿಡುವ ಬದಲು ಒಳ್ಳೆಯ ಶಕ್ತಿಗಳೇಕೆ ಪ್ರವೇಶಿಸಬಾರದು? ಈ ದಾರಿ ಸುಲಭವಲ್ಲ, ಗೊತ್ತಿದೆ. ಪ್ರಯತ್ನ ಮಾಡದೆ ಮಾತಾಡುವ ಬದಲು, ಪ್ರಯತ್ನಿಸಿ ನೋಡೋಣ ಎಂಬ ಆಶಯ ನನ್ನದು.

 

ನಿಜವಾಗಿ ಪರಿವರ್ತನೆಯನ್ನು ತರುವ ಮನಸ್ಸಿದ್ದಲ್ಲಿ, ಸಂಘಟನೆ ಮಾಡುವ ಉತ್ಸಾಹವಿದ್ದಲ್ಲಿ, ನನಗೊಂದು ಮಿಂಚಂಚೆ ಕಳಿಸುತ್ತೀರಾ? drprasannabhat(at)gmail(dot)com ಇದು ನನ್ನ ಇ-ವಿಳಾಸ.

 

ಮಾತಾಡಲು ಮಾತ್ರ ಸಂತಸ, ಕಾರ್ಯಾಚರಣೆಗೆ ತರಲು ಮನಸ್ಸಿಲ್ಲ ಎಂದಾದರೆ, ಈ proposal ನಿಮಗಲ್ಲ...ನಮಸ್ಕಾರ.